Covaxin IIIrd Phase Trials - ಇನ್ಯಾಕೆ ಭಯ, 3ನೇ ಹಂತದ ಟ್ರಯಲ್ ನಲ್ಲಿ ಶೇ.81 ರಷ್ಟು ಪಾಸಾದ ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್

Covaxin IIIrd Phase Trials - ಕೋವಾಕ್ಸಿನ್ ಸಂಪೂರ್ಣ ಸ್ಥಳೀಯ ಲಸಿಕೆಯಾಗಿದ್ದು, ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಸಹಯೋಗದೊಂದಿಗೆ ಭಾರತ್ ಬಯೋಟೆಕ್ (Bharat Biotech) ಅಭಿವೃದ್ಧಿಪಡಿಸಿದೆ.

Written by - Nitin Tabib | Last Updated : Mar 3, 2021, 07:37 PM IST
  • ಇನ್ಮುಂದೆ ವ್ಬ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂಜರಿಯಬೇಡಿ.
  • 3ನೇ ಹಂತದ ಪರೀಕ್ಷೆಯಲ್ಲಿ ಶೇ.81 ರಷ್ಟು ಪರಿಣಾಮಕಾರಿ ಸಾಬೀತಾಗಿದೆ ಕೊವ್ಯಾಕ್ಸಿನ್.
  • ICMR ಹಾಗೂ NIV ಸಹಭಾಗಿತ್ವದಲ್ಲಿ ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್ ಅಭಿವೃದ್ಧಿಗೊಳಿಸಿದ ಭಾರತ್ ಬಯೋಟೆಕ್
Covaxin IIIrd Phase Trials - ಇನ್ಯಾಕೆ ಭಯ, 3ನೇ ಹಂತದ ಟ್ರಯಲ್ ನಲ್ಲಿ ಶೇ.81 ರಷ್ಟು ಪಾಸಾದ ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್ title=
Covaxin IIIrd Phase Trials (File Photo)

ನವದೆಹಲಿ:  Covaxin IIIrd Phase Trials - ಆಂಟಿ-ಕರೋನಾ ವೈರಸ್ (Corona Vaccine) ಲಸಿಕೆಯಾಗಿರುವ ಕೊವಾಕ್ಸಿನ್‌ನ (Covaxin) ಮೂರನೇ ಹಂತದ ಪ್ರಯೋಗದ ಫಲಿತಾಂಶಗಳು ಹೊರಬಂದಿವೆ. ಮೂರನೇ ಹಂತದ ಪ್ರಯೋಗದ ಫಲಿತಾಂಶಗಳಲ್ಲಿ ಈ ಲಸಿಕೆ 81% ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ  ದೇಶದ 25,800 ಜನರ ಮೇಲೆ ಈ ಪ್ರಯೋಗಗಳನ್ನು ನಡೆಸಲಾಗಿದೆ ಎಂದು ಕೊವ್ಯಾಕ್ಸಿನ್ ತಯಾರಕ ಕಂಪನಿ ಭಾರತ್ ಬಯೋಟೆಕ್ ಹೇಳಿದೆ. ಇದು ಐಸಿಎಂಆರ್ ಸಹಭಾಗಿತ್ವದಲ್ಲಿ ನಡೆಸಲಾಗಿರುವ ಅತಿದೊಡ್ಡ ಪ್ರಯೋಗ ಇದಾಗಿದೆ. ಈ ಟ್ರಯಲ್ ಕುರಿತು ಹೊರಬಂದ ಮಾಹಿತಿ ಪ್ರಕಾರ ಕೋವಿಡ್ -19 (Covid-19 Vaccine) ಸೋಂಕಿಗೆ ಒಳಗಾಗದವರಲ್ಲಿ ಲಸಿಕೆ ಶೇಕಡಾ 81 ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ.

ಹೆಚ್ಚಿನ ಡೇಟಾವನ್ನು ಸಂಗ್ರಹಿಸಲು ಮತ್ತು ಲಸಿಕೆಯ ಪರಿಣಾಮಕಾರಿತ್ವವನ್ನು ತಿಳಿಯಲು, ರೋಗ ದೃಢಪಟ್ಟ 130 ಪ್ರಕರಣಗಳಲ್ಲಿ ಅಂತಿಮ ವಿಶ್ಲೇಷಣೆಗಾಗಿ ಕ್ಲಿನಿಕಲ್ ಪ್ರಯೋಗಗಳು ಮುಂದುವರೆಸಲಾಗುವುದು ಎಂದು ಕಂಪನಿ ಹೇಳಿದೆ. ದೇಶದಲ್ಲಿ ಕೋವಾಕ್ಸಿನ್ ಬಳಕೆಯ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ಜನವರಿ 16 ರಿಂದ ದೇಶದಲ್ಲಿ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭವಾಗಿದ್ದು, ಇದರಲ್ಲಿ ಫಲಾನುಭವಿಗಳಿಗೆ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆಗಳನ್ನು ಲಸಿಕೆ ನೀಡಲಾಗುತ್ತಿದೆ.

ಭಾರತದಲ್ಲಿ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಬ್ರಿಟನ್‌ ರೂಪಾಂತರಿ ಕರೋನಾ ವೈರಸ್‌ (Coronavirus) ನಿಂದ ಕೂಡ ರಕ್ಷಣೆ ಒದಗಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಕೊವಾಕ್ಸಿನ್‌ನ ವಿಮರ್ಶೆ ವರದಿ ಜನವರಿಯಲ್ಲಿ ಬಹಿರಂಗಪಡಿಸಿತ್ತು. ಬಯೋ ಆರ್‌ಎಕ್ಸಿವ್ನ  ಪ್ರಕಟಿಸಿದ್ದ ಈ ಪೂರ್ವ ಪರಿಶೀಲನಾ ವರದಿಯಲ್ಲಿ ಲಸಿಕೆಯ ಕುರಿತು ಉಲ್ಲೇಖಿಸಲಾಗಿತ್ತು.  ನ್ಯೂಯಾರ್ಕ್ನ ಲಾಭರಹಿತ ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಯಾದ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿ ಈ ವರದಿಯನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ-ಮಕ್ಕಳ Corona Vaccine ಟ್ರಯಲ್ ಗೆ ಅನುಮತಿ ಕೋರಿದ Bharat Biotech, ಮೊದಲು ದತ್ತಾಂಶ ತೋರಿಸಿ ಎಂದ ಸರ್ಕಾರ

ಕೊವ್ಯಾಕ್ಸಿನ್ ಕುರಿತು ವಿಪಕ್ಷಗಳು ನಿರಂತರ ಧ್ವನಿ ಎತ್ತುತ್ತಲೇ ಇದ್ದವು
ವರದಿಯ ಪ್ರಕಾರ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆ ಪಡೆದ 26 ಜನರಿಂದ ಪಡೆದ ರಕ್ತದ ಮೇಲೆ ರಿಡಕ್ಷನ್ ನ್ಯೂಟ್ರಲೈಸೆಶನ್ ಟೆಸ್ಟ್ ಅಂದರೆ PRNT 50 ಟೆಸ್ಟ್ ನಡೆಸಲಾಗಿದೆ. ಇದರಲ್ಲಿ ಯುಕೆ ರೂಪಾಂತರಿ ಕೊರೊನಾ ವೈರಸ್ ಹಾಗೂ ಇತರೆ ರೂಪಾಂತರಿಗಳ ಮೇಲೆ ಲಸಿಕೆಯ ಪರಿಣಾಮಕತ್ವದ ಪರೀಕ್ಷೆ ಕೂಡ ನಡೆಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ-ಕೊರೊನಾ ಲಸಿಕೆಯಿಂದ ತೊಂದರೆ ಆದಲ್ಲಿ ಪರಿಹಾರ ನೀಡುವುದಾಗಿ ಹೇಳಿದ ಈ ಕಂಪನಿ..!

ಬಯೋ ಆರ್‌ಎಕ್ಸಿವ್ನ ವೆಬ್ ಸೈಟ್ ಮೇಲೆ ನಡೆಸಲಾಗಿರುವ ಸಮೀಕ್ಷೆಯಲ್ಲಿ "ಬ್ರಿಟನ್ ಕೋರೋನಾ ರೂಪಾಂತರಿ ಹಾಗೂ ಹೆಟ್ರೋಲೋಗಸ್ ರೂಪಾಂತರಿ ವಿರುದ್ಧ ಹೋರಾಡುವಲ್ಲಿ ಇದು ಅಷ್ಟೇ ಪರಿಣಾಮಕಾರಿಯಾಗಿದೆ" ಎನ್ನಲಾಗಿದೆ.

ಮೂರನೇ ಹಂತದ ಪರೀಕ್ಷೆ ಪೂರ್ಣಗೊಳಿಸದೆ ಇದ್ದ ಕಾರಣ ಪ್ರತಿಪಕ್ಷಗಳು ಈ ವ್ಯಾಕ್ಸಿನ್ ನ ಪ್ರಭಾವದ ಕುರಿತು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದವು. 

ಕೊವ್ಯಾಕ್ಸಿನ್ ಒಂದು ಸಂಪೂರ್ಣ ಸ್ವದೇಶಿ ಲಸಿಕೆಯಾಗಿದ್ದು, ಇದನ್ನು ICMR ಹಾಗೂ NIV ಸಹಭಾಗಿತ್ವದಲ್ಲಿ ಹೈದರಾಬಾದ್ ಮೂಡದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ-COVID-19 vaccine: Covishield vs Covaxin, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News