Corona Vaccineಗೆ ಸಂಬಂಧಿಸಿದಂತೆ ಇಂದು ದೊಡ್ಡ ಘೋಷಣೆ ಸಾಧ್ಯತೆ
Corona Vaccine: ಔಷಧ ಮಹಾನಿರ್ದೆಶನಾಲಯ ಭಾನುವಾರ ಬೆಳಗ್ಗೆ ಸುಮಾರು 11 ಗಂಟೆಗೆ ನಡೆಸಲು ಉದ್ದೇಶಿಸಿರುವ ಪತ್ರಿಕಾಗೋಷ್ಠಿಯಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳ ಸಾರ್ವಜನಿಕ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ಇದಕ್ಕೂ ಮೊದಲು ವಿಷಯ ತಜ್ಞರ ಸಮಿತಿ ಕೇವಲ ಎರಡು ದಿನದಲ್ಲಿ ಎರಡು ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ನವದೆಹಲಿ: Corona Vaccine - ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾವೈರಸ್ ಪ್ರಕರಣಗಳ ನಡುವೆ ಭಾನುವಾರ ಕೊರೊನಾ ಲಸಿಕೆಯ ಬಗ್ಗೆ ಮಹತ್ವದ ಪ್ರಕಟಣೆ ಬರುವ ನಿರೀಕ್ಷೆ ಇದೆ. ಬೆಳಗ್ಗೆ 11 ಗಂಟೆಗೆ ಔಷಧ ಮಹಾನಿರ್ದೇಶನಾಲಯ (DCGI) ಪತ್ರಿಕಾಗೋಷ್ಠಿ ನಡೆಸಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಸಾರ್ವಜನಿಕ ತುರ್ತು ಬಳಕೆಗೆ ಅಧಿಕೃತ ಅನುಮತಿ ನೀಡುವ ನಿರೀಕ್ಷೆ ಇದೆ.
2 ವ್ಯಾಕ್ಸಿನ್ ಗಳ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್
ಇದಕ್ಕೂ ಮೊದಲು ಕೊರೊನಾ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ರಚಿಸಲಾಗಿರುವ ವಿಷಯ ತಜ್ಞರ ಸಮಿತಿ ಕಳೆದ 48 ಗಂಟೆಗಳಲ್ಲಿ ಎರಡು ವ್ಯಾಕ್ಸಿನ್ ಗಳಾಗಿರುವ ಕೋವಿಶೀಲ್ಡ್ ಹಾಗೂ ಕೊವಾಕ್ಷಿನ್ ತುರ್ತು ಬಳಕೆಗೆ ಅನುಮತಿ ನೀಡಿ, DCGI ಶಿಫಾರಸ್ಸು ಮಾಡಿದೆ.
ಇದನ್ನು ಓದಿ- Covid-19 ವಿರುದ್ಧದ ಹೋರಾಟದಲ್ಲಿ Bharat Biotech ನ Covaxin ಗೆ ಸಿಕ್ತು ಅನುಮತಿ
ಕೊವಾಕ್ಸಿನ್ ಒಂದು ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಗೊಳಿಸಿರುವ ಕೊವಾಕ್ಸಿನ್ ಒಂದು ಸಂಪೂರ್ಣ ಸ್ವದೇಶಿ ಲಸಿಕೆಯಾಗಿದೆ. ಇನ್ನೊಂದೆಡೆ ಕೋವಿಶೀಲ್ಡ್ ಅನ್ನು ಆಕ್ಸ್ಫರ್ಡ್-ಅಸ್ಟ್ರಾಜೇನಿಕಾ ಪರಸ್ಪರ ಸಹಯೋಗದಿಂದ ತಯಾರಿಸಿವೆ. ಭಾರತದಲ್ಲಿ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈ ವ್ಯಾಕ್ಸಿನ್ ಅನ್ನು ಉತ್ಪಾದಿಸುತ್ತಿದೆ.
ಇದನ್ನು ಓದಿ-Serum Institute Corona ಲಸಿಕೆಗೆ ಸರಕಾರ ಅನುಮತಿ ನೀಡಿಲ್ಲವೆ? ಇಲ್ಲಿದೆ ವಾಸ್ತವಿಕತೆ
ಎರಡೂ ವ್ಯಾಕ್ಸಿನ್ ಗಳಿಗೆ DCGI ಅನುಮತಿಯ ನಿರೀಕ್ಷೆ
ವಿಷಯ ತಜ್ಞರ ಸಮಿತಿ ಶುಕ್ರವಾರ ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮತಿ ನೀಡಿದೆ. ಆದರೆ, ಭಾರತದ ಔಷಧಿ ಮಹಾನಿರ್ದೇಶನಾಲಯ ಇದಕ್ಕೆ ಅನುಮತಿಸಬೇಕು. ಕೋವಿಶೀಲ್ಡ್ ರೀತಿಯ ಕೊವಾಕ್ಸಿನ್ ಗೂ ಕೂಡ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅಂತಿಮ ಅನುಮತಿಯ ನಿರೀಕ್ಷೆ ಇದೆ. DCGI ಅಂಗೀಕಾರದ ಬಳಿಕ ಈ ಎರಡೂ ವ್ಯಾಕಿನ್ಸ್ ಗಳ ಸಾರ್ವಜನಿವ ವಿತರಣೆ ಆರಂಭವಾಗಲಿದೆ.
ಇದನ್ನು ಓದಿ- ಮೂರನೇ ಹಂತದ ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳಿಗೆ ಡಿಸಿಜಿಐ ಅನುಮೋದನೆ
ದೇಶಾದ್ಯಂತ ಶನಿವಾರ ನಡೆದ ಅಣಕು ಲಸಿಕೆ ನೀಡಿಕೆ ಅಭಿಯಾನ
ದೇಶಾದ್ಯಂತ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಅಣಕು ಲಸಿಕೆ ನೀಡಿಕೆ ಅಭಿಯಾನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ದೆಹಲಿಯಲ್ಲಿ ನಡೆದ ಅಣಕು ಲಸಿಕೆ ನೀಡಿಕೆ ಅಭಿಯಾನದ ಮೇಲ್ವಿಚಾರಣೆ ನಡೆಸಲು ಖುದ್ದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಉಪಸ್ಥಿತರಿದ್ದರು. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಸಂಕ್ರಾಂತಿಗೂ ಮೊದಲೇ ಲಸಿಕೆ ವಿತರಣೆ ಅಭಿಯಾನ ಆರಂಭಗೊಳ್ಳಲಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.