DICGC Act: ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಅಥವಾ ಆರ್‌ಬಿಐ  (RBI) ಅದರ ಪರವಾನಗಿ ರದ್ದುಗೊಳಿಸಿದರೆ, ಗ್ರಾಹಕರು ಭಯಪಡಬೇಕಾಗಿಲ್ಲ. ಬ್ಯಾಂಕಿನ ಗ್ರಾಹಕರು ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ 90 ದಿನಗಳಲ್ಲಿ 5 ಲಕ್ಷ ರೂ. ವಿಮಾ ಮೊತ್ತ (Insurance) ಸಿಗಲಿದೆ. ಕೇಂದ್ರ ಸಚಿವ ಸಂಪುಟ ಬುಧವಾರ ನಡೆದ ಸಭೆಯಲ್ಲಿ DICGC ಕಾಯ್ದೆಯಲ್ಲಿನ ಬದಲಾವಣೆಗಳನ್ನು ಅನುಮೋದಿಸಿದೆ. ಈ ಬದಲಾವಣೆಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಕೊರೋನಾದಿಂದ ಕುಂಠಿತಗೊಂಡ ವಲಯಗಳಿಗೆ ಕೇಂದ್ರದಿಂದ 1.1 ಲಕ್ಷ ಸಾಲದ ನೆರವು


ಯಾರಿಗೆ ಸಿಗಲಿದೆ ಪರಿಹಾರ?
ಕೇಂದ್ರ ಹಣಕಾಸು ಸಚಿವಾಲಯ (Finance Ministery) ಮಾಡಿರುವ ಈ ಬದಲಾವಣೆಯ ಬಳಿಕ ಯಾವುದೇ ಓರ್ವ ಗ್ರಾಹಕನ ಹಣ ಯಾವುದೇ ಒಂದು ಕಾರಣದಿಂದ ಬಂದ್ ಆಗಿರುವ ಅಥವಾ ಲೈಸನ್ಸ್ ರದ್ದುಗೊಂಡಿರುವ ಬ್ಯಾಂಕ್ ನಲ್ಲಿ ಸಿಲುಕಿಕೊಂಡಿದ್ದರೆ, ಆ ಗ್ರಾಹಕರಿಗೆ ಇದರಿಂದ ಭಾರಿ ಪರಿಹಾರ ಸಿಗಲಿದೆ. ಈ ಮೊದಲು ವಿಮೆಯ ಮೊತ್ತವು ಒಂದು ಲಕ್ಷ ರೂಪಾಯಿಗಳಾಗಿತ್ತು ಆದರೆ 2020 ರಲ್ಲಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರಕಾರ (Modi Government) ಈ ಠೇವಣಿ ವಿಮೆಯ ಮಿತಿಯನ್ನು 5 ಪಟ್ಟು ನಿರ್ಧರಿಸಿದೆ.  ಇದರ ನಂತರ, ವಿಮೆಯ ಮೊತ್ತವನ್ನು ಪಾವತಿಸುವ ಅವಧಿಯನ್ನು ಸಹ ಇದೀಗ ನಿಗದಿಪಡಿಸಲಾಗಿದೆ.


ಇದನ್ನೂ ಓದಿ- PM Ujjwala Yojana 2021 : ಕೇಂದ್ರ ಸರ್ಕಾರದ 'ಉಚಿತ ಗ್ಯಾಸ್ ಸಂಪರ್ಕ' ಸೇವೆ : ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿ ನೋಡಿ


GST Council Meeting 2021: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 6 ಪ್ರಮುಖ ಘೋಷಣೆಗಳು ಇಲ್ಲಿವೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ