ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಮತ್ತೊಮ್ಮೆ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ (India-China Face-off) ನಡೆದಿದೆ ಎಂಬ ವರದಿಗಳನ್ನು ಭಾರತೀಯ ಸೇನೆ ತಿರಸ್ಕರಿಸಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆಯು ಹೇಳಿಕೆ ನೀಡಿದ್ದು, ಈ ಕುರಿತು ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

ಭಾರತೀಯ ಮತ್ತು ಚೀನಾದ ಸೈನಿಕರ ಘರ್ಷಣೆ ಕುರಿತು ಸೇನೆಯ ಹೇಳಿಕೆ:
ಭಾರತೀಯ ಸೇನೆಯು, 'ಮಾಧ್ಯಮ ವರದಿಯಲ್ಲಿ, ಗಾಲ್ವಾನ್ ಕಣಿವೆಯಲ್ಲಿ  (Galwan Valley) ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಮತ್ತೆ ಘರ್ಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ 2021 ರ ಮೇ ಮೊದಲ ವಾರದಲ್ಲಿ ಭಾರತ ಮತ್ತು ಚೀನಾ (India-China) ಸೈನಿಕರ ನಡುವೆ ಅಂತಹ ಯಾವುದೇ ಘರ್ಷಣೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.


ಇದನ್ನೂ ಓದಿ - Mask: ಮೈಕ್, ಸ್ಪೀಕರ್ ಹೊಂದಿರುವ ಮಾಸ್ಕ್ ವಿನ್ಯಾಸಗೊಳಿಸಿದ ಪ್ರಥಮ ವರ್ಷದ ಬಿ ಟೆಕ್ ವಿದ್ಯಾರ್ಥಿ


'ಸಾಮರಸ್ಯ ಪ್ರಕ್ರಿಯೆಯನ್ನು ಹಳಿ ತಪ್ಪಿಸುವ ಪ್ರಯತ್ನಗಳು':
ಪೂರ್ವ ಲಡಾಖ್‌ನಲ್ಲಿನ (Eastern Ladakh) ಸಮಸ್ಯೆಗಳನ್ನು ಪರಿಹರಿಸಲು ನಡೆಯುತ್ತಿರುವ ಪ್ರಕ್ರಿಯೆಯನ್ನು ಹಳಿ ತಪ್ಪಿಸಲು ಪ್ರಯತ್ನಿಸುವ ಹಿನ್ನಲೆಯಲ್ಲಿ ಇಂತಹ ವರದಿಗಳು ಪ್ರೇರಿತವಾಗಿವೆ ಎಂದು ತೋರುತ್ತದೆ ಎಂದು ಭಾರತೀಯ ಸೇನೆ ಅಭಿಪ್ರಾಯ ವ್ಯಕ್ತಪಡಿಸಿದೆ. ಇದರೊಂದಿಗೆ  ಸೇನಾಧಿಕಾರಿ ಅಥವಾ ಅಧಿಕೃತ ಮೂಲದಿಂದ ಹೇಳಿಕೆ ಬಿಡುಗಡೆಯಾಗದ ಹೊರತು ಮಾಧ್ಯಮಗಳು ಯಾವುದೇ ವರದಿಯನ್ನು ಪ್ರಕಟಿಸಬಾರದು ಎಂದು ಸೇನೆಯು ಹೇಳಿದೆ.


ಇದನ್ನೂ ಓದಿ- Cheque Payment: ಜೂನ್ 1 ರಿಂದ ಈ ಬ್ಯಾಂಕಿನ ನಿಯಮಗಳಲ್ಲಿ ಬದಲಾವಣೆ


ಸಮಸ್ಯೆಗಳ ಪರಿಹಾರಕ್ಕಾಗಿ ನಡೆಯುತ್ತಿರುವ ಪ್ರಕ್ರಿಯೆ: ಭಾರತೀಯ ಸೇನೆ
23 ಮೇ 2021 ರಂದು ಪತ್ರಿಕೆಯಲ್ಲಿ ಪ್ರಕಟವಾದ 'ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಸಣ್ಣ ಮುಖಾಮುಖಿ' ಎಂಬ ಶೀರ್ಷಿಕೆಯನ್ನು ನಾವು ಗಮನಿಸಿದ್ದೇವೆ. ಆದರೆ, ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ 2021 ರ ಮೇ ಮೊದಲ ವಾರದಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಅಂತಹ ಯಾವುದೇ ಘರ್ಷಣೆ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪೂರ್ವ ಲಡಾಕ್‌ನಲ್ಲಿನ ಸಮಸ್ಯೆಗಳ ಆರಂಭಿಕ ಪರಿಹಾರಕ್ಕಾಗಿ ಪ್ರಕ್ರಿಯೆ ನಡೆಯುತ್ತಿದೆ  ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.