ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್  ಪ್ರಕರಣದ ತೀರ್ಪು ನೀಡುತ್ತಿರುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು "ಆರೋಪಿಯು ಸಿನಿಮಾ ತಾರೆಯಾಗಿರುವುದರಿಂದ  ಜನರು ಅವರನ್ನು ಅನುಕರಿಸುತ್ತಾರೆ ಅಲ್ಲದೆ ಜಿಂಕೆಯನ್ನು ಕೊಂದಿರುವುದನ್ನು ನೋಡಿದರೆ ಅಲ್ಲಿ ಹೇರಳವಾದ ಬೇಟೆ ನಡೆದಿರುವುದು ಕಂಡುಬಂದಿರುತ್ತದೆ ಎಂದು ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ. 



COMMERCIAL BREAK
SCROLL TO CONTINUE READING

ಸಲ್ಮಾನ್ ಖಾನ್ ಜೊತೆ ಸೈಫ್ ಅಲಿಖಾನ್  ಸೊನಾಲಿ ಬೇಂದ್ರೆ,ಟಬು,ನೀಲಮ್ ಕೊಠಾರಿ ಯವರು ಈ ಪ್ರಕರಣದಲ್ಲಿ ಭಾಗಿದ್ದಾರೆ ಆದರೆ ಅವರ ವಿಚಾರವಾಗಿ ಸಮರ್ಪಕವಾದ ಸಾಕ್ಷ್ಯಾದಾರಗಳ ಕೊರತೆಯಿದೆ ಎಂದು ತಿಳಿದುಬಂದಿದೆ. 


ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯ ವಿಚಾರವಾಗಿ ಐದು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವುದರಿಂದ ಈಗ ಬಾಲಿವುಡ್ ನಲ್ಲಿ ಅವರ ಮೇಲೆ 700 ಕ್ಕೂ ಅಧಿಕ ಕೋಟಿ ರೂಪಾಯಿಗಳ ಹೂಡಿಕೆ ನಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.