ಕೋಲ್ಕತ: ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ದಿನೇದಿನೆ ರಂಗು ಹೆಚ್ಚುತ್ತಿದೆ. ಆ ಪಕ್ಷದವರು ಈ ಪಕ್ಷಕ್ಕೆ, ಈ ಪಕ್ಷದವರು ಆ ಪಕ್ಷಕ್ಕೆ ಬದಲಾವಣೆ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮುಂದಿನ ತಿಂಗಳಲ್ಲಿ ಟಿಎಂಸಿಯ 50 ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್​ ಘೋಷ್​ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಟಿಎಂಸಿ ನಾಯಕ ಮಲ್ಲಿಕ್​ ಬಾಬು ಹೇಳಿಗೆ ಪ್ರತಿಕ್ರಿಯಿಸಿದ ಅವರು, 'ಟಿಎಂಸಿ(TMC) ಅಂತ್ಯ ಸನಿಹದಲ್ಲಿದೆ. ಮುಂದಿನ ತಿಂಗಳಲ್ಲಿ 50 ಶಾಸಕರು ನಮ್ಮ ಪಕ್ಷ ಸೇರಲು ಸಿದ್ಧರಾಗಿದ್ದಾರೆ. ಆದರೆ ಟಿಎಂಸಿ ಕೈನಲ್ಲಿ ಏನೂ ಸಾಧ್ಯವಿಲ್ಲ. ಒಂದೇ ಒಂದು ಬೂತ್​ನ ಅಧ್ಯಕ್ಷನನ್ನೂ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಅವರಿಂದ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.


IAS ಹುದ್ದೆ ತ್ಯಜಿಸಿ ಬಿಜೆಪಿ ಸೇರಲಿದ್ದಾರೆ ಮತ್ತೊಬ್ಬ ಐಎಎಸ್ ಅಧಿಕಾರಿ..!


ಟಿಎಂಸಿಯ ಏಳು ಶಾಸಕರು ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದರ ಬಗ್ಗೆ ಮಾತನಾಡಿದ್ದ ಮಲ್ಲಿಕ್​ ಬಾಬು, ಬಿಜೆಪಿ ಸೇರಿರುವ ಶಾಸಕರೆಲ್ಲರೂ ಈಗ ವಾಪಾಸು ಬರಲು ಸಿದ್ಧವಾಗಿದ್ದಾರೆ. ಚುನಾವಣೆಗೆ ಮುನ್ನ, ಮೇ ತಿಂಗಳ ಆರಂಭದಲ್ಲಿ ಏಳು-ಎಂಟು ಸಂಸದರು ನಮ್ಮ ಪಕ್ಷ ಸೇರಲಿದ್ದಾರೆ ಎಂದು ಹೇಳಿದ್ದರು.


Budget 2021: ರೈತ ಸಮುದಾಯಕ್ಕೆ ಮೋದಿ ಸರ್ಕಾರದಿಂದ ಮತ್ತೊಂದು 'ಗುಡ್ ನ್ಯೂಸ್'..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ