ಲಖನೌ: ಇತ್ತೀಚೆಗಷ್ಟೇ ಸರ್ಕಾರದ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ.
ಪಕ್ಷಕ್ಕಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿರುವ ಶರ್ಮಾ ಅವರು, ಶೀಘ್ರದಲ್ಲೇ ಬಿಜೆಪಿ(BJP)ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ವಕ್ತಾರ ಚಂದ್ರ ಮೋಹನ್ ಗುರುವಾರ ತಿಳಿಸಿದ್ದಾರೆ.
Ramesh Jarkiholi: ಸಿಪಿ ಯೋಗೀಶ್ವರ್ ಪರ ಬೆಳಗಾವಿ ಸಾಹುಕಾರ್ ಬ್ಯಾಟಿಂಗ್..!
ಉತ್ತರ ಪ್ರದೇಶದ ಮಾವು ಜಿಲ್ಲೆಯ 1988 ಬ್ಯಾಚ್‌ನ ಅಧಿಕಾರಿ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾಗಿದ್ದಾರೆ. ಜತೆಗೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾ ಅವರ ಜೊತೆ ಕೆಲಸ ಮಾಡಿದ್ದರು.
BJP: ಸಚಿವ ಸ್ಥಾನ ಸಿಗದೇ ಕೊತಕೊತ ಕುದಿಯುತ್ತಿರುವವರಿಗೆ ಸಿಎಂ ಬಿಎಸ್‍ವೈ 'ಖಡಕ್ ವಾರ್ನಿಂಗ್'..!
ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ಸಮಯದಲ್ಲೇ, ಉತ್ತರ ಪ್ರದೇಶದ ವಿಧಾನಪರಿಷತ್‌ನ 12 ಸ್ಥಾನಗಳಿಗೆ ಜನವರಿ 28ರಂದು ನಡೆಯುವ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ.
Blackmail CD : ಯಾವ ಸೀಡಿಗೂ ಹೆದರಲ್ಲ..!ಭಿನ್ನರಿಗೆ BSY ಖಡಕ್ ಮೆಸೆಜ್.! ಈಗ ಸೀಡಿಯದ್ದೇ ಚರ್ಚೆ
ಜನವರಿ 18ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 'ಈ ಚುನಾವಣೆಯಲ್ಲಿ ಶರ್ಮಾ ಅವರನ್ನು ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತಿದೆಯೇ' ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚಂದ್ರಮೋಹನ್, 'ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ಬಗ್ಗೆ ಕೇಂದ್ರ ನಾಯಕರೇ ಅಂತಿಮಗೊಳಿಸುತ್ತಾರೆ' ಎಂದು ಹೇಳಿದರು.
Property tax : ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನಿರ್ಧಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ