ತೆಲಂಗಾಣ: ಕಾರಿಗೆ ಎಮ್ಮೆಗಳು ಅಡ್ಡ ಬಂದಿದ್ದಕ್ಕೆ ಜಾನುವಾರುಗಳ ಮಾಲೀಕನಿಗೆ ಜಿಲ್ಲಾಧಿಕಾರಿ ದಂಡವನ್ನು ವಿಧಿಸಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ಘಟನೆ ನಡೆದಿದೆ. ದನ ಕಾಯುವವರ ಮೇಲೆ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 


COMMERCIAL BREAK
SCROLL TO CONTINUE READING

ಗಂಪೋಣಿ ಗೂಡಿನ ಬೋಯಿನಿ ಯಾಕಯ್ಯ ಹಾಗೂ ಬೋರು ನರಸಾಪುರದ ರೈತರು ಹೈನು ಎಮ್ಮೆಗಳನ್ನು ಕಾಡಿಗೆ ತಳ್ಳುತ್ತಿದ್ದಾಗ ಜಾನುವಾರುಗಳು ಮುಳುಗು ಜಿಲ್ಲಾಧಿಕಾರಿ ಕೃಷ್ಣಾ ಆದಿತ್ಯ ಅವರ ವಾಹನಕ್ಕೆ ಅಡ್ಡವಾಗಿ ಬಂದಿದೆ. ಈ ಸಮಯದಲ್ಲಿ ಎಷ್ಟೇ ಹಾರ್ನ್ ಮಾಡಿದರೂ ಕೂಡ ಜಾನುವಾರುಗಳು ಸ್ಥಳದಿಂದ ಕದಲದೇ ಇದ್ದದ್ದನ್ನು ಕಂಡು ಸಿಟ್ಟಿಗೆದ್ದ ಜಿಲ್ಲಾಧಿಕಾರಿಗಳು ಗುಂಡು ಹಾರಿಸಿದ್ದಾರೆ. ಮಾತ್ರವಲ್ಲದೆ, ಯಾಕಯ್ಯ  ಎಂಬುವವರ ವಿರುದ್ಧ ಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.


ಇದನ್ನೂ ಓದಿ- ವೇದಿಕೆಯಲ್ಲಿ ತಂಗಿಗೆ ಮುತ್ತಿಟ್ಟ ರಾಹುಲ್ ಗಾಂಧಿ...! ಅಣ್ಣ-ತಂಗಿ ಪ್ರೀತಿಗೆ ನೆಟಿಜನ್ಸ್ ಫಿದಾ...!


ಇನ್ನು ಜಿಲ್ಲಾಧಿಕಾರಿ ಕೃಷ್ಣಾ ಆದಿತ್ಯ ಅವರ ಆದೇಶವನ್ನು ಶ್ರದ್ಧೆಯಿಂದ ಪಾಲಿಸಿರುವ ಅಧಿಕಾರಿಗಳು, ಗೋರಕ್ಷಕ ಯಾಕಯ್ಯ ಎಂಬುವವರಿಗೆ ಬರೋಬ್ಬರಿ 7500 ರೂ. ದಂಡ ವಿಧಿಸಿದ್ದಾರೆ. ಮಾತ್ರವಲ್ಲದೆ, ಈ ದಂಡವನ್ನು ಪಾವತಿಸದಿದ್ದರೆ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ- Funny Video : ವಧುವನ್ನು ಎತ್ತಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ವರ


ಸೋಮವಾರ (ಜನವರಿ 02) ನಡೆದ ಈ ವಿಚಿತ್ರ ಘಟನೆಗೆ ಸಂಬಂಧಿಸಿದಂತೆ ದನಗಳ ಮಾಲೀಕರು ಹಾಗೂ ಕಾವಲುಗಾರರು ಮಂಗಳವಾರ (ಜನವರಿ 03)  ಎಂಪಿಡಿಒ ಕಚೇರಿ ಬಳಿ ಧರಣಿ ನಡೆಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ