Funny Video : ವಧುವನ್ನು ಎತ್ತಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ವರ

Groom Bride Video: ವಧು-ವರರು ಮತ್ತು ಮದುವೆಯ ಮೆರವಣಿಗೆಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತದೆ. ಈ ಕೆಲವು ವಿಡಿಯೋಗಳು ನೋಡಿದ ನಂತರ ಗಂಟೆಗಟ್ಟಲೆ ನಗು ನಿಲ್ಲುವುದಿಲ್ಲ. 

Written by - Chetana Devarmani | Last Updated : Jan 3, 2023, 06:22 PM IST
  • ವರನು ಹೀರೋ ಆಗಬೇಕೆಂದು ಬಯಸಿದ್ದನು
  • ವಧುವನ್ನು ಎತ್ತಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ವರ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Funny Video : ವಧುವನ್ನು ಎತ್ತಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ವರ  title=

Groom Bride Video: ವಧು-ವರರು ಮತ್ತು ಮದುವೆಯ ಮೆರವಣಿಗೆಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತದೆ. ಈ ಕೆಲವು ವಿಡಿಯೋಗಳು ನೋಡಿದ ನಂತರ ಗಂಟೆಗಟ್ಟಲೆ ನಗು ನಿಲ್ಲುವುದಿಲ್ಲ. ಈ ಬಾರಿಯೂ ಅಂತಹದ್ದೇ ಒಂದು ದೃಶ್ಯ ಕಂಡು ಬಂದಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವರನು ಹೀರೋ ಆಗಬೇಕೆಂದು ಬಯಸಿದ್ದನು, ಆದರೆ ಅತಿಥಿಗಳ ಮುಂದೆ ಅವನು ಸಾಕಷ್ಟು ನಗೆಪಾಟಲಿಗೆ ಈಡಾಗಿದ್ದಾನೆ.  

ಇದನ್ನೂ ಓದಿ : Viral video: ಪ್ರಾಣಪಣಕ್ಕಿಟ್ಟು ನಾಯಿಯನ್ನು ಕಾಪಾಡಿದ ವ್ಯಕ್ತಿ, ಮೈನವಿರೇಳಿಸುತ್ತೆ ಈ ದೃಶ್ಯ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು ವರರ ನಡುವೆ ಜಯಮಾಲಾ ಕಾರ್ಯಕ್ರಮ ನಡೆಯುತ್ತಿರುವುದು ಕಂಡು ಬರುತ್ತಿದೆ. ಜಯಮಾಲಾ ಮುಗಿದ ತಕ್ಷಣ, ವರನು ತನ್ನ ವಧುವನ್ನು ಎತ್ತಲು ಪ್ರಾರಂಭಿಸುತ್ತಾನೆ. ಅವನು ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ. ಆದರೆ ಅವಳನ್ನು ಎತ್ತಿಕೊಳ್ಳಲು ಆಗುವುದಿಲ್ಲ. ಕೊನೆಗೆ ಹೇಗೋ ವಧುವನ್ನು ಎತ್ತಿಕೊಳ್ಳುತ್ತಾನೆ, ಆದರೆ ಅವಳನ್ನು ಹೊತ್ತು ಕೆಳಗೆ ಬೀಳುತ್ತಾನೆ.

 

 

ಹೀರೋ ಆಗುವ ಆಸೆಯಲ್ಲಿ ವರನೇ ತನ್ನ ಮದುವೆಯಲ್ಲೇ ಗೇಲಿ ಮಾಡಿಸಿಕೊಂಡಿದ್ದಾನೆ ಎನ್ನಬಹುದು. ಈ ಮದುವೆಗೆ ಸಂಬಂಧಿಸಿದ ವಿಡಿಯೋವನ್ನು @HasnaZarooriHai ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕೆಲವು ಸೆಕೆಂಡುಗಳ ಈ ವಿಡಿಯೋ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಇದನ್ನು ನೋಡಿ ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದಾರೆ. 

ಇದನ್ನೂ ಓದಿ : Bride Groom Video: ವಧುವಿನ ಪ್ರೇಮಿ ಇಷ್ಟೆಲ್ಲ ಮಾಡಿದ್ರೂ, ನೋಡುತ್ತಲೇ ಇದ್ದ ವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News