ಬುಕಿಂಗ್ ರದ್ದುಗೊಳಿಸಿದ ನಂತರ ಡಿಕೆಶಿಗೆ ಚಹಾ, ಮಿಠಾಯಿ ಪೂರೈಸಿದ ಮುಂಬೈ ಹೋಟೆಲ್
ಮೂರು ಗಂಟೆಗಳಿಗೂ ಹೆಚ್ಚು ಕಾಲ ಮರದ ಕೆಳಗೆ ಕಾಯುತ್ತಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸಿದರೂ ಬಂಡಾಯ ಶಾಸಕರು ಇರುವ ಹೋಟೆಲ್ ಅವರಿಗೆ ಆತಿಥ್ಯ ಒದಗಿಸಿದೆ.
ನವದೆಹಲಿ: ಮೂರು ಗಂಟೆಗಳಿಗೂ ಹೆಚ್ಚು ಕಾಲ ಮರದ ಕೆಳಗೆ ಕಾಯುತ್ತಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸಿದರೂ ಬಂಡಾಯ ಶಾಸಕರು ಇರುವ ಹೋಟೆಲ್ ಅವರಿಗೆ ಆತಿಥ್ಯ ಒದಗಿಸಿದೆ.
ಇಂದು ಭಿನ್ನಮತೀಯರನ್ನು ಸಮಾಧಾನಗೊಳಿಸಲು ಬೆಳಿಗ್ಗೆ ಮುಂಬೈ ತಲುಪಿದ ಶಿವಕುಮಾರ್ ಅವರಿಗೆ ಹೋಟೆಲ್ ಸಿಬ್ಬಂದಿ ನಿಯಮಿತವಾಗಿ ಚಹಾ, ಕಾಫಿ ಮತ್ತು ಮಿಠಾಯಿ ನೀಡಿದೆ. ಜೊತೆಗೆ ಅವರೊಂದಿಗೆ ಬಂದವರಿಗೆ, ಮಾಧ್ಯಮ ಮತ್ತು ಪೊಲೀಸ್ ಸಿಬ್ಬಂದಿಗೆ ಕೂಡ ಆಹಾರವನ್ನು ನೀಡಲಾಗಿದೆ. ಡಿಕೆಶಿ ಎಎನ್‌ಐ ಜೊತೆ ಮಾತನಾಡುವಾಗ ಬಿಸಿ ಪಾನೀಯವನ್ನು ಕುಡಿಯುತ್ತಿದ್ದರು.ಆದರೆ ಇದಕ್ಕೆ ಡಿಕೆಶಿ ಹಣವನ್ನು ಬರಿಸಿದ್ದಾರೆಯೇ ಅಥವಾ ರಿನಸೈನ್ಸ್ ಹೋಟೆಲ್ ಸೌಜನ್ಯಕ್ಕಾಗಿ ನೀಡಿದೆಯೇ ಎನ್ನುವುದು ಇದುವರೆಗೆ ಸ್ಪಷ್ಟವಾಗಿಲ್ಲ.
ಇಂದು ಬೆಳಿಗ್ಗೆ ತುರ್ತುಸ್ಥಿತಿ ಉಲ್ಲೇಖಿ ಅವರ ಬುಕಿಂಗ್ ನ್ನು ಹೋಟೆಲ್ ರದ್ದುಗೊಳಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಅವರು ಈ ಸೌಲಭ್ಯವನ್ನು ಇಷ್ಟಪಟ್ಟಿದ್ದಾಗಿ ಹೇಳಿದ್ದಲ್ಲದೆ ತಮ್ಮಂತಹ ಗ್ರಾಹಕರ ಬಗ್ಗೆ ಹೆಮ್ಮೆ ಪಡಬೇಕು ಎಂದು ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ನ 10 ಭಿನ್ನಮತೀಯ ಶಾಸಕರು ಪ್ರಸ್ತುತ ಈ ಹೋಟೆಲ್ ನಲ್ಲಿ ತಂಗಿದ್ದಾರೆ. ಆದರೆ ಅವರು ಶಿವಕುಮಾರ್ ಅವರನ್ನು ಭೇಟಿ ಮಾಡದಿರಲು ಇಚ್ಚಿಸಿದ್ದಾರೆ ಎನ್ನಲಾಗಿದೆ.
ಬಂಡಾಯ ಶಾಸಕರು ಶನಿವಾರ ಮುಂಬಯಿಯ ಸೋಫಿಟೆಲ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು, ನಂತರ ಸೋಮವಾರದಂದು ರಿನಸೈನ್ಸ್ ಹೋಟೆಲ್‌ಗೆ ತೆರಳಿದ್ದರು.ಕಳೆದ ವಾರ ರಾಜ್ಯ ವಿಧಾನಸಭೆಯ ಸದಸ್ಯತ್ವದಿಂದ 10 ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿ (ಎಸ್) ಸರ್ಕಾರ ಬಿಕ್ಕಟ್ಟಿಗೆ ಸಿಲುಕಿತು.