ನವದೆಹಲಿ:ವಿಶ್ವಾದ್ಯಂತ ಕೊರೊನಾ ವೈರಸ್ ನ ಆತಂಕ ಹೆಚ್ಚಾಗುತ್ತಲೇ ಇದೆ. ಇನ್ನೊಂದೆಡೆ ಈ ಮಾರಕ ವೈರಸ್ ದಾಳಿಗೆ ಗುರಿಯಾಗುತ್ತಿರುವವರ ಸಂಖ್ಯೆಯಲ್ಲಿಯೂ ಕೂಡ ನಿರಂತರ ಏರಿಕೆಯಾಗಿತ್ತಿದೆ. ಈ ವೈರಸ್ ಹರಡುವಿಕೆಗೆ ಹಲವು ಕಾರಣಗಳಿವೆ. ಈ ಕುರಿತು ತರಹೇವಾರಿ ಮಾತುಗಳು ಹಾಗೂ ಹೇಳಿಕೆಗಳು ಕೇಳಿಬರಲಾರಂಭಿಸಿವೆ. ಇವುಗಳಲ್ಲಿ ಸೆಕ್ಸ್ ನಿಂದ ಕೊರೊನಾ ವೈರಸ್ ಸೋಂಕು ಪಸರಿಸುತ್ತದೆ ಎಂಬ ಮಾತೂ ಕೂಡ ಒಂದು.


COMMERCIAL BREAK
SCROLL TO CONTINUE READING

ಕೊರೊನಾ ಬಗ್ಗೆ WHO ನಡೆಸುತ್ತಿದೆ ಅಭಿಯಾನ
ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಪಸರುವಿಕೆಯನ್ನು ತಡೆಯಲು ಜಬರ್ದಸ್ತ್ ಜಾಗೃತಿ ಅಭಿಯಾನ ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ ನ ಹರಡುವಿಕೆ, ಲಕ್ಷಣ, ಉಪಾಯಗಳಂತಹ ಉಪಯುಕ್ತ ಮಾಹಿತಿ ಕುರಿತು ಜನಜಾಗೃತಿ ಮೂಡಿಸುತ್ತಿದೆ. ಇದಕ್ಕಾಗಿ WHO ಸೂಕ್ತ ಮಾರ್ಗಸೂಚಿಗಳನ್ನು ಸಹ ಬಿಡುಗಡೆಗೊಳಿಸಿದೆ. ಈ ಕುರಿತು ವೈದ್ಯರು ಹೇಳುವ ಪ್ರಕಾರ ಪ್ರತಿ 20 ನಿಮಿಷಗಳಿಗೊಮ್ಮೆ 15 ಸೆಕೆಂಡ್ ಗಳ ವರೆಗೆ ಕೈ ಶುಚಿಗೊಳಿಸಿದರೆ ಈ ವೈರಸ್ ಸೋಂಕಿನಿಂದ ದೂರ ಉಳಿಯಬಹುದು ಎಂದು ಹೇಳುತ್ತಾರೆ. WHO ಯಾವುದೇ ಓರ್ವ ವ್ಯಕ್ತಿಯ ಜೊತೆಗೆ ಭೇಟಿಯಾಗುವ ವೇಳೆ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಲು ಸಲಹೆ ನೀಡಿದೆ.


ಕೊರೊನಾ ಲಕ್ಷಣಗಳೇನು?
WHO ನೀಡಿರುವ ಹೇಳಿಕೆ ಪ್ರಕಾರ ಜ್ವರ, ಶೀತ, ಉಸಿರಾಟದ ತೊಂದರೆ, ಮೂಗು ಸೋರುವಿಕೆ ಹಾಗೂ ಗಂಟಲಿನಲ್ಲಿ ಕಿರಿಕಿರಿ ಇತ್ಯಾದಿ ಸಮಸ್ಯೆಗಳು ಈ ರೋಗದ ಲಕ್ಷಣಗಳಾಗಿವೆ ಎಂದು ಹೇಳಿದೆ. WHO ಅನುಸಾರ ಇಂತಹ ಪರಿಸ್ಥಿತಿಯಲ್ಲಿ ಶೀಘ್ರವೆ ವೈದ್ಯರನ್ನು ಸಂಪರ್ಕಿಸಿ ಸ್ವಯಂ ಪ್ರೇರಿತರಾಗಿ ಐಸೋಲೆಶನ್ ಗೆ ಹೋಗುವುದು ಉತ್ತಮ.