ಮತ್ತೆ ಬಿಹಾರ ಸಿಎಂ ಆಗ್ತಿರಾ ಎಂದಿದ್ದಕ್ಕೆ ನಿತೀಶ್ ಕುಮಾರ್ ಹೇಳಿದ್ದೇನು ಗೊತ್ತೇ...?
ಎನ್‌ಡಿಎ ಮುಖ್ಯಮಂತ್ರಿ ಮುಖವಾಗಿರುವ ನಿತೀಶ್ ಕುಮಾರ್ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕರಿಸುವ ದಿನಾಂಕಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಗುರುವಾರ ಹೇಳಿದ್ದಾರೆ.ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ವಿಚಾರವಾಗಿ ಎನ್‌ಡಿಎ ಮೈತ್ರಿಕೂಟ ಈ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ನವದೆಹಲಿ: ಎನ್‌ಡಿಎ ಮುಖ್ಯಮಂತ್ರಿ ಮುಖವಾಗಿರುವ ನಿತೀಶ್ ಕುಮಾರ್ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕರಿಸುವ ದಿನಾಂಕಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಗುರುವಾರ ಹೇಳಿದ್ದಾರೆ.ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ವಿಚಾರವಾಗಿ ಎನ್‌ಡಿಎ ಮೈತ್ರಿಕೂಟ ಈ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಮತ್ತೆ ನಿತೀಶ್ ಕುಮಾರ್ ಬಿಹಾರದ ಸಿಎಂ ಆಗಲಿದ್ದಾರೆಯೇ ? ಇಲ್ಲಿದೆ ಸುಶಿಲ್ ಮೋದಿ ಉತ್ತರ
'ದೀಪಾವಳಿ ಅಥವಾ ಛಾತ್ ನಂತರ ಪ್ರಮಾಣವಚನ ಸಮಾರಂಭ ಯಾವಾಗ ನಡೆಯಲಿದೆ ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಎಲ್ಲಾ ನಾಲ್ಕು ಪಕ್ಷಗಳ ಸದಸ್ಯರು ನಾಳೆ ಭೇಟಿಯಾಗಲಿದ್ದು, ನಂತರ ಎಲ್ಲಾ ಮಿತ್ರಪಕ್ಷಗಳ ಅಧಿಕೃತ ಸಭೆ ನಡೆಯಲಿದ್ದು, ನಂತರ ಸರ್ಕಾರ ರಚನೆಯ ಪ್ರಕ್ರಿಯೆ ಪ್ರಾರಂಭವಾಗಲಿದೆ ”ಎಂದು ನಿತೀಶ್ ಕುಮಾರ್ ಅವರು ಪಕ್ಷದ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಹೊಸ ಶಾಸಕರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಹೇಳಿದರು.
Bihar election results 2020: ಚಿರಾಗ್ ಪಾಸ್ವಾನ್ ಹೆಣೆದ ರಣತಂತ್ರಕ್ಕೆ ಸಿಎಂ ನಿತೀಶ್ ಕುಮಾರ್ ಗಿರಗಿಟ್ಲೆ..!
ಅವರಿಗೆ ಮತ್ತೆ ಸಿಎಂ ಆಗುತ್ತಾರೆಯೇ? ಎಂದು ಕೇಳಿದಾಗ ಇದಕ್ಕೆ ಉತ್ತರಿಸಿದ ನಿತೀಶ್ ಕುಮಾರ್''ನಾನು ಯಾವುದೇ ಹಕ್ಕು ಸಾಧಿಸಿಲ್ಲ, ನಿರ್ಧಾರವನ್ನು ಎನ್‌ಡಿಎ ತೆಗೆದುಕೊಳ್ಳುತ್ತದೆ. ನನಗೆ ಯಾವುದೇ ವೈಯಕ್ತಿಕ ಆಸಕ್ತಿ ಅಥವಾ ಆಕಾಂಕ್ಷೆಗಳು ಇಲ್ಲ. ನನ್ನ ಏಕೈಕ ಆಸಕ್ತಿ ಜನರಿಗೆ ಸೇವೆ, ಎಂದು ಹೇಳಿದರು. ನಿತಿನ್ ಕುಮಾರ್ ಅವರ ಜೆಡಿಯು 43 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 74 ಸ್ಥಾನಗಳನ್ನು ಗೆದ್ದಿದೆ. ಎನ್‌ಡಿಎಯ ಇತರ ಪಾಲುದಾರರಾದ ಜಿತಾನ್ ರಾಮ್ ಮಾಂಜಿ ಅವರ ಎಚ್‌ಎಎಂ-ಎಸ್ ಮತ್ತು ಮುಖೇಶ್ ಸಹಾನಿಯ ವಿಐಪಿ ತಲಾ ನಾಲ್ಕು ಸ್ಥಾನಗಳನ್ನು ಗೆದ್ದಿವೆ.