ನವದೆಹಲಿ:WhatsApp ತನ್ನ ಹೊಚ್ಚ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವುದಕ್ಕೆ ತುಂಬಾ ಖ್ಯಾತಿ ಪಡೆದಿದೆ. ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಮೆಸೇಜಿಂಗ್ ಆಪ್ ಗಳಲ್ಲಿ ವಾಟ್ಸ್ ಆಪ್ ಮುಂಚೂಣಿಯಲ್ಲಿದೆ. ಹೀಗಾಗಿ ತನ್ನ ಪ್ಲಾಟ್ಫಾರ್ಮ್ ಅನ್ನು ಇನ್ನಷ್ಟು ಸ್ವಾರಸ್ಯಕರವಾಗಿಸಲು ಹಾಗೂ ಕುತೂಹಲಕಾರಿಯಾಗಿಸಲು ವಾಟ್ಸ್ ಆಪ್ ನಿತ್ಯ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೆ ಇರುತ್ತದೆ.


COMMERCIAL BREAK
SCROLL TO CONTINUE READING

WhatsApp ತನ್ನ ಬೋರಿಂಗ್ ಚಾಟ್ ಗಳನ್ನು ಮತ್ತಷ್ಟು ಮಜವಾಗಿಸಲು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಲೇ ಇರುತ್ತದೆ. ವಾಟ್ಸ್ ಆಪ್ ನಲ್ಲಿ ವೈಸ್ ಮೆಸೇಜ್, ವಿಡಿಯೋ ಸಂದೇಶ ಹಾಗೂ ಇಮೋಜಿ ಕಳುಹಿಸುವ ಸೌಲಭ್ಯಗಳ ಜೊತೆಗೆ ತುಂಬಾ ಇಂಟರೆಸ್ಟಿಂಗ್ ಆಗಿರುವ GIF ಕೂಡ ನೀಡಲಾಗಿದೆ.


ಈ ವೈಶಿಷ್ಟ್ಯವನ್ನು ಬಳಸಿ ನೀವು ಆಪ್ ನಲ್ಲಿ ಯಾವುದೇ ವಿಡಿಯೋವೊಂದರ GIF ತಯಾರಿಸಿ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ. ಹಾಗಾದ್ರೆ ಬನ್ನಿ ವಾಟ್ಸ್ ಆಪ್ ನ ಈ ಹೊಸ ವೈಶಿಷ್ಟ್ಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿಯೋಣ.


ವಾಟ್ಸ್ ಆಪ್ iOS ಹಾಗೂ ಅಂಡ್ರಾಯಿಡ್ ಈ ಎರಡೂ ಪ್ಲಾಟ್ಫಾರ್ಮ್ ಮೇಲೆ GIFಗಳನ್ನು ತಯಾರಿಸಿ ಹಂಚಿಕೊಳ್ಳುವ ಸೌಲಭ್ಯ ಒದಗಿಸುತ್ತದೆ. ಅಷ್ಟೇ ಅಲ್ಲ GIF ತುಂಬಾ ಇಂಟರೆಸ್ಟಿಂಗ್ ಹಾಗೂ ಮಜಾ ನೀಡುವ ವೈಶಿಷ್ಟ್ಯವಾಗಿದ್ದು, ತುಂಬಾ ಪಾಪ್ಯುಲರ್ ಆಗುತ್ತಿದೆ. EMOJI ಹಾಗೂ ಸ್ಟಿಕರ್ ವೈಶಿಷ್ಟ್ಯಗಳಿಗೆ ಹೋಲಿಸಿದರೆ ಈ ವೈಶಿಷ್ಟ್ಯ ತುಂಬಾ ಮಜವಾಗಿದೆ. GIF ತಯಾರಿಸುವುದು ತುಂಬಾ ಸುಲಭದ ವಿಷಯವಾಗಿದ್ದು, ಇದಕ್ಕಾಗಿ ನೀವು ಹೆಚ್ಚು ಪರಿಶ್ರಮ ಪಡಬೇಕಾದ ಅವಶ್ಯಕತೆ ಇಲ್ಲ.


ಚಾಟ್ ಬಾಕ್ಸ್ ನ ಒಳಗೆ ನೀಡಲಾಗಿರುವ ಅಟ್ಯಾಚ್ ಮೆಂಟ್ ಐಕಾನ್ ಮೇಲೆ ಕ್ಲಿಕ್ಕಿಸಿ.
ಈಗ ನೀವು GIF ಆಗಿ ತಯಾರಿಸಬೇಕಾಗಿರುವ ವಿಡಿಯೋವನ್ನು ಆಯ್ಕೆ ಮಾಡಿ.
ಡೀಫಾಲ್ಟ್ ಆಗಿ ವಾಟ್ಸ್ ಅಪ್ ನಿಮಗೆ ವಿಡಿಯೋಗಳನ್ನು ಟ್ರಿಮ್ ಮಾಡುವ ಆಪ್ಶನ್ ಜೊತೆಗೆ ವಿಡಿಯೋ ಪ್ರಿವ್ಯೂ ನೋಡುವ ಅವಕಾಶ ಕೂಡ ನೀಡುತ್ತದೆ.
ಇದೀಗ GIF ಅನ್ನು ಮುಂದುವರೆಸುವ ಬಾಕ್ಸ್ ಮೇಲೆ ಟ್ಯಾಪ್ ಮಾಡಿ.
ಈಗ ವಾಟ್ಸ್ ಆಪ್ ಖುದ್ದಾಗಿ ನಿಮ್ಮ ವಿಡಿಯೋ ಅನ್ನು GIF ಆಗಿ ಪರಿವರ್ತಿಸುತ್ತದೆ.


GIF ಕಳುಹಿಸುವುದು ಹೇಗೆ?
ವಾಟ್ಸ್ ಆಪ್ ನಲ್ಲಿ ಒಂದು ಹೊಸ ಮೆಸೇಜ್ ಆರಂಭಿಸಿ.
ಚಾಟ್ ಬಾಕ್ಸ್ ನಲ್ಲಿ ನೀಡಲಾಗಿರುವ EMOJI ಐಕಾನ್ ಮೇಲೆ ಟ್ಯಾಪ್ ಮಾಡಿ.
ಇದೀಗ ಕೆಳಭಾಗಕ್ಕೆ ನೀಡಲಾಗಿರುವ GIF ಬಟನ್ ಮೇಲೆ ಕ್ಲಿಕ್ಕಿಸಿ.
ನೀವು ಕಳುಹಿಸಬೇಕಾಗಿರುವ GIF ಅನ್ನು ಆಯ್ದುಕೊಳ್ಳಿ ಹಾಗೂ ಸೆಂಡ್ ಬಟನ್ ಮೇಲೆ ಕ್ಲಿಕ್ಕಿಸಿ. ಬೇಕಾದರೆ ಇದರಲ್ಲಿ ನೀವು ಕ್ಯಾಪ್ಶನ್ ಅನ್ನು ಕೂಡ ನೀಡಬಹುದು.