Mango Panipuri Video: ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದ ಮ್ಯಾಂಗೋ ಪಾನಿಪುರಿ... ಇದೆಂಥಾ ಕಾಂಬಿನೇಷನ್ ಅಂತೀರಾ... ವೀಡಿಯೋ ನೋಡಿ!
Mango Panipuri: ಮಾವಿನ ಹಣ್ಣಿನ ಸೀಸನ್ ಈಗಾಗಲೇ ಆರಂಭಗೊಂಡಿದೆ, ಜನರು ಹಣ್ಣಿನ ರಾಜನ ವಿಲಕ್ಷಣವಾದ ಕಾಂಬಿನೇಶನ್ ಡಿಶ್ ತಯಾರಿಸಿ ಅದನ್ನು ಸೇವಿಸಲು ಆರಂಭಿಸಿದ್ದಾರೆ ಮತ್ತು ಅವುಗಳಲ್ಲಿನ ಒಂದು ರೆಸಿಪಿ ಮಾತ್ರ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
Weirdest Combination Dish: ಬೇಸಿಗೆ ಕಾಲ ಬಂತೆಂದರೆ ಮಾವಿನ ಹಣ್ಣಿಗಾಗಿ ಜನ ಕಾತರದಿಂದ ಕಾಯುತ್ತಿರುತ್ತಾರೆ, ಆದರೆ ಇದೀಗ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಕೂಡ ಸಿಗುತ್ತಿದೆ. ಬಳಿಕ ಜನರು ಮಾವಿನ ಹಣ್ಣಿನ ವಿಭಿನ್ನ ಮತ್ತು ಹೊಸ ಪಾಕವಿಧಾನಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ, ಈ ಮಧ್ಯೆ, ಹಣ್ಣುಗಳ ರಾಜ ಮಾವಿನ (ಮಾವಿನ) ಫ್ಯೂಷನ್ ಖಾದ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಆಹಾರದ ಬಗ್ಗೆ ಒಲವು ಹೊಂದಿರುವವರು ಕೋಪಗೊಂಡು ಮಾವಿನ ಈ ವಿಚಿತ್ರ ಪ್ರಯೋಗವನ್ನು ನಿಲ್ಲಿಸುವಂತೆ ವಿನಂತಿಸುತ್ತಿದ್ದಾರೆ.
ಮಾವಿನ ಹಣ್ಣಿನ ಪಾನಿಪುರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ
ಮಾವಿನ ಹಣ್ಣಿನ ಪಾನಿಪುರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ಜನರು ಆಕ್ರೋಶಗೊಂಡಿದ್ದಾರೆ. ವಾಸ್ತವದಲ್ಲಿ, ಪಾನಿಪುರಿಯನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ ಮತ್ತು ಬೇಸಿಗೆಯಲ್ಲಿ ಜನರು ಮಾವಿನಹಣ್ಣನ್ನು ತುಂಬಾ ಆನಂದಿಸುತ್ತಾರೆ. ಆದರೆ, ಅವೆರಡನ್ನೂ ಕಾಂಬಿನೇಷನ್ ನಲ್ಲಿ ತಿನ್ನಲು ಮುಂದಾದರೆ ಜನರ ಪಿತ್ತ ನೆತ್ತಿಗೇರುತ್ತದೆ.
ಪಾನಿಪುರಿಯ ವಿಚಿತ್ರ ರೆಸಿಪಿ
ಮ್ಯಾಂಗೋ ಪಾನಿಪುರಿಯ ವೀಡಿಯೊವನ್ನು @bombayfoodie_tales ಎಂಬ ಬಳಕೆದಾರರು ತಮ್ಮ Instagram ಖಾತೆಯ ಮೂಲಕ ಹಂಚಿಕೊಂಡಿದ್ದಾರೆ, ಇದು ಹೆಚ್ಚು ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಪಾನಿಪುರಿ ಮಾಡುವವರು ಮೊದಲು ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಮಾವಿನ ರಸವನ್ನು ತಯಾರಿಸುತ್ತಾರೆ. ಇದಾದ ನಂತರ ಒಂದು ತಟ್ಟೆಯಲ್ಲಿ ಪಾನಿಪುರಿಯನ್ನು ತೆಗೆದುಕೊಂಡು ಅದರಲ್ಲಿ ಕಡಲೆಯನ್ನು ಹಾಕುತ್ತಾನೆ. ಇದರ ನಂತರ, ಕೊನೆಯಲ್ಲಿ ಮಾವಿನ ರಸವನ್ನು ಸೇರಿಸಿ ಪಾನಿಪುರಿ ರೂಪದಲ್ಲಿ ಕೊಡುತ್ತಿದ್ದಾರೆ.
ಇದನ್ನೂ ಓದಿ-Corona ರೋಗಿಗಳಿಗೆ ಡೈಯಾಬಿಟಿಸ್ ಅಪಾಯವೇ? ಹೆಚ್ಚಾಗುತ್ತದೆ ಬ್ಲಡ್ ಶುಗರ್ ಲೇವಲ್ ಎಂದ ವಿಜ್ಞಾನಿಗಳು!
ಖಾದ್ಯ ಪ್ರಿಯರು ವೀಡಿಯೊವನ್ನು ನೋಡಿ ರೋಸಿಹೋಗಿದ್ದಾರೆ
ವೀಡಿಯೊ ವೈರಲ್ ಆದ ನಂತರ, ಖಾದ್ಯಪ್ರಿಯ ಜನರು ಭುಗಿಲೆದ್ದಿದ್ದಾರೆ ಮತ್ತು ತಮ್ಮ ಕೋಪವನ್ನು ತೀವ್ರವಾಗಿ ಹೊರಹಾಕುತ್ತಿದ್ದಾರೆ. ಈವರೆಗೆ 9 ಸಾವಿರ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದು, ಕಾಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡಿರುವ ಒರ್ವ ಬಳಕೆದಾರ, 'ಇದನ್ನು ಮಾಡಬೇಡಿ, ನಾನು ಕೈಜೋಡಿಸುತ್ತೇನೆ' ಎಂದರೆ. 'ಬೇಡ ಇದನ್ನು ಮಾಡಬೇಡಿ ಬ್ರದರ್' ಎಂದು ಬರೆದುಕೊಂಡಿದ್ದಾರೆ. ಮತ್ತೊರ್ವ ಬಲೆಕೆದಾರ ಇದು 'ಮೇಡುಳಿಗೆ ಕಿಕ್ ಕೊಡುವ ಕಾಂಬಿನೇಷನ್ ಆಗಿದೆ ಎನ್ನುತ್ತಿದ್ದಾರೆ.
ಇದನ್ನೂ ಓದಿ-Twitter ಮೇಲೆ ಉಚಿತವಾಗಿ ಸಿಗುತ್ತಿದೆ ಬ್ಲ್ಯೂ ಟಿಕ್, ಮೃತ ವ್ಯಕ್ತಿಗಳ ಹೆಸರಿನ ಮುಂದೆಯೂ ಬಂತು ಚೆಕ್ ಮಾರ್ಕ್
ಆರೋಗ್ಯಕ್ಕೆ ಹಾನಿಕಾರಕ ಎಂದ ಬಳಕೆದಾರರು
ಮ್ಯಾಂಗೋ ಪಾನಿಪುರಿ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಮತ್ತೊಬ್ಬ ಬಳಕೆದಾರರು, 'ಈ ವಿಚಿತ್ರ ಪ್ರಯೋಗ ನಿಲ್ಲಿಸಿ. ಇದು ಆರೋಗ್ಯಕ್ಕೆ ಹಾನಿಕರ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ಇದನ್ನು ಅತ್ಯಂತ ಕೆಟ್ಟದ್ದು ಎಂದು ಬಣ್ಣಿಸಿದ್ದಾರೆ ಮತ್ತು 'ಗರುಡ ಪುರಾಣದಲ್ಲಿ ಇದಕ್ಕೆ ಪ್ರತ್ಯೇಕ ಶಿಕ್ಷೆಯ ನಿಬಂಧನೆ ಇದೆ' ಎಂದು ಬರೆದಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.