ನಿಮ್ಮ ವಾಟ್ಸಪ್ ಹ್ಯಾಕ್ ಆಗುವುದನ್ನು ತಪ್ಪಿಸಿಕೊಳ್ಳುವುದು ಹೇಗೆ ಗೊತ್ತೇ?
ಪ್ರಪಂಚದಾದ್ಯಂತದ ಹಲವಾರು ಮೊಬೈಲ್ ಫೋನ್ ಬಳಕೆದಾರರ ಮೇಲೆ ಪರಿಣಾಮ ಬೀರುವ ಸ್ಪೈವೇರ್ ಹಗರಣ ಈಗ ಸಾಕಷ್ಟು ಸುದ್ದಿ ಮಾಡಿದೆ. ಈ ಹಿನ್ನಲೆಯಲ್ಲಿ ಸ್ಪೈವೇರ್ ದಾಳಿಯಿಂದ ಭವಿಷ್ಯದಲ್ಲಿ ತಪ್ಪಿಸಿಕೊಳ್ಳಲು ಬಳಕೆದಾರರಿಗೆ ವಾಟ್ಸಪ್ ಹಲವು ಸೂಚನೆಗಳನ್ನು ನೀಡಿದೆ.
ನವದೆಹಲಿ: ಪ್ರಪಂಚದಾದ್ಯಂತದ ಹಲವಾರು ಮೊಬೈಲ್ ಫೋನ್ ಬಳಕೆದಾರರ ಮೇಲೆ ಪರಿಣಾಮ ಬೀರುವ ಸ್ಪೈವೇರ್ ಹಗರಣ ಈಗ ಸಾಕಷ್ಟು ಸುದ್ದಿ ಮಾಡಿದೆ. ಈ ಹಿನ್ನಲೆಯಲ್ಲಿ ಸ್ಪೈವೇರ್ ದಾಳಿಯಿಂದ ಭವಿಷ್ಯದಲ್ಲಿ ತಪ್ಪಿಸಿಕೊಳ್ಳಲು ಬಳಕೆದಾರರಿಗೆ ವಾಟ್ಸಪ್ ಹಲವು ಸೂಚನೆಗಳನ್ನು ನೀಡಿದೆ.
ಅದರಲ್ಲಿ ಪ್ರಮುಖವಾಗಿ ಇತ್ತೀಚಿನ ಆವೃತ್ತಿಯನ್ನು ಸ್ಥಾಪಿಸಬೇಕು ಮತ್ತು ಭವಿಷ್ಯದ ದಾಳಿಯಿಂದ ರಕ್ಷಣೆ ಖಚಿತಪಡಿಸಿಕೊಳ್ಳಲು ತಮ್ಮ ಸಾಧನಗಳ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ಸಕ್ರಿಯವಾಗಿ ನವೀಕರಿಸಬೇಕು ಎಂದು ವಾಟ್ಸಪ್ ಹೇಳಿದೆ.
ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಸೇವೆಯು ಅತ್ಯಾಧುನಿಕ ಪೆಗಾಸಸ್ ಸ್ಪೈವೇರ್‌ನಿಂದ ಪ್ರಭಾವಿತವಾಗಿದೆ ಎಂದು ನಂಬಿರುವ ಬಳಕೆದಾರರಿಗೆ ಸಂದೇಶದಲ್ಲಿ ಈ ಎರಡು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದೆ.ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯನ್ನು ಯಾವಾಗಲೂ ಬಳಸಿ ಮತ್ತು ಇತ್ತೀಚಿನ ಭದ್ರತಾ ರಕ್ಷಣೆಗಳನ್ನು ಸ್ವೀಕರಿಸಲು ನಿಮ್ಮ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ನ್ನು ನವೀಕರಿಸಿ' ಎಂದು ಹೇಳಿದೆ.
ಇಸ್ರೇಲ್ ಮೂಲದ ಸ್ಪೈವೇರ್ 20 ದೇಶಗಳಲ್ಲಿ 1,400 ಬಳಕೆದಾರರಿಗೆ ಸೇರಿದ ಫೋನ್‌ಗಳಲ್ಲಿ ಪೆಗಾಸಸ್ ನ್ನು ನುಸುಳಲು ವಾಟ್ಸಾಪ್ ಸರ್ವರ್‌ಗಳನ್ನು ಅಕ್ರಮವಾಗಿ ಬಳಸಿದೆ ಎಂದು ವಾಟ್ಸಪ್ ಆರೋಪಿಸಿದೆ. ಭಾರತದಲ್ಲಿ ಪತ್ರಕರ್ತರು ಕಾರ್ಯಕರ್ತರು, ವಕೀಲರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿರಿಸಲಾಗಿದೆ ಎಂದು ವರದಿಯಾಗಿದೆ.