Marriage Viral News: ಮದುವೆಯ ವಿಚಾರದಲ್ಲಿ ಗಲಾಟೆಗಳು ನಡೆದು ಮುರಿದುಬೀಳುವುದು ಉಂಟು, ಅಥವಾ ಜಾತಕ ಕೂಡಿ ಬರುವುದಿಲ್ಲವೆಂದು ಸಂಬಂಧಗಳು ಕೊನೆಗೊಳ್ಳುವುದನ್ನು ಕಂಡಿದ್ದೇವೆ. ಆದರೆ ಇಲ್ಲಿ ನಡೆದ ಘಟನೆಯೊಂದರಲ್ಲಿ ವಿಚಿತ್ರ ಎನಿಸುವಂತಹ ಸನ್ನಿವೇಶನ ನಡೆದಿದೆ.


COMMERCIAL BREAK
SCROLL TO CONTINUE READING

ಮದುವೆಯ ಪ್ರಮುಖ ಭಾಗವಾದ ತಿಲಕ್ ಆಚರಣೆಯ ಸಂದರ್ಭದಲ್ಲಿ ವಧುವಿನ ಸಹೋದರ ವರನ ಪಾದಗಳನ್ನು ಮುಟ್ಟಬೇಕು. ಆದರೆ ತಾನು ಮುಟ್ಟುವುದಿಲ್ಲ ಎಂದು ವಾದ ನಡೆಸಿದ ಬಳಿಕ ವಧು ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.


ಇದನ್ನೂ ಓದಿ: Viral News: ಗಂಡನ ಈ ಕೃತ್ಯದಿಂದ ಬೇಸತ್ತ 42 ವರ್ಷದ ಅತ್ತೆ 27ರ ಅಳಿಯನ ಜೊತೆ ಎಸ್ಕೇಪ್!


ಲೈವ್ ಹಿಂದೂಸ್ತಾನ್ ವರದಿಯ ಪ್ರಕಾರ, ಉನ್ನಾವ್ ಪ್ರದೇಶದ ಎಸ್ ಡಿ ಎನ್‌ ಎಸ್ ರಸ್ತೆಯ ಸರ್ಜು ಪ್ರಸಾದ್ ಅಕಾ ರಜಾಕ್ ಅವರ ಪುತ್ರಿ ಸೋನಿಯ ವಿವಾಹವು ಗಾಂಧಿನಗರ ನಿವಾಸಿ ಓಂ ಪ್ರಕಾಶ್ ಅವರ ಹಿರಿಯ ಮಗ ವಿನಯ್ ಅವರೊಂದಿಗೆ ನಿಶ್ಚಯವಾಗಿತ್ತು.


ಫೆಬ್ರವರಿ 6 ರಂದು (ಸೋಮವಾರ) ಉನ್ನಾವೋದ ಅತಿಥಿ ಗೃಹದಲ್ಲಿ ಮದುವೆ ನಡೆಯುತ್ತಿತ್ತು. ಮದುವೆ ಸ್ಥಳಕ್ಕೆ ಭವ್ಯ ಮೆರವಣಿಗೆಯಲ್ಲಿ ವರ ಬಂದಿದ್ದಾನೆ. ತಿಲಕ ಸಮಾರಂಭದ ಶುಭ ಮುಹೂರ್ತವು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನಿಗದಿಯಾಗಿದ್ದ ಕಾರಣ ಅತಿಥಿ ಮತ್ತು ವರರು ವಿಧಿವಿಧಾನಗಳು ಪ್ರಾರಂಭವಾಗುವುದನ್ನು ಕಾಯುತ್ತಿದ್ದರು.


ಸಮಾರಂಭವು ಪ್ರಾರಂಭವಾದಾಗ ವಧುವಿನ ಸಹೋದರನು ವರನೊಂದಿಗೆ ಕೆಲವು ಆಚರಣೆಗಳನ್ನು ಮಾಡಬೇಕಾಗಿತ್ತು. ಒಂದು ಆಚರಣೆಯಲ್ಲಿ, ಅವರು ವರನ ಪಾದಗಳನ್ನು ಸ್ಪರ್ಶಿಸಬೇಕಾಗಿತ್ತು. ಆದರೆ ವಧುವಿನ ಸಹೋದರ ವರನ ಪಾದ ಮುಟ್ಟಲು ನಿರಾಕರಿಸಿದ್ದಾನೆ.


ಆದರೆ, ವಧುವಿನ ಸಹೋದರನ ನಿರಾಕರಣೆಯನ್ನು ವರನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಒಪ್ಪಲಿಲ್ಲ. ಇದೇ ವಿಚಾರಕ್ಕೆ ವಧುವಿನ ಮತ್ತು ವರನ ಕಡೆಯವರ ನಡುವೆ ವಿವಾದಕ್ಕೆ ಕಾರಣವಾಯಿತು. ಇದೇ ಸಮಯದಲ್ಲಿ ಮದುವೆಯ ನಂತರ ವರನ ಕುಟುಂಬದಿಂದ ಪ್ರತ್ಯೇಕವಾಗಿ ಇರಲು ಬಯಸುವುದಾಗಿ ವಧು ಹೇಳಿದ್ದಾಳೆ. ಈ ವಿಷಯ ಮತ್ತಷ್ಟು ಉಲ್ಬಣಗೊಂಡಿತು.


ಇದನ್ನೂ ಓದಿ: Success Story: ಅಪ್ಪನ ಕೆನ್ನೆಗೆ ಬಾರಿಸಿದ ಪೊಲೀಸ್: ಸೇಡು ತೀರಿಸಿಕೊಳ್ಳಲು ಮಗ ತೆಗೆದುಕೊಂಡ ನಿರ್ಧಾರ ಊಹಿಸಲು ಅಸಾಧ್ಯ!


ಇಷ್ಟಲ್ಲಾ ನಡೆಯುವಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಧಾನಕ್ಕೆ ಯತ್ನಿಸಿದರು. ಆದರೆ ಎರಡೂ ಕಡೆಯವರು ಸಮಾಧಾನವಾಗಲು ಒಪ್ಪಲಿಲ್ಲ. ಕಡೆಗೆ ಮದುವೆಯನ್ನು ರದ್ದುಗೊಳಿಸಲಾಯಿತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.