Viral News: ರಾಜಸ್ಥಾನದಲ್ಲಿ ಪೊಲೀಸರು ಮಾಡಲಾಗದ ಕೆಲಸವನ್ನು ಗ್ರಾಮಸ್ಥರು ಮಾಡಿದ್ದಾರೆ. ತಲೆಮರೆಸಿಕೊಂಡಿದ್ದ ಅತ್ತೆ ಮತ್ತು ಅಳಿಯನನ್ನು ಹುಡುಕಾಡಲೆಂದು ಪೊಲೀಸರು ತಂಡವನ್ನು ರಚಿಸಿದರೂ ಸಹ ಪ್ರಯೋಜನವಾಗಿರಲಿಲ್ಲ. ಬಳಿಕ ಈ ಕಾರ್ಯದಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದು, ಇವರಿಬ್ಬರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
42 ವರ್ಷದ ಅತ್ತೆ ಮತ್ತು 27 ವರ್ಷದ ಅಳಿಯನ ಪ್ರೇಮಕಥೆ ರಾಜಸ್ಥಾನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿರೋಹಿ ಜಿಲ್ಲೆಯ ಅನದಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: 3 ತಿಂಗಳ ಭ್ರೂಣವನ್ನು ರಸ್ತೆಗೆ ಎಸೆದು ಪರಾರಿಯಾದ ಯುವ ಜೋಡಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
ಇವರನ್ನು ಹುಡುಕಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದರೂ ಸಹ ಆ ಜೋಡಿ ಪೊಲೀಸರ ಹಿಡಿತದ ಹೊರಗೆ ತಿರುಗಾಡುತ್ತಲೇ ಇದ್ದರು. ಈ ಬಗ್ಗೆ ಪಾಳಿ ಮೂಲದ ಅಪರಿಚಿತ ವ್ಯಕ್ತಿಯೊಬ್ಬರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ನಂತರ ಇಲ್ಲಿಂದ ಬಂದ ಕೆಲವರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಏನಿದು ಘಟನೆ: ಮೂರು ಮಕ್ಕಳ ತಂದೆಯಾಗಿರುವ ವ್ಯಕ್ತಿ, ಜನವರಿ 1 ರಂದು ತನ್ನ ಅತ್ತೆಯೊಂದಿಗೆ ಮನೆಯಿಂದ ಓಡಿ ಹೋಗಿದ್ದಾನೆ. ಇದಕ್ಕೂ ಮುನ್ನ ಅಳಿಯ ಮಾವನಿಗೆ ಮೋಸ ಮಾಡಿ ಮದ್ಯ ಕುಡಿಸಿ, ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ. ಆ ಬಳಿಕ ಇಬ್ಬರೂ ಮನೆಯಿಂದ ಓಡಿ ಹೋಗಿದ್ದರು. ಮರುದಿನ ಮಾವನಿಗೆ ಪ್ರಜ್ಞೆ ಬಂದಾಗ ಹೆಂಡತಿಗಾಗಿ ಹುಡುಕಾಡಿದ್ದಾನೆ. ಈ ಸಂದರ್ಭದಲ್ಲಿ ಅಳಿಯನೊಂದಿಗೆ ಅತ್ತೆ ಪರಾರಿಯಾಗಿದ್ದಾಳೆ ಎಂಬ ವಿಷಯ ತಿಳಿದು ಬಂದಿದೆ. ಈ ಕುರಿತು ಅಣದಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಲ್ಲಿ ಪ್ರೇಮ ಪ್ರಕರಣದ ಬಗ್ಗೆ ಮಗಳನ್ನು ಕೇಳಿದಾಗ ಏನೂ ಹೇಳಲು ಒಪ್ಪಲಿಲ್ಲ. ಈ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಮಗಳು ಹೇಳಿದ್ದಾಳೆ.
ಇನ್ನು ಪೊಲೀಸರ ಮುಂದೆ ಹೇಳಿಕೆ ನೀಡಿದ ಅತ್ತೆ, “ನನ್ನ ಪತಿ ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ. ಆದ್ದರಿಂದ ಅಳಿಯನೊಂದಿಗೆ ಓಡಿ ಹೋದೆ” ಎಂದು ಹೇಳಿದ್ದಾಗಿ ಎಂದು ತನಿಖಾಧಿಕಾರಿ ಮೋದ್ ಸಿಂಗ್ ತಿಳಿಸಿದ್ದಾರೆ.
ಓಡಿಹೋದ ಮಹಿಳೆಯ ಪತಿ ರಮೇಶ್ ಜೋಗಿ, ಪ್ರತಿದಿನ ಹೊಡೆಯುತ್ತಿದ್ದ. ಇದರಿಂದ ಬೇಸತ್ತು, ಅಳಿಯನೊಂದಿಗೆ ಮನೆ ಬಿಟ್ಟು ಹೊರಗೆ ಹೋಗಿದ್ದಾಳೆ. ಮನೆಯಿಂದ ತಲೆಮರೆಸಿಕೊಂಡ ನಂತರ ಇಬ್ಬರೂ ಮೊದಲು ಸಮರ್ಪುರಕ್ಕೆ ತೆರಳಿದ್ದರು. ಬಳಿಕ ಅಲ್ಲಿಂದ ಪಾಲಿಗೆ ಬಂದು, ಅಲ್ಲಿ ಕೂಲಿ ಮಾಡಿ ಇಬ್ಬರೂ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಇದೀಗ ಇಬ್ಬರೂ ಸಾಮಾಜಿಕ ಸ್ತರದಲ್ಲಿ ದೇವಸ್ಥಾನದ ಮುಂದೆ ಪತಿ-ಪತ್ನಿಯೊಂದಿಗೆ ವಾಸ ಮಾಡುವ ಪ್ರತಿಜ್ಞೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪೊಲೀಸರ ತನಿಖೆಯಲ್ಲಿ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಇಬ್ಬರ ನಡುವೆ ಬಹಳ ದಿನಗಳಿಂದ ಪ್ರೇಮ ಪ್ರಕರಣ ನಡೆಯುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಈ ವ್ಯಕ್ತಿ ಮನೆಗೆ ಪ್ರತೀದಿನ ಬರಲು ಸಹಾಯವಾಗುತ್ತದೆ ಎಂದೇ, ಈ ಮಹಿಳೆ ತನ್ನ ಮಗಳನ್ನು ಆತನಿಗೆ ಕೊಟ್ಟು ವಿವಾಹ ಮಾಡಿದ್ದಾಳೆ ಎಂಬ ಮಾತು ಕೇಳಿಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.