ನವದೆಹಲಿ: ಹೃದಯ ಶ್ರೀಮಂತಿಕೆ, ಹೃದಯ ವೈಶಾಲ್ಯತೆ, ಕ್ರಿಯೆಟಿವಿಟಿಗಳಿಗೆಲ್ಲ ಹಣ, ವಿದ್ಯೆ ಬೇಕಾಗಿಲ್ಲ ಎಂಬುದನ್ನು ಕ್ವಾರಂಟೈನ್ ನಲ್ಲಿರುವ ಬಡ ಕೂಲಿ ಕಾರ್ಮಿಕರು ನಿರೂಪಿಸಿದ್ದಾರೆ. ಇವರು ಮಾಡಿರುವ ಈ ಕೆಲಸಕ್ಕೆ ಯಾರೆ ಆದರೂ ಹ್ಯಾಟ್ಸ್ ಅಪ್ ಹೇಳಲೇಬೇಕು...


ಮತ್ತೊಮ್ಮೆ ಲಾಕ್​ಡೌನ್ ನಿಯಮ ಸಡಿಲಿಕೆ, ಇವುಗಳಿಗೀಗ ಅವಕಾಶ


COMMERCIAL BREAK
SCROLL TO CONTINUE READING

ಗುಜರಾತ್ ಮತ್ತು ಮಧ್ಯ ಪ್ರದೇಶದ ಬಡ ಕೂಲಿ ಕಾರ್ಮಿಕರನ್ನು ರಾಜಸ್ಥಾನದ ಸೀಕರನ ಹಳ್ಳಿಯೊಂದರ ಪ್ರಾಥಮಿಕ ಶಾಲೆಯಲ್ಲಿ  ಕ್ವಾರಂಟೈನಲ್ಲಿ ಇಡಲಾಗಿತ್ತು. ಆ ಶಾಲೆ ಎರಡು ದಶಕಗಳಿಂದ ಸುಣ್ಣ ಬಣ್ಣ ಕಾಣದಿರುವುದನ್ನು ಗಮನಿಸಿದ ಕಾರ್ಮಿಕರು ಆ ಶಾಲೆಗೆ ಬಣ್ಣ ಹಚ್ಚುವುದಾಗಿ ಗ್ರಾಮದ ಸರಪಂಚರ ಮುಂದೆ ಪ್ರಸ್ಥಾಪ ಇಟ್ಟರು. ಇದಕ್ಕೆ ಸ್ಪಂದಿಸಿದ ಸರಪಂಚರು,‌ ಬಣ್ಣ ಹಚ್ಚಲು ಬೇಕಾಗುವ ಬ್ರಷ್ ಮತ್ತಿತರ ಸರಕುಗಳನ್ನು ತಂದುಕೊಟ್ಟರು.


ನಿಮ್ಮ ಮಗಳ ಕನಸುಗಳಿಗೆ ರೆಕ್ಕೆ ನೀಡಲು ಉತ್ತಮ ರಿಟರ್ನ್ಸ್ ನೀಡಲಿವೆ ಈ ಯೋಜನೆಗಳು


'ಈ ಹಳ್ಳಿ ನಮಗೆ ನಿತ್ಯವೂ ಉಚಿತವಾಗಿ ಊಟ ಮತ್ತು ವಸತಿಗಳೆರಡನ್ನೂ ಕೊಟ್ಟಿದೆ. ನಾವು ಕೂಡ ಈ ಊರಿಗೆ ಏನಾದರೂ‌ ಕೊಡಬೇಕಲ್ಲವೇ...? ಎಂದು ಹೇಳಿ ಗ್ರಾಮಸ್ಥರ ಹಣ ನೀಡುವ ಪ್ರಸ್ತಾಪವನ್ನು ನಯವಾಗಿ ನಿರಾಕರಿಸಿದ್ದಾರೆ.


ಕುಡಿಯಲು ಮದ್ಯ ಸಿಗಲಿಲ್ಲ ಎಂದು ಗಲಾಟೆ ಮಾಡುವವರ ನಡುವೆ, ಲಾಕ್‌ಡೌನ್ (Lockdown) ನಿಯಮ‌ ಉಲ್ಲಂಘಿಸಿ ರೋಗ ಉಲ್ಭಣವಾಗುವಂತೆ ಮಾಡುವ ನಗರದ ವಿದ್ಯಾವಂತರ ನಡುವೆ, ಎಲ್ಲವೂ ಇದ್ದು ಕರಾಳ ಪರಿಸ್ಥಿತಿಯಲ್ಲೂ ಲಾಭ ಮಾಡಿಕೊಳ್ಳುವವರ ನಡುವೆ ತಮ್ಮ ಕ್ವಾರಂಟೈನ್ ಕಾಲಾವಧಿ ಪೂರೈಸಲು ಊರ ಶಾಲೆಗೆ ಬಣ್ಣ ಹಚ್ಚಿದ ಜೊತೆಗೆ ಉಂಡ ಊರಿಗೆ ವಾಪಸ್ಸು ಏನಾದರೂ ಕೊಡಬೇಕೆಂದು ನಿರಾಕರಿಸಿದ ಈ ಕೂಲಿ ಕಾರ್ಮಿಕರು ಹಣದಲ್ಲಷ್ಟೇ ಬಡವರು. ಇವರ ಹೃದಯ ಶ್ರೀಮಂತಿಕೆ, ಸಂಸ್ಕಾರಕ್ಕೆ ಸಲಾಮು...