Hindu Mandir in UAE: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಕಳೆದು 20 ದಿನಗಳಾಗುತ್ತಿದ್ದು, ಈ ಬೆನ್ನಲ್ಲೇ ಮತ್ತೊಂದು  ಮಹಾ ದೇವಾಲಯ ಉದ್ಘಾಟನೆಗೊಳ್ಳಲಿದೆ. ವಿಶೇಷವೆಂದರೆ ಈ ದೇವಾಲಯ ನಿರ್ಮಾಣಗೊಳ್ಳುತ್ತಿರುವುದು ಭಾರತದಲ್ಲಲ್ಲ. ಬದಲಾಗಿ, ಮುಸ್ಲಿಂ ರಾಷ್ಟ್ರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Chukki Thare: ಕಿರುತೆರೆಗೆ ಪಾದಾರ್ಪಣೆ ಮಾಡಿದ ಕನ್ನಡದ ಗಾಯಕ ನವೀನ್‌ ಸಜ್ಜು!


ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 14 ರಂದು ಈ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. 700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಭವ್ಯ ದೇವಾಲಯವನ್ನು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆ ನಿರ್ಮಿಸಿದೆ. ಈ ದೇವಾಲಯವನ್ನು ನಿರ್ಮಿಸುವಲ್ಲಿ ಆಧ್ಯಾತ್ಮಿಕ ಗುರು ಮಹಂತ್ ಸ್ವಾಮಿ ಮಹಾರಾಜ್ ಅವರ ಕೊಡುಗೆ ಅಪಾರವಾಗಿದೆ.


ಮಹಂತ್ ಸ್ವಾಮಿ ಮಹಾರಾಜ್ ಅವರು ಕೆಲವು ದಿನಗಳ ಹಿಂದೆ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಅಬುಧಾಬಿಗೆ ತೆರಳಿದ್ದರು, ಅಂದಹಾಗೆ ಈ ಮಹಂತ್ ಸ್ವಾಮಿ ಮಹಾರಾಜ್ ಯಾರು? ಅವರ ಹಿನ್ನೆಲೆ ಏನೆಂದು ಈ ವರದಿಯಲ್ಲಿ ತಿಳಿದುಕೊಳ್ಳೋಣ.


ಮಹಂತ್ ಸ್ವಾಮಿ ಮಹಾರಾಜ್ ಅವರು BAPS ಸ್ವಾಮಿನಾರಾಯಣ ಸಂಸ್ಥೆಯ ಆರನೇ ಮತ್ತು ಪ್ರಸ್ತುತ ಆಧ್ಯಾತ್ಮಿಕ ಗುರು. ಅವರ ಹೆಸರು ಸ್ವಾಮಿ ಕೇಶವಜೀವಂದಾಸ್ಜಿ. ಆದರೆ ಭಕ್ತರು ಅವರನ್ನು ಪ್ರೀತಿಯಿಂದ ಮಹಂತ್ ಸ್ವಾಮಿ ಮಹಾರಾಜ್ ಎಂದು ಕರೆಯುತ್ತಾರೆ. ಮಹಂತ್ ಸ್ವಾಮಿ ಮಹಾರಾಜ್ ಅವರು 13 ಸೆಪ್ಟೆಂಬರ್ 1933 ರಂದು ಮಧ್ಯಪ್ರದೇಶದ ಜಬಲ್‌ಪುರ ನಗರದಲ್ಲಿ ದಹಿಬೆನ್ ಮತ್ತು ಮಣಿಭಾಯ್ ನಾರಾಯಣಭಾಯ್ ಪಟೇಲ್‌ ದಂಪತಿ ಮಗನಾಗಿ ಜನಿಸಿದರು. ಮನೆಯಲ್ಲಿ ಬಾಲ್ಯದಿಂದಲೂ ಆಧ್ಯಾತ್ಮಿಕ ವಾತಾವರಣವಿತ್ತು. ಒಂದು ದಿನ ಸ್ವಾಮಿ ನಾರಾಯಣ ಸಂಸ್ಥೆಯ ಶಾಸ್ತ್ರೀಜಿ ಮಹಾರಾಜರು ಜಬಲ್ಪುರಕ್ಕೆ ಆಗಮಿಸಿದಾಗ, ಈ ಮಗುವಿಗೆ ಆಶೀರ್ವದಿಸಿ ‘ಕೇಶವ್’ ಎಂದು ಹೆಸರಿಸಿಟ್ಟರು.


ಇದನ್ನೂ ಓದಿ: Sovereign Gold Bond: ಆನ್‌ಲೈನ್‌ನಲ್ಲಿ ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಹಂತ-ಹಂತದ ಪ್ರಕ್ರಿಯೆ


ಮಣಿಭಾಯ್ ಮೂಲತಃ ಗುಜರಾತಿನ ಅಂಡಾ ಮೂಲದವರಾಗಿದ್ದು, ವ್ಯಾಪಾರಕ್ಕಾಗಿ ಜಬಲ್ಪುರದಲ್ಲಿ ನೆಲೆಸಿದ್ದರು. ಕೇಶವ್ ಅವರು ತನ್ನ ಶಾಲಾ ಶಿಕ್ಷಣವನ್ನು ಜಬಲ್ಪುರದಲ್ಲಿ ಪೂರೈಸಿದರೆ, ನಂತರ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದರು. ಅದಾದ ನಂತರ ಆಧ್ಯಾತ್ಮದತ್ತ ಒಲವು ತೋರಿದ ಅವರು, 1951-52 ರಲ್ಲಿ ಬ್ರಹ್ಮಸ್ವರೂಪ ಶಾಸ್ತ್ರೀಜಿ ಮಹಾರಾಜ್ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾದ ಪವಿತ್ರ ಯೋಗಿಜಿ ಮಹಾರಾಜ್ ಅವರ ಸಂಪರ್ಕಕ್ಕೆ ಬಂದರು. ಇದಾದ ನಂತರ ಆಧ್ಯಾತ್ಮದ ಹಾದಿಯಲ್ಲಿ ಮುನ್ನಡೆದರು. 1957 ರಲ್ಲಿ, ಯೋಗಿಜಿ ಮಹಾರಾಜ್ ಅವರಿಗೆ ದೀಕ್ಷೆ ನೀಡಿದರು. ನಂತರ ಅಕ್ಷರಧಾಮ ದೇವಾಲಯದ ನಿರ್ಮಾಣದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.