ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿ ಹತ್ತಿ ಮರೆತ ವೈದ್ಯ
stomach surgery : ಕೆಲವು ವೈದ್ಯರು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಾರೆ. ಅದೂ ಅಲ್ಲದೆ.. ಹತ್ತಿ, ಕತ್ತರಿ, ಸರ್ಜರಿ ವಸ್ತುಗಳನ್ನು ಹೊಟ್ಟೆಯಲ್ಲಿ ಮರೆತು ಹೊಲಿಗೆ ಹಾಕಿದ ಪ್ರಸಂಗಗಳೂ ಇವೆ. ಇದೀಗ ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Doctor forgot cotton in patient stomach: ಅನೇಕ ಜನರು ವೈದ್ಯರನ್ನು ದೇವರಂತೆ ಪರಿಗಣಿಸುತ್ತಾರೆ. ದೇವರು ಜನ್ಮ ನೀಡಿದರೆ ವೈದ್ಯರು ಮರುಜನ್ಮ ನೀಡುತ್ತಾರೆ ಎಂಬ ಮಾತಿದೆ. ಯಾವುದೇ ಆರೋಗ್ಯ ಸಮಸ್ಯೆಯಾದಾಗ ನಮ್ಮ ಜೀವವನ್ನು ಉಳಿಸಿಕೊಳ್ಳಲು ವೈದ್ಯರ ಬಳಿ ಹೋಗುತ್ತೇವೆ. ಅನೇಕ ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಾರೆ. ಆದರೆ ಕೆಲವು ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಾರೆ. ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುವುದೇ ಇಲ್ಲ.
ಸ್ಪತ್ರೆಗಳಲ್ಲಿ ಅನಗತ್ಯ ಪರೀಕ್ಷೆಗಳು ಮತ್ತು ಸ್ಕ್ಯಾನ್‌ಗಳನ್ನು ಮಾಡಿ ಬಿಲ್‌ಗಳನ್ನು ಸಂಗ್ರಹಿಸಲಾಗುತ್ತದೆ ಎಂಬ ಆರೋಪ ಅನೇಕ ಹಾಸ್ಪಿಟಲ್‌ಗಳ ಮೇಲಿದೆ. ಶಸ್ತ್ರಚಿಕಿತ್ಸೆ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಆದರೆ ಕೆಲವು ವೈದ್ಯರು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಾರೆ. ಅದೂ ಅಲ್ಲದೆ.. ಹತ್ತಿ, ಕತ್ತರಿ, ಸರ್ಜರಿ ವಸ್ತುಗಳನ್ನು ಹೊಟ್ಟೆಯಲ್ಲಿ ಮರೆತು ಹೊಲಿಗೆ ಹಾಕಿದ ಪ್ರಸಂಗಗಳೂ ಇವೆ. ಇದೀಗ ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ: Lok Sabha Election: ವಾರಣಾಸಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ
ಉತ್ತರ ಪ್ರದೇಶದ ಮೀರತ್ ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದ ರೋಗಿಯ ಜೀವವೇ ಆಪತ್ತಿಗೆ ಸಿಲುಕಿದೆ. ಮೀರತ್‌ನ ವ್ಯಕ್ತಿಯೊಬ್ಬರು ಹೊಟ್ಟೆ ನೋವಿನ ಕಾರಣ ಲೋಹಿಯಾನಗರದ ನರ್ಸಿಂಗ್ ಹೋಮ್‌ಗೆ ಹೋಗಿದ್ದರು. ಆತನನ್ನು ಪರೀಕ್ಷಿಸಿದ ವೈದ್ಯರು ಪಿತ್ತಕೋಶದ ಸಮಸ್ಯೆಯಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ.. ಕೆಲ ದಿನಗಳ ಹಿಂದೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು.
ಆಪರೇಷನ್ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಮನೆಗೆ ಹೋದಾಗಿನಿಂದ ರೋಗಿಯು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಸಹಿಸಲಾಗದ ನೋವಿನಿಂದ ಅವರು ಮತ್ತೊಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ವೈದ್ಯರು ಸ್ಕ್ಯಾನಿಂಗ್ ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ಹತ್ತಿ ಇರುವುದನ್ನು ವೈದ್ಯರು ಗಮನಿಸಿದ್ದಾರೆ. ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿ ಹತ್ತಿಯನ್ನು ಹೊರತೆಗೆಯಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೂಡಲೇ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೋಗಿಯ ಸಂಬಂಧಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ವರುಣಾರ್ಭಟ... ಬಿರುಗಾಳಿ ಸಹಿತ ಮಳೆಯಿಂದ ವಿಮಾನ ಸಂಚಾರ ಸ್ಥಗಿತ ಮೆಟ್ರೊ, ಸ್ಥಳೀಯ ರೈಲು ಕೂಡ ಬಂದ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.