ಹೋಷಂಗಾಬಾದ್: ಇತ್ತೀಚಿನ ದಿನಗಳಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬ ಮನುಷ್ಯನಿಗೆ ಆಗದಂತಹ ಪರಿಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ. ಆದರೆ, ಮನುಷ್ಯ ಆಗಲೀ, ಪ್ರಾಣಿ ಆಗಲೀ ತಾಯಿ ಪ್ರೀತಿ ಒಂದೇ ಎಂಬುದಕ್ಕೆ ನಾಯಿ-ಕೋತಿ ಮರಿ ನಡುವಿನ ಪ್ರೀತಿ ಉತ್ತಮ ನಿದರ್ಶನವಾಗಿದೆ. 


COMMERCIAL BREAK
SCROLL TO CONTINUE READING

ಮಧ್ಯಪ್ರದೇಶದ ಹೋಷಂಗಾಬಾದ್ ಜಿಲ್ಲೆಯ ಸಿಯೋನಿ ಮಾಲ್ವಾದ ಕಾನ್ಸಿಕೇಡಿ ಗ್ರಾಮದಲ್ಲಿ ನಾಯಿಯೊಂದು ಕೋತಿ ಮರಿಗೆ ತಾಯಿಯಂತೆ ಲಾಲನೆ, ಪಾಲನೆ ಮಾಡುತ್ತಿರುವ ಅಪರೂಪದ ದೃಶ್ಯವೊಂದು ಕಂಡುಬಂದಿದೆ. ಈ ಜೋಡಿ ಇದೀಗ ಗ್ರಾಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.


ನಾಯಿಯನ್ನೇ ತಾಯಿಯೆಂದು ತಿಳಿದು ತಿರುಗುತ್ತಿವ ಕೋತಿ ಮರಿ.. ತನ್ನ ಪ್ರೀತಿಯ ಮಗುವಂತೆ ಮಗ್ಗಲಲ್ಲೇ ಇಟ್ಟುಕೊಂಡು ಸುತ್ತಾಡೋ ನಾಯಿ. ಈ ರೀತಿಯ ಅವಿನಾಭಾವ ಸಂಬಂಧ ಇಟ್ಟುಕೊಂಡು ಈ ನಾಯಿ ತಾಯಿಯನ್ನು ಕಳೆದುಕೊಂಡ ಕೋತಿ ಮರಿಗೆ ಅಮ್ಮನ ಸ್ಥಾನ ತುಂಬಿದೆ. ಅಷ್ಟೇ ಅಲ್ಲ, ತನ್ನ ಹಾಲನ್ನೇ ಕೋತಿ ಮರಿಗೆ ಕುಡಿಸುತ್ತಾ ಪೋಷಣೆ ಮಾಡುತ್ತಿದೆ.


ಹಾಗೆ ನೋಡಿದರೆ ಕೋತಿಗೂ ನಾಯಿಗೂ ಎಂದಿಗೂ ಸ್ನೇಹ ಅಸಾಧ್ಯ. ಎರಡೂ ಆಜನ್ಮ ಶತ್ರುಗಳು  ಅಂತಾರೆ. ಆದರೆ, ಈ ಗ್ರಾಮದಲ್ಲಿ ಮಾತ್ರ ಕೋತಿ ಹಾಗೂ ನಾಯಿ ಎರಡೂ ಸ್ನೇಹಿತರಂತೆ ಪ್ರೀತಿ ವಾತ್ಸಲ್ಯದಿಂದ ಇವೆ. ಈಗ ಇವುಗಳ ಮಧ್ಯೆ ಬಿಟ್ಟಿರಲಾರದಂತಹ ಸ್ನೇಹ ಬೆಸೆದಿದೆ.