ನವದೆಹಲಿ: ವಿವಾದಾತ್ಮಕ ಬೆಳವಣಿಗೆಯೊಂದರಲ್ಲಿ, ಬಿಜೆಪಿ ಬೆಂಬಲಿಗರ ಅಂಗಡಿಗಳನ್ನು ಬಹಿಷ್ಕರಿಸುವಂತೆ ಮತ್ತು ಅಲ್ಲಿಂದ ಯಾವ ವಸ್ತುವನ್ನೂ ಖರೀದಿಸದಂತೆ ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ ಶಾಸಕ ನಹೀದ್ ಹಸನ್, ಮುಸ್ಲಿಂ ಬಾಂಧವರಿಗೆ ಹೇಳುತ್ತಿರುವ ದೃಶ್ಯವೊಂದು ಕ್ಯಾಮರಾಗೆ ಸೆರೆ ಸಿಕ್ಕಿದೆ.


COMMERCIAL BREAK
SCROLL TO CONTINUE READING

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಬಿಜೆಪಿ ಬೆಂಬಲಿಸುವವರ ಅಂಗಡಿಗಳಿಂದ ಸಾಮಾನುಗಳ ಖರೀದಿಯನ್ನು ಕೂಡಲೇ ನಿಲ್ಲಿಸಬೇಕೆಂದು ಕೈರಾನಾ ಮತ್ತು ಅಲ್ಲಿನ ಸಮೀಪದ ಗ್ರಾಮಗಳ ಜನರಿಗೆ ಒತ್ತಾಯಿಸುತ್ತಿರುವುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿದೆ.  "ಹತ್ತು ದಿನಗಳವರೆಗೆ ಅಥವಾ ಒಂದು ತಿಂಗಳು ಎಲ್ಲಾದರೂ  ಬೇರೆಡೆ ಹೋಗಿ, ಇತರ ಹಳ್ಳಿಗಳಿಗೆ ಹೋಗಿ, ನಿಮ್ಮ ಸಹೋದರರೊಂದಿಗೆ ಐಕಮತ್ಯಕ್ಕಾಗಿ, ಕೆಲವು ಕಷ್ಟಗಳನ್ನು ಎದುರಿಸಿ. ಆದರೆ ಈ ಬಿಜೆಪಿ ಬೆಂಬಲಿಗರನ್ನು ಮಾರುಕಟ್ಟೆಯಲ್ಲಿ ಬಹಿಷ್ಕರಿಸಿ. ಆಗ ಮಾತ್ರ ಹಲವು ವಿಷಯಗಳು ಸುಧಾರಿಸುತ್ತವೆ. ನಾವು ಅವರಿಂದ ವಸ್ತುಗಳನ್ನು ಖರೀದಿಸುವುದರಿಂದ ಅವರ ಜೀವನ ಸುಧಾರಿಸುತ್ತದೆ. ಆದರೆ ಅದರಿಂದಾಗಿ, ನಾವು ಬಳಲುತ್ತಿದ್ದೇವೆ" ಎಂದು ಹೇಳಿದ್ದಾರೆ.


ಕೈರಾನ ಕೋಮುವಾದಿ ಸಂವೇದನಾಶೀಲ ಪ್ರದೇಶವಾಗಿದ್ದು, ಮುಸ್ಲಿಮರ ಭಯದಿಂದಾಗಿ ಹಿಂದೂಗಳು ಕೈರಾನವನ್ನು ತೊರೆಯುತ್ತಿದ್ದಾರೆ ಎಂಬ ವರದಿಗಳು ಪ್ರಕಟವಾದ ಬಳಿಕ ಈ ಪ್ರದೇಶ ಭಾರೀ ಸುದ್ದಿಯಲ್ಲಿತ್ತು. ಪ್ರಸ್ತುತ ಕೈರಾನಾದಲ್ಲಿ ಮುಸ್ಲಿಮರ ಜನಸಂಖ್ಯೆ 60% ಕ್ಕಿಂತ ಹೆಚ್ಚಿದೆ. 2001ರ ಜನಗಣತಿಯ ಪ್ರಕಾರ, ಕೈರಾನದಲ್ಲಿ ಹಿಂದೂ ಜನಸಂಖ್ಯೆ 52% ಆಗಿದ್ದರೆ, ಉಳಿದವರು ಮುಸ್ಲಿಮರಾಗಿದ್ದಾರೆ.