ನೀವು ವೇತನದ ವರ್ಗದಿಂದ ಬಂದಿದ್ದೀರಿ ಎಂದಾದಲ್ಲಿ, ಪಿಎಫ್(PF) ಫಂಡ್ ನಲ್ಲಿ ಪ್ರತಿ ತಿಂಗಳು ನಿಮ್ಮ ಸಂಬಳದಿಂದ ನಿಶ್ಚಿತ ಮೊತ್ತವನ್ನ ಠೇವಣಿ ಮಾಡಲಾಗುತ್ತೆ ಅನ್ನೋ ಸಂಗತಿ ನಿಮಗೆ ಗೊತ್ತಿರುತ್ತೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಈ ನಿಧಿಯನ್ನ ನಿರ್ವಹಿಸುತ್ತದೆ. ವಾಸ್ತವವಾಗಿ, ಪಿಎಫ್ ನಿಧಿಯಲ್ಲಿನ ಠೇವಣಿಯು ನಿಮಗೆ ದೊಡ್ಡ ಬಂಡವಾಳವಾಗಿರುತ್ತೆ.


COMMERCIAL BREAK
SCROLL TO CONTINUE READING

ಅದ್ರಂತೆ, ತೆರಿಗೆ ಮತ್ತು ಹೂಡಿಕೆ ತಜ್ಞರು ಪಿಎಫ್(PF) ನಿಧಿಗಳಲ್ಲಿ ಠೇವಣಿಗಳನ್ನ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಾರೆ. ಪಿಎಫ್ ಖಾತೆ ಮತ್ತು ಪಿಎಫ್ ಫಂಡ್ʼನಲ್ಲಿ ಠೇವಣಿ ಇಟ್ಟ ಹಣಕ್ಕೆ ಹಲವು ರೀತಿಯ ವಿಶೇಷ ಲಾಭಗಳು ಬೇರೆ ಬೇರೆ ಫಂಡ್ʼಗಳಲ್ಲಿ ಸಿಗುವುದಿಲ್ಲ ಎಂದು ತಜ್ಞರು ವಾದಿಸುತ್ತಾರೆ.


ಕಂದಕಕ್ಕೆ ಉರುಳಿದ ಜೀಪ್: ಸ್ಥಳದಲ್ಲೇ 7 ಮಂದಿ ಸಾವು ಇಬ್ಬರು ಗಾಯ..!


‘PF’ಗೆ ಸಂಬಂಧಿಸಿದ ವಿಶೇಷ ಪ್ರಯೋಜನಗಳೇನು..? ಇತರ ಅನೇಕ ಯೋಜನೆಗಳಿಗಿಂತ ನೀವು ಇಪಿಎಫ್ ಖಾತೆಗಳಲ್ಲಿ ಹೆಚ್ಚಿನ ಬಡ್ಡಿಯನ್ನ ಪಡೆಯುತ್ತೀರಿ. ಇಪಿಎಫ್ ಒ ಪ್ರತಿ ಆರ್ಥಿಕ ವರ್ಷದ ಪಿಎಫ್ ಮೊತ್ತಕ್ಕೆ ಬಡ್ಡಿ ದರವನ್ನ ಪ್ರಕಟಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಪಿಎಫ್ ಒ ಶೇ.8.5ರ ಬಡ್ಡಿ ದರ ನೀಡಲು ನಿರ್ಧರಿಸಿದೆ.


'Work From Home'ಹಿನ್ನೆಲೆ ಕೇವಲ 3 ತಿಂಗಳಲ್ಲಿ 34 ಲಕ್ಷ PC ಮಾರಾಟ


ಈ ಯೋಜನೆಯಲ್ಲಿ ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 (ಸಿ) ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವನ್ನ ಪಡೆಯುತ್ತೀರಿ. ಉದ್ಯೋಗ ಮತ್ತು ಇತರ ಅಗತ್ಯಗಳಿಗಾಗಿ ಪಿಎಫ್ ಮೊತ್ತದಲ್ಲಿ ಠೇವಣಿ ಇರಿಸಿರುವ ಮೊತ್ತದಿಂದ ಭಾಗಶಃ ಹಿಂತೆಗೆತಕ್ಕೆ ಸರ್ಕಾರ ಅವಕಾಶ ನೀಡುತ್ತದೆ. ಕೊವಿಡ್ ಸಾಂಕ್ರಾಮಿಕ ರೋಗ ಸಂಭವಿಸಿದಾಗಲೂ ಪಿಎಫ್ ಷೇರುದಾರರ ಭಾಗಶಃ ಹಿಂತೆಗೆತಕ್ಕೆ ಸರ್ಕಾರ ವಿಶೇಷ ಅನುಮತಿ ನೀಡಿದೆ.


ವಾಟ್ಸಾಪ್ ಮೂಲಕ ಚಿನ್ನವನ್ನು ಕಳುಹಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೇಗೆಂದು ತಿಳಿಯಿರಿ


ಈ ಯೋಜನೆಯು 1995ರ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಜೀವಿತಾವಧಿ ಯ ಪಿಂಚಣಿಯನ್ನು ಒದಗಿಸುತ್ತದೆ. ಇಪಿಎಫ್ ಒನ ಸದಸ್ಯನೊಬ್ಬ ನಿಧಿಗೆ ನಿಯಮಿತವಾಗಿ ದೇಣಿಗೆ ನೀಡುತ್ತಲಿದ್ದರೆ, ಆತನ ದುರಾದೃಷ್ಟದ ಮರಣದ ಸಂದರ್ಭದಲ್ಲಿ ಕುಟುಂಬದ ಸದಸ್ಯರು 1976ರ ವಿಮಾ ಯೋಜನೆ, 1976ರ ವಿಮಾ ಯೋಜನೆ ಪಡೆಯಬಹುದು. ಈ ಮೊತ್ತವು ಕೊನೆಯ ಸಂಬಳದ 20 ಪಟ್ಟು ಸಮನಾಗಿರುತ್ತದೆ. ಈ ಮೊ. ತ್ತ ಗರಿಷ್ಠ 6 ಲಕ್ಷರೂ.ಗಳವರೆಗೆ ಇರಬಹುದು.


ದೇಶದ ಈ ಭಾಗದಲ್ಲಿ ತಾರಕಕ್ಕೇರಿದ ಕರೋನಾ, ಮತ್ತೆ ಜಾರಿಯಾಗಲಿದೆಯೇ ಲಾಕ್‌ಡೌನ್?


ಈ ಅನುಪಾತದಲ್ಲಿ ಪಿಎಫ್ ಖಾತೆಯಲ್ಲಿ ಹಣ ಜಮಾ ಆಗುತ್ತೆ: ಉದ್ಯೋಗದಾತರು ಮತ್ತು ಉದ್ಯೋಗಿಗಳು ಪಿಎಫ್ ಫಂಡ್ ನಲ್ಲಿ ಉದ್ಯೋಗಿಯ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ.12ರಷ್ಟು ಮೊತ್ತವನ್ನ ಠೇವಣಿ ಮಾಡಬೇಕು. ಇಪಿಎಫ್ ಕಾಯಿದೆ ಅಡಿ ನೋಂದಣಿಯಾಗಿರುವ ಕಂಪನಿಯ ನೌಕರರು ಮಾತ್ರ ಪಿಎಫ್ ನಿಧಿಗಳಲ್ಲಿ ತಮ್ಮ ಪರವಾಗಿ ಹೂಡಿಕೆ ಮಾಡಬಹುದು.