ನವದೆಹಲಿ: ಹಣ್ಣುಗಳ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಎಲ್ಲಾ ಹಣ್ಣುಗಳು ತಮ್ಮದೇ ಆದ ಗುಣ ವೈಶಿಷ್ಟ್ಯಗಳನ್ನು ಹೊಂದಿವೆ. ಹಣ್ಣುಗಳು ನಮ್ಮ ದೇಹಕ್ಕೆಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ನಮ್ಮಲ್ಲಿ ಅನೇಕ ಬಗೆಯ ಹಣ್ಣುಗಳಿವೆ. ಈಗಂತೂ ಮಾರುಕಟ್ಟೆಗೆ  ವಿದೇಶೀಯ ಹಣ್ಣುಗಳು ಲಗ್ಗೆ ಇಟ್ಟಿವೆ. ಎಲ್ಲಾ ಹಣ್ಣುಗಳ ಬಗ್ಗೆ ಎಲ್ಲರಿಗೂ ತಿಳಿದಿರಲು ಸಾಧ್ಯವಿಲ್ಲ.  ವಿದೇಶಿ ಹಣ್ಣಾದರೂ ಭಾರತದಲ್ಲಿ ಪ್ರಖ್ಯಾತಿಯಾಗಿರುವ ಹಣ್ಣುಗಳಲ್ಲಿ  ಒಂದು ಡ್ರ್ಯಾಗನ್ ಫ್ರೂಟ್. 


COMMERCIAL BREAK
SCROLL TO CONTINUE READING

ಡ್ರ್ಯಾಗನ್ ಹಣ್ಣಿಗೆ ಮರು ನಾಮಕರಣ:
ಈ ಡ್ರ್ಯಾಗನ್ ಫ್ರೂಟ್ ಇನ್ನು ಮುಂದೆ ಭಾರತದಲ್ಲಿ ಕಮಲಂ ಎಂದು ಗುರುತಿಸಕೊಳ್ಳಲಿದೆ. ಹೌದು, ಗುಜರಾತ್  ಸರ್ಕಾರ ಈ ಹಣ್ಣಿಗೆ ಕಮಲಂ ಎಂದು ಮರುನಾಮಕರಣ ಮಾಡಿದೆ. ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಹೆಸರು ಹಿಲೋಸೆರಸ್ ಅಂಡಸ್ (Hiloceras Undus). ಗುಜರಾತ್ ಸರ್ಕಾರ ಇದೀಗ ಈ ಹಣ್ಣಿನ ಹೆಸರನ್ನು ಬದಲಾಯಿಸಿದೆ. ಹಣ್ಣಿನಲ್ಲಿ ಡ್ರ್ಯಾಗನ್ ಎಂಬ ಪದವನ್ನು ಬಳಸುವುದು ಸರಿಯಲ್ಲ ಎಂಬುದು ಗುಜರಾತ್ (Gujrat) ಸರ್ಕಾರದ ವಾದ.  ಡ್ರ್ಯಾಗನ್ ಹಣ್ಣು (Dragon Fruit) ಕಮಲವನ್ನು ಹೋಲುತ್ತದೆ. ಆದ್ದರಿಂದ, ಈ ಹಣ್ಣನ್ನು ಕಮಲಂ (Kamalam) ಎಂದು ಕರೆಯುವುದು ಸೂಕ್ತ ಎಂದಿದೆ ಗುಜರಾತ್ ಸರ್ಕಾರ.  ಕಮಲಂ ಎಂದರೆ ಸಂಸ್ಕೃತದಲ್ಲಿ ಕಮಲ ಎಂದರ್ಥ. 


ಮೇರಾ ಭಾರತ್ ಮಹಾನ್ .! ಆರು ರಾಷ್ಟ್ರಗಳಿಗೆ ನಮ್ಮದೇ ವ್ಯಾಕ್ಸಿನ್ ..! ಇಂದೇ ರವಾನೆ.!


ಡ್ರ್ಯಾಗನ್ ಹಣ್ಣು ಅಥವಾ ಕಮಲಂ ಹೆಚ್ಚಾಗಿ ದಕ್ಷಿಣ ಅಮೆರಿಕಾದಲ್ಲಿ(South America) ಕಂಡುಬರುತ್ತದೆ. ಇದರ ಕಾಂಡಗಳು ತಿರುಳು ಮತ್ತು ರಸಭರಿತವಾಗಿವೆ. ಈಹಣ್ಣಿನಲ್ಲಿ ಎರಡು ವಿಧಗಳಿವೆ. ಒಂದು ಬಿಳಿ ತಿರುಳು ಹೊಂದಿರುವ ಹಣ್ಣು ಮತ್ತು ಇನ್ನೊಂದು ಕೆಂಪು ತಿರುಳು ಹೊಂದಿರುವ ಹಣ್ಣು. ಈ ಹಣ್ಣಿನ  ಹೂವುಗಳು ಸುಗಂಧಭರಿತವಾಗಿರುತ್ತವೆ.  ಅದು ರಾತ್ರಿಯಲ್ಲಿ ಅರಳುತ್ತದೆ ಮತ್ತು ಬೆಳಿಗ್ಗೆ ಮುದುಡುತ್ತದೆ.


ಡ್ರ್ಯಾಗನ್ ಅಥವಾ ಕಮಲಂ ಅನೇಕ  ಗುಣಗಳನ್ನುಹೊಂದಿವೆ. ಆರೋಗ್ಯಕ್ಕೆ (Health) ಈ ಹಣ್ಣು  ಬಹಳಷ್ಟು ಪ್ರಯೋಜನಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಹಣ್ಣನ್ನು ಪಟ್ಟಾಯ (Pattaya), ಕ್ವೀನ್ಸ್‌ಲ್ಯಾಂಡ್ (Queensland), ವೆಸ್ಟರ್ನ್ ಆಸ್ಟ್ರೇಲಿಯಾ (WesternAustralia), ಮತ್ತು ನ್ಯೂ ಸೌತ್ ವೇಲ್ಸ್‌ನಲ್ಲಿ (South Wales) ಬೆಳೆಯಲಾಗುತ್ತಿದೆ. ಈ ಹಣ್ಣನ್ನು  ಸಲಾಡ್, , ಜೆಲ್ಲಿ ಮತ್ತು ಶೇಕ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. 


ಇದನ್ನೂ ಓದಿ :PM Awas Yojana : ಪ್ರಧಾನಿಯಿಂದ ಬಡವರಿಗೆ 2700 ಕೋಟಿ ರೂ. ಬಿಡುಗಡೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.