ನವದೆಹಲಿ : ಕರೋನಾ ವಿರುದ್ಧದ ಮಹಾಸಮರದಲ್ಲಿ ಭಾರತ ವಿಶ್ವನಾಯಕನ ಪಾತ್ರ ವಹಿಸುತ್ತಿದೆ. ನಾವೆಲ್ಲರೂ ಹೆಮ್ಮೆ ಪಡಬೇಕಾದ ಸುದ್ದಿ ಇದು. ಮೇರಾ ಭಾರತ್ ಯಾವತ್ತಿಗೂ ಮಹಾನ್. ವ್ಯಾಕ್ಸಿನ್ (vaccine)ಹಂಚಿಕೆಯಲ್ಲಿ ವಸುಧೈವ ಕುಟುಂಬಕಂ ಅಂದರೆ ವಿಶ್ವವೇ ಒಂದು ಕುಟುಂಬ ಎಂಬ ನೀತಿಯನ್ನು ಭಾರತ ಬೋಧಿಸುತ್ತಿದೆ.
ಆರು ರಾಷ್ಟ್ರಗಳಿಗೆ ನಮ್ಮದೇ ವ್ಯಾಕ್ಸಿನ್ ..!
ಭಾರತದಲ್ಲಿ ಲಸಿಕೆ (Vaccine)ಅಭಿಯಾನ ಭರ್ಜರಿಯಾಗಿ ಸಾಗುತ್ತಿದೆ. ಭಾರತದ ಲಸಿಕೆಯೂ ಅತ್ಯಂತ ಸೇಫ್ ಎಂದು ಸರ್ಕಾರ ಕೂಡಾ ಹೇಳಿದೆ. ಜೊತೆಗೆ ವಿಶ್ವದ ಇತರ ರಾಷ್ಟ್ರಗಳಿಗೂ ತುರ್ತು ಬಳಕೆಗೆ ಭಾರತ ವ್ಯಾಕ್ಸಿನ್ ರವಾನಿಸುತಿದೆ. ನಮ್ಮ ನೆರೆಯ ರಾಷ್ಟ್ರಗಳಾದ ಭೂತಾನ್ (Bhutan), ಮಾಲ್ಡಿವ್ಸ್ (Maldives), ಬಾಂಗ್ಲಾದೇಶ (Bangladesh), ನೇಪಾಳ (Nepal), ಮ್ಯಾನ್ಮಾರ್ (Myanmar ) ಮತ್ತು ಸಿಚೆಲಿಸ್ (Seychelles) ದೇಶಗಳಿಗೆ ನಮ್ಮ ವ್ಯಾಕ್ಸಿನ್ ಇಂದೇ ರವಾನೆಯಾಗಲಿದೆ.
ಇದನ್ನೂ ಓದಿ : Coronavirus : ಸಸ್ಯಾಹಾರಿಗಳು, ಧೂಮಪಾನಿಗಳಿಗೆ ಕೊರೊನಾ ಕಾಟ ಕಡಿಮೆ - ಸಮೀಕ್ಷೆ
ಈ ಸಂಬಂಧ ಪ್ರಧಾನಿ ಮೋದಿ (Narendra Modi) ಟ್ವೀಟ್ ಮಾಡಿದ್ದು, ಭಾರತಕ್ಕಿದು ಗೌರವದ ಸಂಗತಿ ಎಂದು ಹೇಳಿಕೊಂಡಿದ್ದಾರೆ.
ಸಮಸ್ತ ಮಾನವ ಕುಲದ ಒಳಿತಿಗಾಗಿ ಲಸಿಕೆ ನೀಡುವ ತನ್ನ ಬದ್ದತೆಯನ್ನು ಭಾರತ ಕಾಪಾಡಿಕೊಂಡು ಬಂದಿದೆ. ನೆರೆ ರಾಷ್ಟ್ರಗಳಿಗೆ ಜ.20ರಿಂದ ಲಸಿಕೆ ರವಾನೆಯಾಗಲಿದೆ ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ (S Jaishankar) ಟ್ವಿಟ್ ಮಾಡಿದ್ದಾರೆ.
160 ದಶಲಕ್ಷ ವ್ಯಾಕ್ಸಿನ್ (CoronaVaccine) ಭಾರತದಿಂದ ಬರಲಿದೆ ಎಂದು ಬಾಂಗ್ಲಾದೇಶ ಹೇಳಿದೆ. ಭೂತಾನ್ ಕೂಡಾ ಭಾರತದಿಂದ ವ್ಯಾಕ್ಸಿನ್ ಬರುವುದನ್ನು ಖಚಿತಪಡಿಸಿದೆ. ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಮಾರಿಷಸ್ ಗೂ ಭಾರತವೇ ವ್ಯಾಕ್ಸಿನ್ ರವಾನಿಸಲಿದ್ದು, ಅಗತ್ಯ ರೆಗ್ಯುಲೇಟರಿ ಒಪ್ಪಿಗಾಗಿ ಕಾಯಲಾಗುತ್ತಿದೆ.
ಇದನ್ನೂ ಓದಿ : Good News : ದೇಶವಾಸಿಗಳಿಗೆ ಶೀಘ್ರದಲ್ಲೇ ಸಿಗಲಿದೆ ಇನ್ನೂ 4 Corona vaccine
ನಿಮಗೆ ಗೊತ್ತಿರಲಿ, ಆಗ ಇನ್ನೂ ಲಸಿಕೆ ಬಂದಿರಲಿಲ್ಲ. ಕರೋನಾ ತಾಂಡವ ಉಗ್ರ ರೂಪದಲ್ಲಿತ್ತು. ಆ ಕಾಲದಲ್ಲಿಯೇ ಭಾರತ ವಿಶ್ವದ ಬಹುತೇಕ ದೇಶಗಳಿಗೆ ಹೈಡ್ರೋಕ್ಲೋರೋಕ್ವೀನ್ (Hydroxychloroquine), ರೆಮ್ಡೆಸೈವರ್ (Remdesivir) ಮತ್ತು ಪಾರಾಸಟಾಮಲ್ Paracetamol) ಮಾತ್ರೆಗಳನ್ನು ರವಾನಿಸಿತ್ತು. ಭಾರತದ ಈ ಕಾರ್ಯಕ್ಕೆ ಮೆಚ್ಚಿದ್ದ ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ‘ಭಾರತದ ಈ ನೆರವನ್ನು ಅಮೆರಿಕ ಎಂದಿಗೂ ಮರೆಯುವುದಿಲ್ಲ’ ಎಂದು ಕೊಂಡಾಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.