Presidential Elections 2022 : ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮುಗೆ ಭರ್ಜರಿ ಗೆಲುವು
ಜುಲೈ 25 ರಂದು ದೇಶದ ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಅದಕ್ಕೂ ಒಂದು ದಿನ ಮುಂಚಿತವಾಗಿ ಅಂದರೆ ಜುಲೈ 24 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದೆ.
ನವದೆಹಲಿ : ದೇಶದ 15 ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಆಯ್ಕೆ ಆಗಿದ್ದಾರೆ.
ಇಂದು ನಡೆದ ದೇಶದ ರಾಷ್ಟ್ರಪತಿ ಹುದ್ದೆಗೆ ನಡೆದ ಮತ ಎಣಿಕೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಶೇ.50ಕ್ಕೂ ಹೆಚ್ಚು ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.
ಇದನ್ನೂ ಓದಿ : Draupadi Murmu: ಒಡಿಶಾದ ಬುಡಕಟ್ಟು ಪ್ರದೇಶದಿಂದ ರೈಸಿನಾ ಹಿಲ್ ವರೆಗೆ ಮುರ್ಮು ಪಯಣ..
ಮೂರನೇ ಸುತ್ತಿನ ಮತ ಎಣಿಕೆಯ ನಂತರ ದ್ರೌಪದಿ ಮುರ್ಮು ಅವರು 5,77,777 ಮತಗಳನ್ನು ಪಡೆದರೆ, ಯಶವಂತ್ ಸಿನ್ಹಾ 2,61,062 ಮತಗಳನ್ನು ಪಡೆದಿದ್ದಾರೆ. ಬುಡಕಟ್ಟು ಸಮಾಜದಿಂದ ಬಂದಿರುವ ದ್ರೌಪದಿ ಮುರ್ಮು ದೇಶದ 15ನೇ ರಾಷ್ಟ್ರಪತಿಯಾಜಿ ಆಯ್ಕೆ ಆಗಿದ್ದಾರೆ. ಮುರ್ಮು ಅವರು ರಾಷ್ಟ್ರಪತಿಯ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ದೇಶದ ಮೊದಲ ಬುಡಕಟ್ಟು ಮಹಿಳೆಯಾಗಿದ್ದಾರೆ.
ಮೂರನೇ ಸುತ್ತಿನಲ್ಲಿ ಗೆಲವು
ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಒಟ್ಟು 1333 ಮತಗಳ ಪೈಕಿ ದ್ರೌಪದಿ ಮುರ್ಮು 812 ಮತಗಳನ್ನು ಪಡೆದರೆ, ಸಿನ್ಹಾ 521 ಮತಗಳನ್ನು ಪಡೆದರು. ಈ ಸುತ್ತಿನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಪಂಜಾಬ್, ಮಿಜೋರಾಂ, ಒಡಿಶಾ, ಮಣಿಪುರ ಮುಂತಾದ ರಾಜ್ಯಗಳ ಮತಗಳನ್ನು ಎಣಿಕೆ ಮಾಡಲಾಯಿತು. ಅದೇ ರೀತಿ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಬಂದ 10 ರಾಜ್ಯಗಳಲ್ಲಿ ಎಲ್ಲ ಸಂಸದರು ಮತ್ತು ಶಾಸಕರ ಒಟ್ಟು ಮತಗಳಲ್ಲಿ ಶೇ.72ರಷ್ಟು ಮತಗಳು ಭದ್ರವಾಗಿವೆ. ಎರಡನೇ ಸುತ್ತಿನ ಮತ ಎಣಿಕೆಯಲ್ಲಿ 1,138 ಮಾನ್ಯ ಮತಗಳಲ್ಲಿ ಮುರ್ಮು 809 ಮತಗಳನ್ನು ಪಡೆದರೆ, ಸಿನ್ಹಾ 329 ಮತಗಳನ್ನು ಪಡೆದರು.
ಮುರ್ಮು ಪರವಾಗಿ ಅಡ್ಡ ಮತದಾನ
ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸದಸ್ಯರ ಮತ ಎಣಿಕೆ ನಡೆದಿದ್ದು, ಈ ಸುತ್ತಿನ ಬಳಿಕ ಮುರ್ಮು ಅವರು 748 ಮತಗಳ ಪೈಕಿ 540 ಮತಗಳನ್ನು ಪಡೆಯುವ ಮೂಲಕ ಆರಂಭದಲ್ಲೇ ಮುನ್ನಡೆ ಸಾಧಿಸಿದರು. ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿ ಸಂಸದರ ಮತದ ಮೌಲ್ಯ 700 ಆಗಿತ್ತು. ಮೊದಲ ಸುತ್ತಿನ ಮತ ಎಣಿಕೆಯ ನಂತರ ಎದುರಾಳಿ ಅಭ್ಯರ್ಥಿ ಯಶವಂತ್ ಸಿನ್ಹಾ 208 ಮತಗಳನ್ನು ಪಡೆದರು.
ಇದನ್ನೂ ಓದಿ : Sonia Gandhi interrogation : ಸೋನಿಯಾ ಇಡಿ ವಿಚಾರಣೆ : 2 ಗಂಟೆ, 25 ಪ್ರಶ್ನೆ, ಜುಲೈ 25ಕ್ಕೆ ಸಮನ್ಸ್!
ಮುರ್ಮು ಅವರನ್ನು ಅಧಿಕೃತವಾಗಿ ಬೆಂಬಲಿಸಿದ ಪಕ್ಷಗಳ ಸಂಖ್ಯೆಯ ಜೊತೆಗೆ, ಅವರು 12-13 ಸಂಸದರ ಮತವನ್ನು ಪಡೆಯುವ ನಿರೀಕ್ಷೆಯಿದೆ. ಚುನಾವಣೆಗೂ ಮುನ್ನ ವಿವಿಧ ಪಕ್ಷಗಳ 538 ಸಂಸದರು ಮುರ್ಮು ಅವರಿಗೆ ಬೆಂಬಲ ಸೂಚಿಸಿದ್ದರು, ಆದರೆ ಕೆಲವರು ಮತದಾನ ಮಾಡಲಿಲ್ಲ. ಮತ್ತೊಂದೆಡೆ, ಸಿನ್ಹಾ ಅವರ ಒಟ್ಟು ಮತ ಮೌಲ್ಯವು 1,45,600 ಆಗಿತ್ತು, ಇದು ಒಟ್ಟು ಮಾನ್ಯ ಮತಗಳ ಶೇ.27.81 ರಷ್ಟಾಗಿದೆ. ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಶಾಸಕರ ಮತ ಎಣಿಕೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 25 ರಂದು ದೇಶದ ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಅದಕ್ಕೂ ಒಂದು ದಿನ ಮುಂಚಿತವಾಗಿ ಅಂದರೆ ಜುಲೈ 24 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.