Sonia Gandhi interrogation : ಸೋನಿಯಾ ಇಡಿ ವಿಚಾರಣೆ : 2 ಗಂಟೆ, 25 ಪ್ರಶ್ನೆ, ಜುಲೈ 25ಕ್ಕೆ ಸಮನ್ಸ್!

ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜುಲೈ 25 ರಂದು ಎರಡನೇ ಸುತ್ತಿನ ವಿಚಾರಣೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ. 

Written by - Channabasava A Kashinakunti | Last Updated : Jul 21, 2022, 09:04 PM IST
  • ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ
  • AIIMS ವೈದ್ಯರ ಮೇಲ್ವಿಚಾರಣೆಯಲ್ಲಿ ವಿಚಾರಣೆ
  • ಜುಲೈ 25 ಕ್ಕೆ ಮತ್ತೆ ಸೋನಿಯಾ ವಿಚಾರಣೆ!
Sonia Gandhi interrogation : ಸೋನಿಯಾ ಇಡಿ ವಿಚಾರಣೆ : 2 ಗಂಟೆ, 25 ಪ್ರಶ್ನೆ, ಜುಲೈ 25ಕ್ಕೆ ಸಮನ್ಸ್! title=

ED summons Sonia Gandhi for questioning : ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜುಲೈ 25 ರಂದು ಎರಡನೇ ಸುತ್ತಿನ ವಿಚಾರಣೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ. 

ಇಂದು ಇಡಿ ಅಧಿಕಾರಿಗಳು ಕೊರೊನಾದಿಂದ ಚೇತರಿಸಿಕೊಂಡಿರುವ ಸೋನಿಯಾ ಗಾಂಧಿ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿತು. ಸೋನಿಯಾ ಗಾಂಧಿ ಅವರ ಮನವಿಯ ಮೇರೆಗೆ ಹೆಚ್ಚಿನ ವಿಚಾರಣೆಯನ್ನು ಎರಡನೇ ಸುತ್ತಿನವರೆಗೆ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸೋನಿಯಾ ಗಾಂಧಿ ಅವರನ್ನು ಇನ್ನು ಮುಂದೆ ಪ್ರಶ್ನಿಸುವುದಿಲ್ಲ ಮತ್ತು ಅವರು ಹೊರಹೋಗಬಹುದು ಎಂದು ಇಡಿ ಹೇಳಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟ್ವಿಟ್ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ : Presidential Elections 2022 : ರಾಷ್ಟಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮುಗೆ ಭರ್ಜರಿ ಗೆಲುವು

AIIMS ವೈದ್ಯರ ಮೇಲ್ವಿಚಾರಣೆಯಲ್ಲಿ ವಿಚಾರಣೆ

ಸೋನಿಯಾ ಗಾಂಧಿ ಅವರ ವಿಚಾರಣೆ ವೇಳೆ ಅವರ ಆರೋಗ್ಯ ಹದಗೆಟ್ಟರೆ ತಕ್ಷಣವೇ ಚಿಕಿತ್ಸೆ ನೀಡಲು ಇಬ್ಬರು ಏಮ್ಸ್ ವೈದ್ಯರು ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು, ಸೋನಿಯಾ ಅವರನ್ನು ಭೇಟಿ ಮಾಡಲು ಎರಡು ಬಾರಿ ಪ್ರಿಯಾಂಕಾ ಗಾಂಧಿ ವಿಚಾರಣೆ ಕೊಠಡಿಗೆ ಬಂದಿದ್ದರು. ಇಡಿ ಅಧಿಕಾರಿಗಳು ಸೋನಿಯಾ ಅವರನ್ನು 2 ಗಂಟೆಗಳಲ್ಲಿ ಸುಮಾರು 25 ಪ್ರಶ್ನೆಗಳನ್ನು ಕೇಳಿದ್ದು, ಎಲ್ಲ ಪ್ರಶ್ನೆಗಳ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗಿದೆ. ಆದರೆ, ಮುಂದಿನ ಸುತ್ತಿನ ಪ್ರಶ್ನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಿನ್ನ ಹೇಳಿಕೆ ನೀಡಿದೆ.

ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿ, 'ಇಡಿ ನಮಗೆ ಯಾವುದೇ ಪ್ರಶ್ನೆಗಳಿಲ್ಲ, ನೀವು ಹೋಗಬಹುದು ಎಂದರು. ಅಷ್ಟರಲ್ಲೆ, ಸೋನಿಯಾ ಅವರು ನಿಮ್ಮಲ್ಲಿರುವ ಎಲ್ಲಾ ಪ್ರಶ್ನೆಗಳನ್ನು ಕೇಳಿ, ನಾನು ರಾತ್ರಿ 8-9 ರವರೆಗೆ ಇರಲು ಸಿದ್ಧನಿದ್ದೇನೆ ಎಂದು ಹೇಳಿದರು. 

ತನಿಖೆಯನ್ನು ಮುಕ್ತಾಯ ಗೊಳಿಸುವ ಬಗ್ಗೆ ಸೋನಿಯಾ ಅವರು ಯಾವುದೇ ಮನವಿ ಮಾಡಿಲ್ಲ. ನನಗೆ ಕೊರೊನಾ ಸೋಂಕು ಇದೆ ಹೀಗಾಗಿ ಔಷಧಿ ತೆಗೆದುಕೊಳ್ಳಬೇಕು ಎಂದು ಹೇಳಿದರು, ಆದ್ದರಿಂದ ಮುಂದಿನ ಬಾರಿ ಯಾವ ಸಮಯದಲ್ಲಿ ಹಾಜರಾಗಬೇಕೆಂದು ಮುಂಚಿತವಾಗಿ ತಿಳಿಸಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Vice President Election : ಉಪರಾಷ್ಟ್ರಪತಿ ಚುನಾವಣೆಯನ್ನು ಬಹಿಷ್ಕಾರಿಸಿದ ಟಿಎಂಸಿ ಪಾರ್ಟಿ..!

 ಜುಲೈ 25 ಕ್ಕೆ ಮತ್ತೆ ಸೋನಿಯಾ ವಿಚಾರಣೆ!

ಗುರುವಾರ ಅಥವಾ ಶುಕ್ರವಾರ ನನ್ನನ್ನು ಪ್ರಶ್ನಿಸಲು ಏನೂ ಇಲ್ಲ, ನಂತರ ಸೋನಿಯಾ ಗಾಂಧಿ ಅವರು ಸೋಮವಾರ ಬರಲು ಸಿದ್ಧ ಎಂದು ಹೇಳಿದರು. ಆರಂಭದಲ್ಲಿ ಸೋನಿಯಾ ಗಾಂಧಿ ಅವರನ್ನು ಜುಲೈ 26 ರಂದು ವಿಚಾರಣೆಗೆ ಕರೆಯಲಾಗಿತ್ತು, ನಂತರ ಅವರ ಕೋರಿಕೆಯ ಮೇರೆಗೆ ಜುಲೈ 25 ಕ್ಕೆ ವರ್ಗಾಯಿಸಲಾಯಿತು ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News