ನಿಮ್ಮ ಕನಸಿನಲ್ಲಿ ಮಾಜಿ ಪ್ರೇಮಿ ಬರುತ್ತಾರಾ..? ಇದರ ಹಿಂದಿನ ಅರ್ಥವೇನು ತಿಳಿಯಿರಿ
ನಾವು ಕಾಣುವ ಪ್ರತಿ ಕನಸಿಗೂ ಖಂಡಿತವಾಗಿ ಉತ್ತಮ ಅರ್ಥವಿರುತ್ತದೆ. ನಿಮ್ಮ ಕನಸಿನಲ್ಲಿ ಒಂದು ವೇಳೆ ಮಾಜಿ ಪ್ರೇಮಿಯನ್ನು ಕಂಡರೆ ಇದರ ಅರ್ಥವೇನು ಅನ್ನೋದನ್ನು ತಿಳಿದುಕೊಳ್ಳಿರಿ.
ನವದೆಹಲಿ: ಹಿರಿಯರು ಅಥವಾ ಮಕ್ಕಳು ಹೀಗೆ ಎಲ್ಲರಿಗೂ ಕನಸುಗಳು ಬೀಳುತ್ತವೆ. ಕೆಲವು ಕನಸುಗಳು ಆಹ್ಲಾದಕರ ನೆನಪುಗಳನ್ನು ನೀಡುತ್ತವೆ ಮತ್ತು ಕೆಲವು ಭಯಾನಕ ಅನುಭವ ನೀಡುತ್ತವೆ. ಅದೇ ರೀತಿ ಕೆಲವೊಮ್ಮೆ ನಾವು ಕಂಡ ಕನಸುಗಳು ನೆನಪಿರುವುದಿಲ್ಲ. ನಾವು ಕಾಣುವ ಪ್ರತಿಯೊಂದು ಕನಸು ಖಂಡಿತ ಕೆಲವು ಅರ್ಥವನ್ನು ಹೊಂದಿರುತ್ತವೆ. ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದು ಕನಸಿನ ಬಗ್ಗೆ ಮಾಹಿತಿ ನೀಡಲಾಗಿದೆ. ಕೆಲವು ಕನಸುಗಳು ಮಂಗಳಕರ ಚಿಹ್ನೆಯ ಬಗ್ಗೆ ತಿಳಿಸಿದರೆ, ಕೆಲವು ಕನಸುಗಳು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅನ್ನೋದರ ಮುನ್ಸೂಚನೆ ನೀಡುತ್ತವೆ. ಇಂದು ನಾವು ನಿಮಗೆ ಒಂದು ವಿಶೇಷ ಕನಸಿನ ಬಗ್ಗೆ ತಿಳಿಸುತ್ತಿದ್ದೇವೆ.
ವಂಚನೆಯ ಅನುಮಾನ
ನಿಮ್ಮ ಕನಸಿನಲ್ಲಿ ನೀವು ಎಂದಾದರೂ ಮಾಜಿ ಗೆಳೆಯ ಅಥವಾ ಮಾಜಿ ಗೆಳತಿಯನ್ನು ನೋಡಿದ್ದೀರಾ? ಇದರ ಹಿಂದೆಯೂ ಆಳವಾದ ಅರ್ಥ ಅಡಗಿದೆ. ಮಾಜಿ ಗೆಳೆಯನನ್ನು ಕನಸಿನಲ್ಲಿ ನೋಡುವುದಕ್ಕೆ ಎರಡು ಅರ್ಥಗಳಿವೆ. ಒಂದು ನೀವು ಬಿರುಕು ಬಿಟ್ಟಿರುವ ಸಂಬಂಧವನ್ನು ಮತ್ತೆ ಒಂದುಗೂಡಿಸಲು ಪ್ರಯತ್ನಿಸುತ್ತಿದ್ದೀರಿ ಮತ್ತು ಅದನ್ನು ಮತ್ತೆ ನಿಮ್ಮ ಜೀವನದ ಭಾಗವನ್ನಾಗಿಸಲು ಬಯಸುತ್ತೀರಿ. ಆದರೆ ಇದರಲ್ಲಿ ನೀವು ಮತ್ತೆ ಮೋಸ ಹೋಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: Hometown Astrology: ಮಹಿಳೆಯರು ತವರಿಗೆ ಹೋಗೋ ಮುನ್ನ ಈ ಸಣ್ಣ ಕಾರ್ಯ ಮಾಡಿದ್ರೆ ಹಣದ ಹೊಳೆ ಹರಿದುಬರುತ್ತೆ!
ಹೊಸ ಜೀವನ ಪ್ರಾರಂಭ
ಮಾಜಿ ಪ್ರೇಮಿಯನ್ನು ಕನಸಿನಲ್ಲಿ ನೋಡುವುದರಲ್ಲಿ ಇನ್ನೊಂದು ಅರ್ಥವಿದೆ. ನೀವು ಹೊಸದಾಗಿ ಜೀವನ ಪ್ರಾರಂಭಿಸಲು ಬಯಸುತ್ತೀರಿ ಮತ್ತು ಹಳೆಯ ನೆನಪುಗಳನ್ನು ಆದಷ್ಟು ಮಟ್ಟಿಗೆ ತೊಡೆದುಹಾಕಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ. ನಿಮ್ಮ ಜೀವನವು ತೊಂದರೆಗಳಿಂದ ಆವೃತವಾಗಿದ್ದು, ಇವುಗಳಿಂದ ಮುಕ್ತಿ ಪಡೆಯಲು ನೀವು ಹೆಣಗಾಡುತ್ತಿರುವಿರಿ ಎಂಬುದರ ಬಗ್ಗೆ ಈ ಕನಸು ನಿಮಗೆ ಹೇಳುತ್ತದೆ.
ಬಲವಾದ ಪ್ರೇಮ ಸಂಬಂಧ
ಅದೇ ರೀತಿ ನೀವು ಪ್ರಸ್ತುತ ಪ್ರೀತಿಸುತ್ತಿರುವ ಪ್ರೇಮಿಯನ್ನು ಕನಸಿನಲ್ಲಿ ನೋಡಿದರೆ, ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಇಬ್ಬರ ನಡುವಿನ ಪ್ರೀತಿಯ ಸಂಬಂಧವು ಗಟ್ಟಿಯಾಗಲಿದೆ ಮತ್ತು ಶೀಘ್ರದಲ್ಲೇ ವೈವಾಹಿಕ ಜೀವನ ಸಹ ಪ್ರಾರಂಭಿಸಬಹುದು. ಇದರೊಂದಿಗೆ ವಿವಾಹಿತರು ತಮ್ಮ ಜೀವನ ಸಂಗಾತಿಯ ಬಗ್ಗೆ ಕನಸು ಕಂಡರೆ ಇಬ್ಬರ ನಡುವೆ ಉತ್ತಮ ಸಂಬಂಧ ಏರ್ಪಟ್ಟು ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂದರ್ಥ.
ಇದನ್ನೂ ಓದಿ: Bathroom Cleaning: ಬಾತ್ ರೂಮ್ ಫಳಫಳ ಅಂತಾ ಹೊಳೆಯಬೇಕೆ? ಹಾಗಾದ್ರೆ ಈ ಪುಟ್ಟ ಕಲ್ಲನ್ನು ಉಪಯೋಗಿಸಿ ನೋಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.