Driving Without DL: ಡ್ರೈವಿಂಗ್ ಲೈಸನ್ಸ್ ಅಂದರೆ ಡಿಎಲ್ ಇಲ್ಲದೆಯೇ ವಾಹನ ಚಲಾಯಿಸುವುದು ಸಾರಿಗೆ ಸಂಚಾರ ನಿಯಮಗಳಿಗೆ ವಿರುದ್ಧವಾಗಿದೆ. ಹೀಗೆ ಮಾಡುವುದರಿಂದ ನಿಮಗೆ ಚಾಲನ್ ವಿಧಿಸಬಹುದು. ಹಲವು ಬಾರಿ ಡ್ರೈವಿಂಗ್ ಲೈಸನ್ಸ್ ಹೊಂದಿದ್ದರು ಕೂಡ ಮನೆಯಲ್ಲಿ ಮರೆತು ಹೋದ ಕಾರಣ ಪೊಲೀಸರು ನಿಮ್ಮ ಚಾಲನ್ ಕತ್ತರಿಸುತ್ತಾರೆ . ಏಕೆಂದರೆ, ಪೊಲೀಸರು ಚಾಲನ್ ಬಗ್ಗೆ ನಿಮ್ಮನ್ನು ವಿಚಾರಣೆ ನಡೆಸಿದಾಗ ನೀವು ಡ್ರೈವಿಂಗ್ ಲೈಸನ್ಸ್ ತೋರಿಸಲೇಬೇಕು. ಡ್ರೈವಿಂಗ್ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ನಿಮಗೆ ರೂ.5000 ದಂಡ ಬೀಳುತ್ತದೆ. ಆದರೆ, ಡಿಎಲ್ ಅನ್ನು ನಿಮ್ಮ ಜೊತೆಗೆ ತೆಗೆದುಕೊಂಡು ಹೋಗದೆಯೇ ಟೆನ್ಶನ್ ಫ್ರೀಯಾಗಿ ವಾಹನವನ್ನು ಓಡಿಸಲು ಬಯಸುತ್ತಿದ್ದರೆ, ಎರಡು ಸಂಗತಿಗಳನ್ನು ನೀವು ವಿಶೇಷವಾಗಿ ನೆನಪಿನಲ್ಲಿಡಬೇಕು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಈ ನಾಣ್ಯದ ಬೆಲೆ ಬರೋಬ್ಬರಿ 126 ಕೋಟಿ : ಸಿಬಿಐ ತನಿಖೆ ನಡೆಸ್ತಿರೋ ಈ ಕಾಯಿನ್‌ ಸ್ಪೆಷಾಲಿಟಿ ಏನು?


ಮೊದಲನೆಯದಾಗಿ ಎಲ್ಲಿ ಬೇಕಾದರೂ ವಾಹನ ಓಡಿಸಬಹುದು ಎಂದರೆ, ವಾಹನ ಚಲಾಯಿಸಲು ಅನುಮತಿ ಇರುವ ಜಾಗಗಳು ಎಂದರ್ಥ. ಎರಡನೇ ಸಂಗತಿ ಎಂದರೆ, ಒಂದು ವೇಳೆ ನಿಮ್ಮ ಬಳಿ ಡ್ರೈವಿಂಗ್ ಲೈಸನ್ಸ್ ಇಲ್ಲ ಎಂದರೆ, ಅದೊಂದು ದಂಡನೀಯ ಅಪರಾಧ. ಆದರೆ, ಒಂದು ವೇಳೆ ನೀವು ಡ್ರೈವಿಂಗ್ ಲೈಸನ್ಸ್ ಹೊಂದಿದ್ದು, ಡ್ರೈವಿಂಗ್ ನಡೆಸುವಾಗ ನೀವು ನಿಮ್ಮ ಲೈಸನ್ ನಿಮ್ಮ ಬಳಿ ಹೊಂದಿಲ್ಲ ಎಂದಾದರೆ, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಚಾಲನ್ ನಿಂದ ಪಾರಾಗಲು ನಿಮಗೆ ಅವಕಾಶವೊಂದನ್ನು ಕಲ್ಪಿಸಿದೆ. ಆ ವ್ಯವಸ್ಥೆಯ ಕುರಿತು ನಿಮಗೆ ತಿಳಿದಿರಬೇಕು.


ಇದನ್ನೂ ಓದಿ-ಟೀನಾ ದಾಬಿ ವಿಚ್ಛೇದನದ ಬಳಿಕ ಮತ್ತೊಂದು ಮದುವೆಗೆ ಅಥರ್ ಅಮಿರ್ ಸಜ್ಜು; ವಧು ಯಾರು ಗೊತ್ತಾ..?


ಸರ್ಕಾರದ ಒಂದು ಮೊಬೈಲ್ ಆಪ್ ಇದೆ. ಅದಕ್ಕೆ ಡಿಜಿಲಾಕರ್ ಎಂದು ಹೇಳಲಾಗುತ್ತದೆ. ನೀವು ನಿಮ್ಮ ಡ್ರೈವಿಂಗ್ ಲೈಸನ್ಸ್ ಅನ್ನು ಡಿಜಿಲಾಕರ್ ಗೆ ಅಪ್ಲೋಡ್ ಮಾಡಬಹುದು. ಅದರಲ್ಲಿ ನೀವು ನಿಮ್ಮ ಡ್ರೈವಿಂಗ್ ಲೈಸನ್ಸ್ ನ ಸಾಫ್ಟ್ ಕಾಪಿಯನ್ನು ಉಳಿಸಿಕೊಳ್ಳಬಹುದು. ಡಿಜಿಟಲ್ ಲಾಕರ್ ಸರ್ಕಾರಿ ಆಪ್ ಆಗಿದ್ದು, ಅದನ್ನು ಇದೇ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಈ ಆಪ್ ನಲ್ಲಿ ಭಾರತೀಯ ನಾಗರಿಕರು ಪೇಪರ್ ಲೆಸ್ ರೂಪದಲ್ಲಿ ತಮ್ಮ ಅತ್ಯಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.