Driving License Latest Update: ಡ್ರೈವಿಂಗ್ ಲೈಸೆನ್ಸ್ , ಆರ್ ಸಿ, ಈ ದಿನದವರೆಗೆ ವ್ಯಾಲಿಡ್ ಆಗಿರಲಿದೆ
Driving License Latest Update:ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ (Rc), ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆಯ ಅವಧಿಯನ್ನು ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ.
ನವದೆಹಲಿ : Driving License Latest Update:ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ (Rc), ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆಯ ಅವಧಿಯನ್ನು ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ. ಕರೋನಾ ಸಾಂಕ್ರಾಮಿಕವನ್ನು (Coronavirus) ಗಮನದಲ್ಲಿಟ್ಟುಕೊಂಡು, ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈ ಎಲ್ಲಾ ದಾಖಲೆಗಳು ಈಗ ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತವೆ.
ಸೆ.30ರವರೆಗೆ ಮಾನ್ಯವಾಗಿರಲಿದೆ ಡ್ರೈವಿಂಗ್ ಲೈಸೆನ್ಸ್ :
ರಸ್ತೆ ಮತ್ತು ಸಾರಿಗೆ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, 2020 ರ ಫೆಬ್ರವರಿ 1 ರೊಳಗೆ ಅವಧಿ ಮುಗಿದ ಅಥವಾ 2021 ರ ಸೆಪ್ಟೆಂಬರ್ 30 ರೊಳಗೆ ಮುಕ್ತಾಯಗೊಳ್ಳಲಿರುವ ಮತ್ತು ಲಾಕ್‌ಡೌನ್ (Lockdown) ನಿರ್ಬಂಧಗಳಿಂದಾಗಿ ನವೀಕರಿಸಲಾಗದ ಈ ದಾಖಲೆಗಳು ಈಗ ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರಲಿವೆ. ಈ ನಿಟ್ಟಿನಲ್ಲಿ ಸಚಿವಾಲಯವು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ಈ ಕಷ್ಟದ ಸಮಯದಲ್ಲಿ ಕೆಲಸ ಮಾಡುವ ಸಾರಿಗೆಗೆ ಸಂಬಂಧಪಟ್ಟ ಸಂಸ್ಥೆಗಳಿಗೆ ತೊಂದರೆಯಾಗದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಆದೇಶವನ್ನು ತಕ್ಷಣದಿಂದ ಜಾರಿಗೆ ತರುವಂತೆ ಆದೇಶಿಸಲಾಗಿದೆ.
ಇದನ್ನೂ ಓದಿ : Cooking Oil Price : ಸಾರ್ವಜನಿಕರಿಗೆ ಸಿಹಿ ಸುದ್ದಿ : ಅಡುಗೆ ಎಣ್ಣೆ ಬೆಲೆಯಲ್ಲಿ ಶೇ.20 ರಷ್ಟು ಇಳಿಕೆ!
6 ಬಾರಿ ಮಾನ್ಯತೆ ವಿಸ್ತರಣೆ :
ಕರೋನಾ ಸಾಂಕ್ರಾಮಿಕದ (COVID-19) ದೃಷ್ಟಿಯಿಂದ, ಚಾಲನಾ ಪರವಾನಗಿ, ಆರ್‌ಸಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರದಂತಹ ದಾಖಲೆಗಳ ಮಾನ್ಯತೆಯನ್ನು ಸರ್ಕಾರ 6 ಬಾರಿ ಹೆಚ್ಚಿಸಿದೆ. ಈ ಮೊದಲು, ಈ ಎಲ್ಲಾ ದಾಖಲೆಗಳು ಜೂನ್ 30, 2021 ರವರೆಗೆ ಮಾನ್ಯವಾಗಿದ್ದವು. ಲಾಕ್ ಡೌನ್ ನಿರ್ಬಂಧದಿಂದಾಗಿ (Lockdown guidelines), ಅಗತ್ಯ ವಸ್ತುಗಳ ಸಾಗಣೆ ಸರಳವಾಗಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ : Black tree India : ಪ್ರತಿ ಬಟ್ಟೆಯ ಖರೀದಿಯೊಂದಿಗೆ ಸಿಗಲಿದೆ ಉಚಿತ ಮೊಬೈಲ್, 300 ರೂ ಕ್ಯಾಶ್ ಬ್ಯಾಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.