ಬೆಂಗಳೂರು : ಕೊರೋನಾ ಲಾಕ್ಡೌನ್ ಕೃಷಿಕರಿಗೆ ಭಾರಿ ಹೊಡೆತ ಕೊಟ್ಟಿದೆ, ಲಕ್ಷಾಂತರ ಮಂದಿ ಕಷ್ಟಪಟ್ಟು ಬೆಳೆದ ಫಸಲು ಜಮೀನಿನಲ್ಲೇ ಕೊಳೆಯುತ್ತಿದೆ. ತರಕಾರಿ, ಹೂವು, ಹಣ್ಣು, ಧಾನ್ಯ ಬೆಳದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಸೂಕ್ತ ಮಾರುಕಟ್ಟೆ ಸಿಗದೆ, ಅತ್ತ ವ್ಯಾಪಾರವೂ ಆಗದೆ ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ರೈತರ ನೆರವಿಗೆ ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಉಪೇಂದ್ರ ಬಂದಿದ್ದಾರೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಕೊಟ್ಟು ಖರೀದಿಸುತ್ತೆ ಎಂದು ಉಪೇಂದ್ರ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಸಾಮಾಜಿಕ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ(Real star Upendra) ಕೊರೋನಾ ಸಂಕಷ್ಟ ಕಾಲದಲ್ಲೂ ಹಲವರಿಗೆ ನೆರವಿನ ಹಸ್ತಚಾಚಿದ್ದಾರೆ. ಬಡ ಜನರಿಗೆ ಆಹಾರ ಕಿಟ್ಗಳನ್ನು ವಿತರಿಸುತ್ತಿದ್ದಾರೆ. ಉಪ್ಪಿ ಅವರ ಕಾರ್ಯಕ್ಕೆ ಸಾಥ್ ನೀಡಲು ದಾನಿಗಳು ಹಣ ಸಹಾಯ ಮಾಡುತ್ತಿದ್ದಾರೆ.
ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ....
ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ.
ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ( 24 ಮೇ 2021 ರ ಒಳಗೆ )
Mbl no 9845763396— Upendra (@nimmaupendra) May 15, 2021
ಇದನ್ನೂ ಓದಿ : Paresh Rawal Shared His Demise News: ಅಭಿಮಾನಿಗಳ ಜೊತೆಗೆ ತನ್ನ ಸಾವಿನ ಸುದ್ದಿ ಹಂಚಿಕೊಂಡ Paresh Rawal! ಅಭಿಮಾನಿಗಳು ಮಾಡಿದ್ದೇನು?
'ಕೊರೋನಾ ಲಾಕ್ಡೌನ್(Corona Lockdown) ಪರಿಣಾಮ ರೈತರು ಬೆಳೆದ ಬೆಳೆ ಮಾರಾಟ ಆಗದೆ ಸಂಕಷ್ಟದಲ್ಲಿದ್ದಾರೆ. ನಮಗೆ ದಾನಿಗಳಿಂದ ಬಂದ ಹಣದಲ್ಲಿ ರೈತರ ಬಳಿ ನೇರವಾಗಿ ತರಕಾರಿಗಳನ್ನು ಖರೀದಿಸಿ ದಿನಸಿ ಕಿಟ್ ಜತೆಯಲ್ಲಿ ನೀಡುತ್ತೇವೆ' ಎಂದು ನಟ ಉಪೇಂದ್ರ ಇತ್ತೀಚಿಗೆ ಟ್ವೀಟ್ ಮೂಲಕ ತಿಳಿಸಿದ್ದರು.
ರೈತರು ಹಂಚಿಕೊಳ್ಳಬೇಕಾದ ಮಾಹಿತಿ
1.ನೀವು ಬೆಳೆದ ಬೆಳೆ ಯಾವುದು ?
2.ಆ ಬೆಳೆ ಎಷ್ಟು ಕೆಜಿ/ ಕ್ವಿಂಟಾಲ್ ಇದೆ ?
3.ಅದರ ಅಂತಿಮ ಬೆಲೆ ಎಷ್ಟು ?
4.ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವಚ್ಚ ಎಷ್ಟು ? ಈ ವಿವರಗಳನ್ನು ದಯವಿಟ್ಟು ಕಳಿಸಿಕೊಡಿ.
5.ವಾಟ್ಸ್ಅಪ್ ನಂಬರ್ +91 98457 63396.— Upendra (@nimmaupendra) May 15, 2021
ಇದನ್ನೂ ಓದಿ : 'ನನಗೆ ವಯಸ್ಸಾಗಿದ್ದರಿಂದ ನನ್ನ ದೇಹವೂ ಬದಲಾಗಿದೆ'- ಪ್ರಿಯಾಂಕಾ ಚೋಪ್ರಾ
ಇದೀಗ ಮತ್ತೊಮ್ಮೆ ಟ್ವೀಟ್(Tweet) ಮಾಡಿರುವ ಉಪೇಂದ್ರ, 'ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ. ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಖರೀದಿಸಿ ಬೇಕಿರುವವರಿಗೆ ಹಂಚುತ್ತೇವೆ. ಈ ನಂಬರ್ಗೆ 98457 63396 ಕರೆ ಮಾಡಿ (24ರ ಮೇ 2021ರ ಒಳಗೆ). ಎಂದು ಬರೆದು ಕೊಂಡಿದ್ದಾರೆ.
ಇದನ್ನೂ ಓದಿ : Happy Birthday Sunny Leone : 10 ಸಾವಿರ ವಲಸೆ ಕಾರ್ಮಿಕರ ನೆರವಿಗೆ ನಿಂತು 'ಬರ್ತ್ ಡೇ' ಆಚರಿಸಿಕೊಂಡ ಸನ್ನಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.