ಪಶ್ಚಿಮ ಬಂಗಾಳ : ಕಳೆದ ವರ್ಷ, ಪಶ್ಚಿಮ ಬಂಗಾಳದ ದುರ್ಗಾಪುರ ಪ್ರದೇಶದಿಂದ ಆಘಾತಕಾರಿ ವರದಿಯೊಂದು ಹೊರಬಿದ್ದಿತ್ತು. ಅಲ್ಲಿ ಸುವಾಸನೆಯ ಕಾಂಡೋಮ್‌ಗಳ ಮಾರಾಟವು ಗಗನಕ್ಕೇರಿತ್ತು. ನೀವು ಯೋಚಿಸುವ ಪ್ರಕಾರ, ಅಲ್ಲಿ ಮಾರಾಟವಾದ ಕಾಂಡೋಮ್‌ಗಳನ್ನು ಸುರಕ್ಷಿತ ಲೈಂಗಿಕತೆಗೆ ಬಳಸಲಾಗುತ್ತಿದ್ದಿಲ್ಲ, ಬದಲಿಗೆ ಅವುಗಳನ್ನು ಮಾದಕ ವ್ಯಸನಕ್ಕಾಗಿ ಬಳಸಲಾಗುತ್ತಿತ್ತು.


COMMERCIAL BREAK
SCROLL TO CONTINUE READING

ಹೌದು.. ನೀವು ಕೇಳಿದ್ದು, ನಿಜ ಕೆಲವು ಅಧ್ಯಯನಗಳ ಪ್ರಕಾರ, ದುರ್ಗಾಪುರದಲ್ಲಿ ಸುವಾಸನೆಯ ಕಾಂಡೋಮ್‌ಗಳ ಮಾರಾಟ ಗಗನಕ್ಕೇರಿದೆ ಅಲ್ಲದೆ, ಬೇಡಿಕೆ ಹೆಚ್ಚಾಗಿದೆ. ಲೈಂಗಿಕ ಸುರಕ್ಷತೆಗೂ ಹೊರತಾಗಿ ಕಾಂಡೋಮ್‌ನಲ್ಲಿರುವ ರಾಸಾಯನಿಕವನ್ನು ಜನರು ಮಾದಕ ವಸ್ತುವಾಗಿ ಬಳಸುತ್ತಿರುವ ಭಯಾನಕ ಅಂಶ ಹೊರಬಿದ್ದಿದೆ. ಸೇಬುಗಳು, ಸ್ಟ್ರಾಬೆರಿಗಳು ಮತ್ತು ಚಾಕೊಲೇಟ್‌ಗಳಂತಹ ಸುವಾಸನೆ ಮತ್ತು ಲೂಬ್ರಿಕೇಟೆಡ್ ಕಾಂಡೋಮ್‌ಗಳ ಮಾರಾಟವು ಸಾಕಷ್ಟು ಹೆಚ್ಚಾಗಿದೆ. ಯುವಕರು ನಿರೋಧದಲ್ಲಿರುವ ರಾಸಾಯನಿಕ ವಸ್ತುವಿಗಾಗಿ ಹೆಚ್ಚಾಗಿ ಕಾಂಡೋಮ್‌ ಖರೀದಿಸುತ್ತಿದ್ದಾರೆ ಎಂದು ಮೆಡಿಕಲ್ ಸ್ಟೋರ್‌ನ ಅಂಗಡಿ ಮಾಲೀಕರೊಬ್ಬರು ತಿಂಗಳ ಹಿಂದೆ ಬಹಿರಂಗಪಡಿಸಿದರು.


ಇದನ್ನೂ ಓದಿ: ಬಾರ್ಡರ್ ಬ್ಯಾರಿಯರ್ ಆಗದಿರಲಿ, ನಮ್ಮ ಪಾರ್ಟ್ನರ್ ಶಿಪ್ ಹಿಟ್...' ನೇಪಾಳ ಪ್ರಧಾನಿ ಭೇಟಿಯ ಬಳಿಕ ಪಿಎಂ ಮೋದಿ ಮಾತು


ಕಾಂಡೋಮ್‌ಗಳು ಮಾದಕ ವ್ಯಸನಕ್ಕೆ ಹೇಗೆ ಕಾರಣವಾಗಬಹುದು? : ರಸಾಯನಶಾಸ್ತ್ರದ ಶಿಕ್ಷಕರ ಪ್ರಕಾರ, ಸುವಾಸನೆಯ ಕಾಂಡೋಮ್ ಅನ್ನು ದೀರ್ಘಕಾಲದವರೆಗೆ ಬಿಸಿನೀರಿನಲ್ಲಿ ನೆನೆಸಿದರೆ, ಸುವಾಸನೆಯಲ್ಲಿರುವ ದೊಡ್ಡ ರಾಸಾಯನಿಕ ಅಣುಗಳು ಒಡೆದು ಆಲ್ಕೊಹಾಲ್ಯುಕ್ತ ಸಂಯುಕ್ತಗಳಾಗಿ ರೂಪಗೊಳ್ಳುತ್ತವೆ, ಇದನ್ನೇ ಯುವಕರು ಬಳಸುತ್ತಾರೆ. ಇದು ಸುಗಂಧ ಮತ್ತು ಹೊಗೆಯ ರೂಪವಾಗಿ ಹೊರಬರುತ್ತದೆ. ಇದನ್ನೇ ಯುವಕರು ಬಳಸುತ್ತಿದ್ದಾರೆ. ಆದ್ರೆ, ಕಾಂಡೋಮ್‌ ಕುದಿಸಿದಾಗ ಹೊರ ಸೂಸುವ ಸುವಾಸನೆ ಮತ್ತು ಹೊಗೆಯು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಅಲ್ಲದೆ, ಶಾಶ್ವತ ಮಿದುಳಿನ ಹಾನಿ ಉಂಟುಮಾಡುತ್ತದೆ. ಇದಲ್ಲದೆ, ಈ ರಾಸಾಯನಿಕ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ