ಮುಂಬೈ: ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಮುಂಬೈನ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಕಾರಣ ಎನ್‌ಸಿಬಿ ತಂಡ ಬೆಳಿಗ್ಗೆ 6:30 ರ ಸುಮಾರಿಗೆ ರಿಯಾ ಚಕ್ರವರ್ತಿ ಅವರ ಮನೆ ಮೇಲೆ ದಾಳಿ ನಡೆಸಿದೆ. ಎನ್‌ಸಿಬಿಯ 5 ಸದಸ್ಯರ ತಂಡ ರಿಯಾ ಮನೆಯೊಳಗೆ ಹೋಗಿದೆ. ಮುಂಬೈ ಪೊಲೀಸ್ ತಂಡವೂ ಎನ್‌ಸಿಬಿಯೊಂದಿಗೆ ಇದೆ. ರಿಯಾ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.


COMMERCIAL BREAK
SCROLL TO CONTINUE READING

ED ತಂಡದಿಂದ ಶೋವಿಕ್ ವಿಚಾರಣೆ
ಇನ್ನೊಂದೆಡೆ ಸುಶಾಂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತಂಡವು ಇಂದು ಶೋವಿಕ್ ಚಕ್ರವರ್ತಿಯನ್ನುವಿಚಾರಿಸುವ ಸಾಧ್ಯತೆ ಇದೆ. ಇದೆ ವೇಳೆ ಎನ್‌ಸಿಬಿ ತಂಡವು ಇಂದೂ ಕೂಡಾ ಆಕ್ಷನ್ ಮೋಡ್ ನಲ್ಲಿ ಇರಲಿದೆ. ರಿಯಾ ಸಹೋದರ ಶೋವಿಕ್ ಮತ್ತು ಅವನ ಡ್ರಗ್ ಗ್ಯಾಂಗ್ ಬಗ್ಗೆ ಎನ್‌ಸಿಬಿ ತನ್ನ ಮಾಹಿತಿದಾರರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಕೆಲವು ಜನರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ. 


CBI ತಂಡದಿಂದ ಸುಶಾಂತ್ ಸಿಂಗ್ ವೈದ್ಯರ ವಿಚಾರಣೆ
ಸುಶಾಂತ್ ಸಿಂಗ್ ರಾಜ್ಪುತ್ ಅವರ ಡಿಪ್ರೆಶನ್ ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ವಿಚಾರಣೆಯನ್ನು ಇಂದು ಸಿಬಿಐ  ತಂಡ ನಡೆಸಲಿದೆ. ಇದಲ್ಲದ ಸಿಬಿಐ ಸಿದ್ಧಾರ್ಥ್ ಪೀಠಾನಿ, ಕೇಶವ್ ಹಾಗೂ ನೀರಜ್ ಜೊತೆಗೆ ರಿಯಾ ಚಕ್ರವರ್ತಿ ಕುಟುಂಬ ಸದಸ್ಯರನ್ನು ಸಹ ಸಿಬಿಐ ತಂಡ ವಿಚಾರಣೆ ನಡೆಸುವ ಸಾಧ್ಯತೆ ಇದೆ.


ಎನ್‌ಸಿಬಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಶೋವಿಕ್ ಅಬ್ದುಲ್ ಬಸಿತ್‌ನಿಂದ ಡ್ರಗ್ಸ್ ಪಡೆದುಕೊಂಡಿದ್ದ ಎನ್ನಲಾಗಿದೆ. ಇದಕ್ಕೂ ಮುನ್ನ ಮಂಗಳವಾರ ಎನ್‌ಸಿಬಿ ಜೈದ್ ವಿಲತ್ರಾ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರುಅಬ್ದುಲ್ ಬಸಿತ್, ಜೈದ್ ಹೆಸರಿನ ವ್ಯಕ್ತಿಯನ್ನು ಶೋವಿಕ್ ಗೆ ಪರಿಚಯಿಸಿದ್ದ ಎನ್ನಲಾಗಿದೆ.


ಶೋವಿಕ್ ಹಾಗೂ ಸ್ಯಾಮ್ಯುಯೆಲ್ ಮಿರಾಂಡಾ ಅವರ ಚ್ಯಾಟ್ ನಿಂದ ಮಾಹಿತಿ ಬಹಿರಂಗ
ಮಾರ್ಚ್ 17, 2020 ರಂದು, ಶೋವಿಕ್ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ನಡುವೆ ಚಾಟ್ ನಡೆದಿದೆ.  ಇದರಲ್ಲಿ, ಶೋವಿಕ್ ಚಕ್ರವರ್ತಿ, ಜೈದ್ ವಿಲತ್ರಾ ಮೊಬೈಲ್ ಸಂಖ್ಯೆಯನ್ನು ಸ್ಯಾಮ್ಯುಯೆಲ್ ಮಿರಾಂಡಾಗೆ ನೀಡಿ 10 ಲಕ್ಷ ರೂ.ಹಣ ಪಾವತಿಸಿ ಜೈದ್ ಬಳಿಯಿಂದ 5 ಗ್ರಾಂ ಡ್ರಗ್ಸ್ ಖರೀದಿಸುವಂತೆ ಹೇಳಿದ್ದ.