Trending Video: ಹೊಟ್ಟೆಗೆ ಗುಂಡು ಸೇರಿದ ವ್ಯಕ್ತಿಗೆ ಒಂದು ಸರಳವಾದ ಕೆಲಸ ಮಾಡುವುದು ಕೂಡ ಪರ್ವತಾರೋಹಣ ಮಾಡಿದ್ದಕ್ಕೆ ಸಮ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿಯು ಮದ್ಯಪಾನ ಮಾಡಿದರೆ ಅವನಿಗೆ ನೇರವಾಗಿ ನಡೆಯಲು ಸಹ ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅವನಿಂದ ಏನನ್ನು ನಿರೀಕ್ಷಿಸಬಹುದು? ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರ ಎಂಬುದು ಹೇಳುವ ವಿಷಯವಲ್ಲ ಮತ್ತು ಇದು ಎಲ್ಲರಿಗೂ ತಿಳಿದಿದೆ, ಆದರೂ ಕೂಡ ಜಾಹೀರಾತುಗಳ ಮೂಲಕ ಜಾಗ್ರತಿ ಮೂಡಿಸಲಾಗುತ್ತಿದೆ. ಆದರೂ ಕೂಡ ಕೆಲವರು ಬಾರ್ ಗಳಲ್ಲಿ ಕುಳಿತು ಕುತ್ತಿಗೆಯವರೆಗೆ ಬರುವಂತೆ ಟೈಟ್ ಆಗುತ್ತಾರೆ. ಬಳಿಕ ಅವರು ನೋಡಲು ತುಂಬಾ ತಮಾಷೆಗೀಡಾಗುತ್ತಾರೆ. ಇತ್ತೀಚೆಗೆ ಇಬ್ಬರು ಕುಡುಕರು ಬೈಕ್‌ ಹತ್ತಲು ಹರಸಾಹಸ ಪಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Video Viral : ಹೆಣ್ಣು ಹಾವಿಗಾಗಿ 5 ಗಂಟೆಗಳ ಕಾಲ ಕಾದಾಡಿದ ಗಂಡು ನಾಗರ ಹಾವುಗಳು!


ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೈಕ್ ಮೇಲೆ ಕುಳಿತಿರುವುದು ಕಂಡು ಬರುತ್ತಿದೆ. ಇಬ್ಬರೂ ಹೊರಡಲು ಆಣಿಯಾಗಿದ್ದಾರೆ ಮತ್ತು ಬೈಕ್ ನಲ್ಲಿ ಕುಳಿತ ಕುಡುಕ ಮತ್ತೊಬ್ಬ ಕುಡುಕ ಬೈಕ್ ಮೇಲೆ ಕುಳಿತುಕೊಳ್ಳುವುದನ್ನು ಕಾಯುತ್ತಿದ್ದಾನೆ. ಆದರೆ, ಆ ಮತ್ತೊಬ್ಬ ವ್ಯಕ್ತಿಗೆ ಬೈಕ್‌ನಲ್ಲಿ ಕುಳಿತುಕೊಳ್ಳುವುದು ಒಂದು ಬೆಟ್ಟ ಹತ್ತುವ ಅನುಭವವೆ ಆಗಿದೆ. ಕುಡಿದ ಅಮಲಿನಲ್ಲಿ ಆ ವ್ಯಕ್ತಿ ಅತ್ತಿತ್ತ ತೂಗಾಡುತ್ತಾ ನೆಲದ ಮೇಲೆ ಬೀಳುತ್ತಾ-ಹೊರಳಾಡುತ್ತಾ, ಕಷ್ಟಪಟ್ಟು ಮತ್ತೆ ಎದ್ದು ಬೈಕ್ ಮೇಲೆ ಕೂರುತ್ತಾನೆ. ಈ ಮಧ್ಯೆ ಬೈಕ್ ನಲ್ಲಿ ಕುಳಿತ ಕುಡುಕನ ಬ್ಯಾಲೆನ್ಸ್ ಬಿಗಡಾಯಿಸುತ್ತದೆ ಮತ್ತು ಇಬ್ಬರೂ ಬೈಕ್ ಸಮೇತ ನೆಲದ ಮೇಲೆ ಬೀಳುತ್ತಾರೆ.


ಇದನ್ನೂ ಓದಿ-Viral Video: ನೀರು ಕುಡಿಯುತ್ತಿದ್ದ ಚಿರತೆಯ ಮೇಲೆ ದಾಳಿ ಇಟ್ಟ ಹೆಬ್ಬಾವು... ಮುಂದೆ ನಡೆದಿದ್ದೇನು ತಿಳಿಯಲು ವಿಡಿಯೋ ನೋಡಿ


ಜೈಕಿ ಯಾದವ್ ಹೆಸರಿನ ಟ್ವಿಟ್ಟರ್ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ‘ವ್ಯಕ್ತಿ ಬೈಕ್ ಮೇಲೆ ಕೂರಲು ತುಂಬಾ ಪ್ರಯತ್ನ ಮಾಡುತ್ತಿದ್ದಾನೆ, ಇಲ್ಲಿಯೇ ಹೋರಾಟ ನಡೆಯುತ್ತದೆ’ ಎಂಬ ಶೀರ್ಷಿಕೆಯನ್ನು ಅದಕ್ಕೆ ನೀಡಲಾಗಿದೆ. ಸುದ್ದಿ ಬರೆಯುವ ವರೆಗೆ, ಸುಮಾರು 2 ಲಕ್ಷ 89 ಸಾವಿರಕ್ಕೂ ಹೆಚ್ಚು ಬಳಕೆದಾರರು ವೀಡಿಯೊವನ್ನು ವೀಕ್ಷಿಸಿದ್ದಾರೆ. 9 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ವೀಡಿಯೊಗೆ ಜನರ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ, ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಬಳಕೆದಾರರೊಬ್ಬರು 'ಹಮ್ ತೊ ಗಿರೆಂಗೆ ತುಮ್ಹೇಭಿ ಲೇ ಗಿರೆಂಗೆ' ಎಂದು ಬರೆದುಕೊಂಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.