ಪಾಟ್ನಾದಲ್ಲಿ ಹಕ್ಕಿ ತಗುಲಿ ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ
ನವದೆಹಲಿ: ಪಾಟ್ನಾದಿಂದ ದೆಹಲಿಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಬಡಿದು ತುರ್ತು ಭೂಸ್ಪರ್ಶ ಮಾಡಿದ ಘಟನೆ ಪಾಟ್ನಾದಲ್ಲಿ ನಡೆದಿದೆ.
ಎಎನ್ಐ ಸುದ್ದಿ ಸಂಸ್ಥೆ ವರದಿ ಪ್ರಕಾರ ಸುಮಾರು 124 ಪ್ರಯಾಣಿಕರೊಂದಿಗೆ ಪ್ರಯಾಣಿನಿಸುತ್ತಿದ್ದ ಫ್ಲೈಟ್ AI 410 ಪಾಟ್ನಾದ ಜಯಪ್ರಕಾಶ ನಾರಾಯಣ ನಿಲ್ದಾಣದಲ್ಲಿ ಪಕ್ಷಿ ತಗುಲಿದ್ದರಿಂದಾಗಿ ಎಂಜಿನ್ ನ ಒಂದು ಭಾಗದಲ್ಲಿ ದೋಷ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ವಿಮಾನ ತಕ್ಷಣ ತುರ್ತು ಭೂಸ್ಪರ್ಶ ಮಾಡಿದೆ. ನಂತರ ತಕ್ಷಣ ಈ ವಿಮಾನವನ್ನು ಪರಿಶೀಲನೆ ಒಳಪಡಿಸಿ ಪ್ರಯಾಣಿಕರಿಗೆ ಮತ್ತೊಂದು ವಿಮಾನದಲ್ಲಿ ತೆರಳುವ ವ್ಯವಸ್ಥೆಯನ್ನು ಮಾಡಲಾಯಿತು ಎನ್ನಲಾಗಿದೆ.
ವಿಮಾನದಲ್ಲಿದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.