ನವದೆಹಲಿ : ಮದುವೆ, ನೃತ್ಯ ಮತ್ತು ಹಾಸ್ಯಕ್ಕೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದ (Social media) ಜಗತ್ತಿನಲ್ಲಿ ಬಹಳಷ್ಟು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವು ವೀಡಿಯೊಗಳನ್ನು ನೋಡಿದಾಗ, ನಾವು ಭಾವುಕರಾಗುತ್ತೇವೆ, ಆದರೆ ಕೆಲವನ್ನು ನೋಡಿದ ನಂತರ ನಗು ತಡೆಯುವುದೇ ಇಲ್ಲ. ಇದೇ ರೀತಿಯ ವೀಡಿಯೊವನ್ನು (viral video) ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಸಾಕಷ್ಟು ಕಂಡು ಬರುತ್ತದೆ. ಈ ವೀಡಿಯೊ ವರನಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ವರನ ಸ್ನೇಹಿತರು ಏನು ಮಾಡುತ್ತಾರೆ ಎನ್ನುವುದನ್ನು ನೋಡಿದರೆ ತಿಳಿಯುತ್ತದೆ.  ಈ ತಮಾಷೆಯ ವೀಡಿಯೊವನ್ನು ಇಲ್ಲಿಯವರೆಗೆ ಬಹಳಷ್ಟು ಮಂದಿ ವೀಕ್ಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕೆಲವು ಸೆಕೆಂಡುಗಳ ಈ ವೀಡಿಯೋ ಅರಿಶಿನಶಾಸ್ತ್ರಕ್ಕೆ (haldi shaastra) ಸಂಬಂಧಿಸಿದ್ದಾಗಿದೆ. ಈ ವಿಡಿಯೋದಲ್ಲಿ (Viral video) ವರನಿಗೆ ಅರಿಶಿನ ಹಚ್ಚುತ್ತಿರುವುದನ್ನು ಕಾಣಬಹುದು. ಆದರೆ, ಇದ್ದಕ್ಕಿದ್ದಂತೆ ವರನ ಸ್ನೇಹಿತರು  ಅಲ್ಲಿಗೆ ಬರುತ್ತಾರೆ. ಅರಿಶಿನ ಹಚ್ಚುವ ಮುನ್ನ  ಸ್ನೇಹಿತರು ವರನ ಕುರ್ತಾವನ್ನು ಹರಿದು ಹಾಕುವುದನ್ನು ಕೂಡಾ ಕಾಣಬಹುದು. ಕುರ್ತಾವನ್ನು ಹರಿದು ಹಾಕಿದ ನಂತರ, ಸ್ನೇಹಿತರು ವರನ (bridegroom) ಮೇಲೆ ಮಯೋನೀಸ್ ಸುರಿಯುತ್ತಾರೆ. ವರನ ಸ್ನೇಹಿತರ ಕೆಲಸ ನೋಡಿ ನೆರೆದವರು ಜೋರಾಗಿ ನಗುತ್ತಿರುವುದು ಕೂಡಾ ಇಲ್ಲಿ ಕೇಳಿಸುತ್ತದೆ. ಇನ್ನೊಬ್ಬ ಸ್ನೇಹಿತ ಸಾಸ್ ಮತ್ತು ಹೂವುಗಳನ್ನು (flower) ವರನ ಮೇಲೆ ಸುರಿಯುತ್ತಾನೆ.  ಕೊನೆಗೆ ಸೋಡಾದಿಂದ ಸ್ನಾನ ಮಾಡಿಸಲಾಗುತ್ತದೆ. 


ಇದನ್ನೂ ಓದಿ : VIRAL VIDEO : ಮದುವೆ ದಿನವೇ ಎಲ್ಲರ ಮೇಲೆ ಮುನಿಸಿಕೊಂಡು ಛಾವಣಿ ಏರಿ ಕುಳಿತ ವಧು, ಓಲೈಸಿ ಸುಸ್ತಾದ ವರ ಮತ್ತು ಕುಟುಂಬ


 

 

 

 



 

 

 

 

 

 

 

 

 

 

 

A post shared by Happyframes (@happyframes_)


ಅಲ್ಲದೆ, ಸ್ವಲ್ಪ ಹೊತ್ತು ಹೀಗೆಯೇ ಇರಿ ಎಂದು ಸ್ನೇಹಿತರು ಹೇಳುವುದನ್ನು ಕೂಡಾ ವಿಡಿಯೋದಲ್ಲಿ (video) ಕೇಳಬಹುದು. ತಮಾಷೆಯ ವಿಡಿಯೋಗೆ ನೆಟಿಜನ್‌ಗಳು ಬಹಳ ಸಂಖ್ಯೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ : Viral Video: ವರ ತಾಳಿ ಕಟ್ಟುತ್ತಿದ್ದ ವೇಳೆ ವಧು ಏಕೆ ಹೀಗೆ ಮಾಡಿದಳು..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ