Viral Video: ವರ ತಾಳಿ ಕಟ್ಟುತ್ತಿದ್ದ ವೇಳೆ ವಧು ಏಕೆ ಹೀಗೆ ಮಾಡಿದಳು..?

ಸಾಮಾನ್ಯವಾಗಿ ಮದುವೆ ದಿನ ನವದಂಪತಿಗೆ ಸ್ನೇಹಿತರು ಕಾಲೆಳೆದು ತಮಾಷೆ ನೋಡುತ್ತಾರೆ, ಸ್ವತಃ ವಧುವೇ ತನ್ನ ಬಾಳಸಂಗಾತಿಗೆ ಕಿಚಾಯಿಸಲು ಹೋಗಿ ನೆರೆದಿದ್ದವರಿಗೆ ಆಘಾತವನ್ನುಂಟು ಮಾಡಿದ್ದಾಳೆ.

Written by - Puttaraj K Alur | Last Updated : Sep 25, 2021, 01:56 PM IST
  • ಭಾವಿ ಪತಿಗೆ ಕಿಚಾಯಿಸಲು ಹೋಗಿ ವಧು ಮಾಡಿದ್ದಾಳೆ ಸೂಪರ್ ಫ್ರ್ಯಾಂಕ್
  • ವಧುವಿನ ತಮಾಷೆಯಿಂದ ಮದುವೆ ಮಂಟಪದಲ್ಲಿ ನೆರೆದಿದ್ದವರೆಲ್ಲಾ ಗಾಬರಿ
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ವಧುವಿನ ಫನ್ನಿ ವಿಡಿಯೋ
Viral Video: ವರ ತಾಳಿ ಕಟ್ಟುತ್ತಿದ್ದ ವೇಳೆ ವಧು ಏಕೆ ಹೀಗೆ ಮಾಡಿದಳು..?

ನವದೆಹಲಿ: ಮದುವೆ ಅಂದರೆ ಅಲ್ಲಿ ಸಂಭ್ರಮವು ಮನೆಮಾಡಿರುತ್ತದೆ. ಖುಷಿಯ ಜೊತೆಗೆ ತಮಾಷೆ, ಕೀಟಲೆ, ಹಾಸ್ಯ ಹೀಗೆ ಅನೇಕ ಚಿತ್ರ-ವಿಚಿತ್ರ ಪ್ರಸಂಗಗಳು ನಡೆಯುತ್ತಿರುತ್ತವೆ. ಮದುವೆ ಸಂಭ್ರಮದ ವೇಳೆಯೇ ಅನಿರೀಕ್ಷಿತವಾಗಿ ಜರುಗುವ ಘಟನೆಗಳು ಕುಟುಂಬ ಸದಸ್ಯರಿಗೆ ಆಘಾತವನ್ನುಂಟು ಮಾಡಿರುತ್ತವೆ. ಇನ್ನೇನು ಮದುವೆ ಆಗಿಯೇ ಬಿಟ್ತು ಎಂದು ಎಲ್ಲರೂ ವಧು-ವರರಿಗೆ ಅಕ್ಷತೆ ಹಾಕಬೇಕೆಂದು ಕಾಯುತ್ತಿದ್ದಾಗಲೇ ಏನೋ ಒಂದು ಯಡವಟ್ಟು ಆಗಿಬಿಟ್ಟಿರುತ್ತದೆ. ಅದೇ ರೀತಿಯ ಮತ್ತೊಂದು ಘಟನೆ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿದೆ.

ಮದುವೆಯ ಸಂಭ್ರಮದ ದಿನ ನಡೆಯುವ ತಮಾಷೆಯ ವಿಡಿಯೋ(Wedding Viral Video)ಗಳನ್ನು ನೀವು ನೋಡೇ ಇರ್ತಿರಿ. ಅದರ ಸಾಲಿಗೆ ಇದೀಗ ಮತ್ತೊಂದು ವಿಚಿತ್ರ ಪ್ರಸಂಗ ಸೇರ್ಪಡೆಯಾಗಿದೆ. ಇಲ್ಲಿ ಸ್ವತಃ ವಧುವೇ ತನ್ನ ಭಾವಿ ಪತಿಗೆ ಶಾಕ್ ನೀಡಿದ್ದಾಳೆ. ವಧುವಿನ ಫ್ರ್ಯಾಂಕ್ ನಿಂದ ಮದುವೆ ಮಂಟಪದಲ್ಲಿ ನೆರೆದಿದ್ದವರೂ ಒಂದುಕ್ಷಣ ಗಾಬರಿಯಾಗಿಬಿಟ್ಟಿದ್ದರು. ಅಷ್ಟಕ್ಕೂ ವಧು ಮಾಡಿದ್ದಾದರೂ ಏನು ಅಂತೀರಾ..?

ಇದನ್ನೂ ಓದಿ: ನವೆಂಬರ್ 4 ರವರೆಗೆ ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಪಡೆಯಿರಿ 10,000 ರೂ. ವರೆಗೆ ಕ್ಯಾಶ್‌ಬ್ಯಾಕ್

ಸಾಮಾನ್ಯವಾಗಿ ಮದುವೆ(Wedding Day)ದಿನ ನವದಂಪತಿಗೆ ಸ್ನೇಹಿತರು ಕಾಲೆಳೆದು ತಮಾಷೆ ನೋಡುತ್ತಾರೆ. ಆದರೆ ಈ ಪ್ರಸಂಗದಲ್ಲಿ ಆಗಿದ್ದೇ ಬೇರೆ. ಸ್ವತಃ ವಧುವೇ ತನ್ನ ಬಾಳಸಂಗಾತಿಗೆ ಕಿಚಾಯಿಸಲು ಹೋಗಿ ನೆರೆದಿದ್ದವರಿಗೆ ಆಘಾತವನ್ನುಂಟು ಮಾಡಿದ್ದಾಳೆ. ಮದುವೆ ಮಂಟಪದಲ್ಲಿ ವರ ವಧುವಿಗೆ ಮಂಗಳ ಸೂತ್ರ ಕಟ್ಟಲು ಎದ್ದು ನಿಲ್ಲುತ್ತಾನೆ. ಆದರೆ ಇದ್ದಕ್ಕಿದ್ದಂತೆ ವಧು ನನಗೆ ಈ ಮದುವೆ ಬೇಡ ಅಂತಾ ಕೈಬಿಸುತ್ತಾ ಮಂಟಪದಿಂದ ಅತಿವೇಗದಲ್ಲಿ ಕಳೆಗೆ ಇಳಿದು ಹೋಗುತ್ತಾಳೆ. ಅಯ್ಯೋ ಏನಾಯ್ತು ಅಂತಾ ನೆರೆದಿದ್ದವರೆಲ್ಲಾ ಗಾಬರಿಯಾಗಿದ್ದಾರೆ. ವರನಂತೂ ಫುಲ್ ಶಾಕ್ ಆಗಿ ನಿಂತಲ್ಲೇ ನಿಂತುಬಿಟ್ಟಿದ್ದಾನೆ.

 
 
 
 

 
 
 
 
 
 
 
 
 
 
 

A post shared by Niranjan Mahapatra (@official_viralclips)

ವಧು(Bride)ವಿನ ಈ ತಮಾಷೆಯಿಂದ ಕೆಲ ಸಮಯ ಅಲ್ಲಿ ಏನಾಗುತ್ತಿದೆ ಎಂಬುದೇ ಯಾರಿಗೂ ಅರ್ಥವಾಗಲಿಲ್ಲ. ಈ ದೃಶ್ಯ ನೋಡಿದರೆ ನನಗೆ ಮದುವೆಯೇ ಬೇಡ ಅಂತಾ ವಧು ಓಡಿಹೋಗುತ್ತಿದ್ದಾಳೇನೂ ಅನ್ನಿಸುತ್ತದೆ. ಆದರೆ ಆಕೆ ಬೇಕಂತಲೇ ಹೀಗೆ ಮಾಡಿ ವರ ಸೇರಿದಂತೆ ನೆರೆದಿದ್ದವರಿಗೆ ಫ್ರ್ಯಾಂಕ್ ಮಾಡಿದ್ದಾಳೆ. ಕಳೆಗಿಳಿದು ಹೋದ ವಧು ತಟ್ಟನೆ ನಿಂತುಕೊಂಡು ಜೋರಾಗಿ ನಗಲು ಶುರು ಮಾಡುತ್ತಾಳೆ. ಆಕೆಯ ವರ್ತನೆಯಿಂದ ಕೆಲವರು ಕನ್ಫ್ಯೂಷನ್ ಆಗಿಬಿಟ್ಟಿದ್ದರು. ಇನ್ನು ಕೆಲವರು ಆಕೆಯೊಂದಿಗೆ ನಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.  

ಇದನ್ನೂ ಓದಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ವೈರಸ್-ಮುಕ್ತವಾಗಿಸಲು ಬಳಸಿ ಗೂಗಲ್‌ನ ಈ ಫೀಚರ್

ತಾಳಿ ಕಟ್ಟುತ್ತಿದ್ದ ವರನನ್ನು ನಿಲ್ಲಿಸಿ ನಿನ್ನ ತಾಳಿಯೂ ಬೇಡ, ನನಗೆ ಈ ಮದುವೆಯೂ ಬೇಡ ಅಂತಾ ವಧು ದಡದಡನೆ ಮಂಟಪದಿಂದ ಹೋಗುತ್ತಿರುವುದನ್ನು ವಿಡಿಯೋ(Viral Video)ದಲ್ಲಿ ಕಾಣಬಹುದು. ಹಾಗೆ ಹೋದ ಆಕೆ ಒಂದು ಕ್ಷಣ ನಿಂತು ನಕ್ಕು ಮತ್ತೆ ಮಂಟಪವನ್ನೇರಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಆದರೆ ಆಕೆಯ ಈ ವಿಚಿತ್ರ ನಡುವಳಿಕೆ ಒಂದು ಕ್ಷಣ ನೆರೆದಿದ್ದವರಿಗೆ ಗಾಬರಿ ಹುಟ್ಟಿಸಿದಂತೂ ಸತ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
        

More Stories

Trending News