ನವದೆಹಲಿ: ಹವಾಮಾನ ಇಲಾಖೆಯ ಮುನ್ಸೂಚನೆಯು ನಿಜವೆಂದು ಸಾಬೀತಾಗಿದೆ. ಸೋಮವಾರ ರಾತ್ರಿ, ಧೂಳಿನ ಚಂಡಮಾರುತದ ಬಿರುಗಾಳಿ ರಾಷ್ಟ್ರೀಯ ರಾಜಧಾನಿಯಲ್ಲಿ ಅಬ್ಬರಿಸಿದೆ. ಇದು ತಾಪಮಾನದಲ್ಲಿ ಕೆಲವು ಕುಸಿತವನ್ನುಂಟುಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ರಾತ್ರಿ ಸುಮಾರು 11 ಗಂಟೆ ಮತ್ತು 15 ನಿಮಿಷದ ವೇಳೆಯಲ್ಲಿ  ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಿದೆ ಎಂದು ಸಫ್ದರ್ಜುಂಗ್ ವೀಕ್ಷಣಾಲಯದ ಅಧಿಕಾರಿಯೊಬ್ಬರು ಹೇಳಿದರು. ಹವಾಮಾನ ಇಲಾಖೆಯ ಸಲಹೆಯ ಮೇರೆಗೆ ದೆಹಲಿ-ಹರಿಯಾಣ, ರಾಜಸ್ಥಾನ, ಉತ್ತರಾಖಂಡ್ ಸೇರಿದಂತೆ ದೇಶದ 17 ರಾಜ್ಯಗಳಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಹವಾಮಾನ ಇಲಾಖೆಯು ರಾತ್ರಿ 08:53ರಲ್ಲಿ ಎಚ್ಚರಿಕೆಯ ಸಂದೇಶವನ್ನು ಜಾರಿಗೊಳಿಸಿತು. ಅದು ದೆಹಲಿ- NCR ಯಲ್ಲಿ ಮುಂದಿನ ಮೂರು ನಾಲ್ಕು ಗಂಟೆಗಳಲ್ಲಿ ಮಳೆ / ಧೂಳಿನ ಚಂಡಮಾರುತದ ಸಾಧ್ಯತೆ ಇರುತ್ತದೆ. ಇದು ಮಳೆ ಮುನ್ಸೂಚನೆ ಮತ್ತು ಬಲವಾದ ಗಾಳಿ ಮುನ್ಸೂಚನೆ ಎಂದು ಎಚ್ಚರಿಕೆ ನೀಡಿದೆ.



ದೆಹಲಿ-ಹರಿಯಾಣ ಶಾಲೆಗಳಿಗೆ ರಜಾ
ಇದಕ್ಕೂ ಮೊದಲು ದೆಹಲಿ ಮತ್ತು ಹರಿಯಾಣ ಸರ್ಕಾರ ಸೋಮವಾರ ಸಂಜೆ ಶಿಫ್ಟ್ ಶಾಲೆಗಳಿಗೆ ರಜೆ ಘೋಷಿಸಿದವು. ಅಲ್ಲದೆ ಪಾರುಗಾಣಿಕೆ ತಂಡಕ್ಕೆ ಅಲರ್ಟ್ ಆಗಿರುವಂತೆ ಸೂಚಿಸಲಾಗಿತ್ತು. ಭಾರೀ ಮಳೆ ಮತ್ತು ಚಂಡಮಾರುತದ ಎಚ್ಚರಿಕೆಯನ್ನು ನೀಡುವ ನಿಟ್ಟಿನಲ್ಲಿ ಹವಾಮಾನ ಇಲಾಖೆಯು ಈ ಸಿದ್ಧತೆಯನ್ನು ಮಾಡಿದೆ.


ಮೆಟ್ರೋ ಸಂಚಾರದಲ್ಲಿ ಅಡಚಣೆ
ಭಾರೀ ಬಿರುಗಾಳಿಯಿಂದ ಧರೆಗುರುಳಿದ ಮರಗಳನ್ನು ತೆಗೆದು ಹಾಕಲು ಟ್ರಾಫಿಕ್ ಪೋಲೀಸ್ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಪ್ರಯಾಣಿಸುವ ಮೊದಲು ಹವಾಮಾನ ಪರಿಸ್ಥಿತಿಗಳನ್ನು ನೋಡಲು ಪ್ರಯಾಣಿಕರಿಗೆ ಪೊಲೀಸರು ಸೂಚಿಸಿದ್ದಾರೆ. ಎಚ್ಚರಿಕೆಗಳ ನಡುವೆ ರೈಲುಗಳ ಕಾರ್ಯಾಚರಣೆಯಲ್ಲಿ ಅತ್ಯಂತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ದೆಹಲಿ ಮೆಟ್ರೋ ನಿರ್ಧರಿಸಿದೆ.



ಹಿಮಾಚಲ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಹಿಮಪಾತ
ಹಿಮಾಚಲ ಪ್ರದೇಶದ ಕೇಂದ್ರ ಮತ್ತು ಕೆಳ ಬೆಟ್ಟಗಳಲ್ಲಿ ಮಳೆಯು ಸಂಭವಿಸಿದೆ. ರಾಜ್ಯದ ಹೆಚ್ಚಿನ ಪರ್ವತ ಪ್ರದೇಶಗಳಲ್ಲಿ ಹಿಮಪಾತವು ಕಂಡುಬಂದಿದೆ. ಉತ್ತರ ಭಾರತದಲ್ಲಿ ಭಾರತೀಯ ಹವಾಮಾನ ಇಲಾಖೆ ಭಾರಿ ಮಳೆ ಮತ್ತು ಚಂಡಮಾರುತ ಎಚ್ಚರಿಕೆ ನೀಡಿದೆ. ಬುಡಕಟ್ಟು ಪ್ರದೇಶಗಳು ಮತ್ತು ಇತರ ಉನ್ನತ-ಎತ್ತರದ ಪ್ರದೇಶಗಳಲ್ಲಿ ಸಾಧಾರಣ ಹಿಮಪಾತವು ಕಂಡುಬಂದಿದೆ.