ನವದೆಹಲಿ: 2020 ರ ದೆಹಲಿ ವಿಧಾನಸಭಾ ಚುನಾವಣೆ (Delhi Assembly elections 2020) ಆಮ್ ಆದ್ಮಿ ಪಕ್ಷ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ದ್ವಾರಕಾ ವಿಧಾನಸಭಾ ಕ್ಷೇತ್ರ(Dwarka Assembly constituency)ದ ಸ್ಪರ್ಧೆಯು ಸಾಕಷ್ಟು ಆಸಕ್ತಿದಾಯಕವಾಗಿದೆ. ಈ ಸ್ಥಾನದ ಚುನಾವಣಾ ಲೆಕ್ಕಾಚಾರ ಕೂಡ ಈ ಬಾರಿ ಮತದಾರರನ್ನು ಸ್ವಲ್ಪ ಗೊಂದಲಗೊಳಿಸಬಹುದು. ಅಭ್ಯರ್ಥಿಗಳು ತಮಗಾಗಿ ಮತ ಕೇಳಲು ಬಂದಾಗ, ಈ ವಿಷಯ ಏನು ಎಂದು ಮತದಾರರು ಗೊಂದಲಕ್ಕೊಳಗಾಗುವ ಸಾಧ್ಯತೆಯಿದೆ? 2015 ರಲ್ಲಿ ಆ ಪ್ರದೇಶದಿಂದ ಆಮ್ ಆದ್ಮಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿ ಜಯ ಸಾಧಿಸಿರುವ ಹಾಲಿ ಶಾಸಕ ಆದರ್ಶ್ ಶಾಸ್ತ್ರಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 2015 ರಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದ ವಿನಯ್ ಮಿಶ್ರಾ ಅವರು ಈ ಬಾರಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ. ಬಿಜೆಪಿ ಕೂಡ ಈ ಬಾರಿ ಪ್ರದ್ಯುಮನ್ ರಜಪೂತ್ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ದ್ವಾರಕಾ ದೇಶದ ರಾಜಧಾನಿಯ ಉಪವಿಭಾಗವಾಗಿದೆ. ಈ ಪ್ರದೇಶ ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. 2002 ರಲ್ಲಿ ಸ್ಥಾಪಿಸಲಾದ ಡಿಲಿಮಿಟೇಶನ್ ಕಮಿಷನ್ ಈ ಪ್ರದೇಶವನ್ನು 2008 ರಲ್ಲಿ ಅಸೆಂಬ್ಲಿ ಸ್ಥಾನವನ್ನಾಗಿ ಮಾಡಲು ಶಿಫಾರಸು ಮಾಡಿತು. ಚುನಾವಣಾ ಆಯೋಗವು 2008 ರಲ್ಲಿ ಮೊದಲ ಬಾರಿಗೆ ಈ ಸ್ಥಾನಕ್ಕಾಗಿ ಚುನಾವಣೆ ನಡೆಸಿತು ಮತ್ತು ನಂತರ ಈ ಸ್ಥಾನವನ್ನು ಕಾಂಗ್ರೆಸ್ ಮಹಾಬಲ್ ಮಿಶ್ರಾ ಗೆದ್ದುಕೊಂಡರು. ಆದಾಗ್ಯೂ, 2008 ರಲ್ಲಿ ನಡೆದ ಉಪಚುನಾವಣೆಯಲ್ಲಿ ಪ್ರದ್ಯುಮನ್ ತಮ್ಮ ಸೋಲಿಗೆ ಪ್ರತೀಕಾರ ತೀರಿಸಿಕೊಂಡು ಜಯಗಳಿಸಿದರು.


ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆದ ಕೆಲವು ಪ್ರದೇಶಗಳಿವೆ. ಡಿಡಿಎ ಈ ಪ್ರದೇಶವನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸಿದೆ. ಆದರೆ ಜನರು ಮೂಲಭೂತ ಸೌಲಭ್ಯಗಳ ಬಗ್ಗೆ ಚಿಂತಿತರಾಗಿದ್ದಾರೆ. ದ್ವಾರಕಾ ಸ್ಥಾನದಲ್ಲಿ 2,18,862 ಮತದಾರರಿದ್ದಾರೆ. ಈ ಪ್ರದೇಶದ ದೊಡ್ಡ ಸಮಸ್ಯೆ ಸಂಚಾರ. ಇದಲ್ಲದೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಅಸಮರ್ಪಕವಾಗಿದೆ ಮತ್ತು ಭದ್ರತಾ ವ್ಯವಸ್ಥೆಯು ಇಲ್ಲಿನ ಜನರಿಗೆ ಪ್ರಮುಖ ವಿಷಯವಾಗಿದೆ.


ಪ್ರದೇಶದ ಪ್ರಸ್ತುತ ಶಾಸಕ ಆದರ್ಶ್ ಶಾಸ್ತ್ರಿ ಕಳೆದ ಬಾರಿ 39,366 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಆದರ್ಶ್ ಶಾಸ್ತ್ರಿ ಆಪಲ್ ಇಂಡಿಯಾದ ಸೇಲ್ಸ್ ಹೆಡ್ ಆಗಿ ಕೆಲಸ ತ್ಯಜಿಸಿ ರಾಜಕೀಯ ಪ್ರವೇಶಿಸಿದ್ದರು, ಆದರೆ ಈ ಬಾರಿ ಸ್ಪರ್ಧೆ ಅವರಿಗೆ ತುಂಬಾ ಸವಾಲಾಗಿದೆ. ಒಂದು ಕಡೆ ಅವರು ಪಕ್ಷವನ್ನು ಬದಲಾಯಿಸಿದ್ದಾರೆ ಮತ್ತು ಅವರ ಮುಂದೆ ಕಾಂಗ್ರೆಸ್ ಪ್ರಬಲ ಮಹಾಬಲ್ ಮಿಶ್ರಾ ಅವರ ಪುತ್ರ ವಿನಯ್ ಮಿಶ್ರಾ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.


ಒಟ್ಟಿನಲ್ಲಿ ಅದಲು-ಬದಲಾದ ಅಭ್ಯರ್ಥಿಗಳಿಂದ ಗೊಂದಲಕ್ಕೊಳಗಾಗಿರುವ ಈ ಕ್ಷೇತ್ರದ ಮತದಾರರು ಯಾರಿಗೆ ಮಣೆಹಾಕಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.