Girl Child Born: ಬೇಗುಸರಾಯ್‌ನಲ್ಲಿ ಬೇಟಿ ಬಚಾವೋ-ಬೇಟಿ ಪಢಾವೋ ಎಂಬ ಘೋಷಣೆಗಳನ್ನು ಪ್ರಚಾರ ಮಾಡುತ್ತಾ, ಕುಟುಂಬವೊಂದು ತಮ್ಮ ಮಗಳ ಜನ್ಮವನ್ನು ಆಚರಿಸಿದ್ದಾರೆ. ಮಾತ್ರವಲ್ಲದೆ, ತಂದೆ ತನ್ನ ಮಗಳು ಮತ್ತು ಹೆಂಡತಿಯನ್ನು ಸದರ್ ಆಸ್ಪತ್ರೆಯಿಂದ ವಧುವಿನಂತೆ ಅಲಂಕರಿಸಿದ ಇ-ರಿಕ್ಷಾದಲ್ಲಿ ಮನೆಗೆ ಕರೆದೊಯ್ದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: BA,Bcom,BSc ಪಾಸ್ ಆದವರಿಗೆ ಸರ್ಕಾರದಿಂದ ಪ್ರತೀ ತಿಂಗಳು ಸಿಗಲಿದೆ ರೂ.9 ಸಾವಿರ: ಮಾಡಬೇಕಾಗಿರೋದು ಇಷ್ಟೇ..


ಬೇಗುಸರಾಯ್ ಮಹಾನಗರ ಪಾಲಿಕೆಯ ವಾರ್ಡ್ ನಂ.42 ಬಿಶನ್‌ಪುರ ನೌಲಖಾ ನಿವಾಸಿ ತುಂಟನ್ ಕುಮಾರ್ ಸೋನು ಅವರ ಪತ್ನಿ ಜೂಲಿ ಕುಮಾರಿ ಜನವರಿ 23 ರಂದು ಸದರ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದರಿಂದ ಇಡೀ ಕುಟುಂಬವು ತುಂಬಾ ಸಂತೋಷವಾಗಿದೆ. ತುಂಟನ್ ಕುಮಾರ್ ಅವರಿಗೆ ಈಗಾಗಲೇ 2 ಗಂಡು ಮಕ್ಕಳಿದ್ದು, ಅವರ ಪತ್ನಿ ಗರ್ಭಿಣಿಯಾದಾಗಿನಿಂದ ಅವರು ಕುಟುಂಬದವರು ಹಾಗೂ ಸಂಬಂಧಿಕರೊಂದಿಗೆ ಮಗಳಿಗಾಗಿ ಪ್ರಾರ್ಥಿಸುತ್ತಿದ್ದರು. ಈಗ ಮಗಳು ಹುಟ್ಟಿದ ನಂತರ ಕುಟುಂಬ ಸದಸ್ಯರು ತುಂಬಾ ಸಂತೋಷವಾಗಿದ್ದಾರೆ. ಅದರಲ್ಲೂ ತಂದೆಯಾದ ತುಂಟನ್ ತುಂಬಾ ಖುಷಿಯಾಗಿದ್ದಾರೆ.


ತುಂಟನ್ ಇ-ರಿಕ್ಷಾ ಡ್ರೈವರ್ ಆಗಿದ್ದು, ಮಗಳು ಜನಿಸಿದ್ದಕ್ಕೆ ತುಂಬಾ ಖುಷಿಯಾಗಿ ಆಕೆಯನ್ನು ನೋಡಲು ಆರ್ಕೆಸ್ಟ್ರಾ ಜೊತೆ ಹೋಗಲು ನಿರ್ಧರಿಸಿದ್ದಾರೆ. ಆದರೆ ಆರ್ಕೆಸ್ಟ್ರಾದವರು 20 ಸಾವಿರ ಬೇಡಿಕೆ ಇಟ್ಟಿದ್ದರು. ಆದರೆ ಅವರ ಬಳಿ 10 ಸಾವಿರ ಮಾತ್ರ ಇತ್ತು. ಇದರಿಂದಾಗಿ ಆರ್ಕೆಸ್ಟ್ರಾ ನಡೆಸಲು ಸಾಧ್ಯವಾಗದೆ ಇ-ರಿಕ್ಷಾವನ್ನು ಬಲೂನ್‌ನಿಂದ ಅಲಂಕರಿಸಿ ಸದರ್ ಆಸ್ಪತ್ರೆಯಿಂದ ಮಗಳನ್ನು ಕರೆತಂದಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಅವರಿಗೆ ಈಗಾಗಲೇ 2 ಗಂಡು ಮಕ್ಕಳಿದ್ದರು ಆದರೆ ತನಗೆ ಹೆಣ್ಣು ಮಗು ಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದ. ದೇವರು ತನ್ನ ಹೆಂಡತಿ, ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಪ್ರಾರ್ಥನೆಯನ್ನು ಆಲಿಸಿದ್ದಾನೆ ಎಂದು ತುಂಟನ್ ಸಂತೋಷ ವ್ಯಕ್ತಪಡಿಸಿದ್ದಾರೆ.  


ತಾಯಿ ಜೂಲಿ ಕುಮಾರಿ ಮಾತನಾಡಿ, “ನನಗೂ ತುಂಬಾ ಸಂತೋಷವಾಗಿದೆ. ದೇವರು ನನಗೆ ಮಗಳನ್ನು ಕೊಟ್ಟಿದ್ದಾನೆ. ಹರಕೆ ಹೇಳಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.


ಜನವರಿ 24ರ ಸಂಜೆ ತುಂಟನ್ ಕುಮಾರ್ ಇ-ರಿಕ್ಷಾವನ್ನು ಅಲಂಕರಿಸಿ ಸದರ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ. ತನ್ನ ಮಗಳು ಮತ್ತು ಹೆಂಡತಿಯನ್ನು ಮನೆಗೆ ಹೇಗೆ ಕರೆದುಕೊಂಡು ಹೋಗಿದ್ದಾನೆ ಎಂಬುದನ್ನು ನೀವು ಚಿತ್ರಗಳಲ್ಲಿ ನೋಡಬಹುದು.



Art of Living's Bhav 2023 : ಆರ್ಟ್ ಆಫ್ ಲಿವಿಂಗ್‌ನ 4 ದಿನಗಳ ಸಾಂಸ್ಕೃತಿಕ ಸಂಭ್ರಮ : 650 ಕಲಾವಿದರು ಭಾಗಿ!


ಮಗಳನ್ನು ಲಕ್ಷ್ಮಿ ಎಂದು ಕರೆಯುತ್ತಾರೆ. ಮದುವೆಯಾದ ನಂತರ ಅವಳನ್ನು ಆಡಂಬರದಿಂದ ಕಳುಹಿಸಲಾಗುತ್ತದೆ. ಆದ್ದರಿಂದ ಅವಳು ಹುಟ್ಟಿದ ನಂತರ ಅವಳನ್ನು ಆಸ್ಪತ್ರೆಯಿಂದ ಅಲಂಕರಿಸಿ ಇ-ರಿಕ್ಷಾದಲ್ಲಿ ಮನೆಗೆ ಕರೆತರಲಾಗಿದೆ” ಎಂದು ಹೇಳಿದರು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.