ನವದೆಹಲಿ: ದ್ರಾವಿಡ ಮುನ್ನೇತ್ರ ಕಳಗಂ (DMK) ಮುಖಂಡ ಹಾಗೂ ಸಚಿವ ಎಸ್.ಎಂ.ನಾಸರ್ ಸಿಟ್ಟಿನಿಂದ ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವ ಘಟನೆ ನಡೆದಿದೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇದೇ ವಿಚಾರವಾಗಿ ತಮಿಳುನಾಡಿನಲ್ಲಿ ವಿವಾದ ಭುಗಿಲೆದ್ದಿದೆ. ಸಚಿವರು ಹತಾಶೆಯಿಂದ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಆರೋಪಿಸಿದೆ.
ಸಚಿವ ಎಸ್.ಎಂ.ನಾಸರ್, ಕೋಪದಿಂದ ನೆಲದಿಂದ ಕಲ್ಲನ್ನು ಎತ್ತಿಕೊಂಡು ಕಾರ್ಯಕರ್ತನ ಮೇಲೆ ಎಸೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಕ್ಷದ ಕಾರ್ಯಕ್ರಮವೊಂದರ ಸಿದ್ಧತೆ ಪರಿಶೀಲಿಸಲು ತೆರಳಿದ್ದ ಸಚಿವ ಕ್ಷುಲ್ಲಕ ವಿಷಯಕ್ಕೆ ಕೋಪಗೊಂಡು ಕಲ್ಲು ಎಸೆದಿದಿದ್ದಾರೆ. ಆದರೆ ಸಚಿವ ಕಾರ್ಯಕರ್ತನ ಮೇಲೆ ಎಸೆದಿದ್ದು ಕಲ್ಲೋ ಅಥವಾ ಮಣ್ಣಿನ ಉಂಡೆಯೋ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ಘಟನೆಯ ಬಗ್ಗೆ ರಾಜ್ಯದ ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಎಸ್.ಎಂ.ನಾಸರ್ ಅಥವಾ ಆಡಳಿತಾರೂಢ ಡಿಎಂಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
In India’s history, has anybody seen a govt minister throwing stones at people?
Display of this by a @arivalayam party DMK Govt Minister, Thiru @Avadi_Nasar.
Throwing stones at people in frustration
No decency, No decorum & treating people like slaves! That's DMK for you. pic.twitter.com/D2iAKV4YZ4
— K.Annamalai (@annamalai_k) January 24, 2023
ಇದನ್ನೂ ಓದಿ: Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್ ಸಿಕ್ರೆ ಹೀಗಿರುತ್ತೆ ನೋಡಿ..
ಸಚಿವನ ವರ್ತನೆಗೆ ಬಿಜೆಪಿ ಆಕ್ರೋಶ
ಘಟನೆ ಬಗ್ಗೆ ಮಾತನಾಡಿರುವ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ, ಸಚಿವರು ಜನರ ಮೇಲೆ ಕಲ್ಲು ಎಸೆದು ದುರ್ನಡತೆ ತೋರಿದ್ದಾರೆಂದು ಆರೋಪಿಸಿದ್ದಾರೆ. ‘ಭಾರತದ ಇತಿಹಾಸದಲ್ಲಿ ಯಾವುದೇ ಸರ್ಕಾರದ ಸಚಿವರು ಜನರ ಮೇಲೆ ಕಲ್ಲು ಎಸೆಯುವುದನ್ನು ಯಾರಾದರೂ ನೋಡಿದ್ದೀರಾ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಹತಾಶೆಯಿಂದ ಜನರ ಮೇಲೆ ಕಲ್ಲು ಎಸೆಯುವುದು..... ಯಾವುದೇ ಮರ್ಯಾದೆ, ಘನತೆ ಮತ್ತು ಜನರನ್ನು ಗುಲಾಮರಂತೆ ನಡೆಸಿಕೊಳ್ಳುವುದು… ಇದು ಡಿಎಂಕೆಹ ನೀತಿ’ ಎಂದು ಟೀಕಿಸಿದ್ದಾರೆ.
ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕಳಗಂ ಮುಖಂಡ ಹಾಗೂ ಮಾಜಿ ಸಚಿವ ಡಿ.ಜಯಕುಮಾರ್ ಕೂಡ ಸಚಿವರ ವರ್ತನೆಯನ್ನು ಟೀಕಿಸಿದ್ದು, ‘ಇದು ದ್ರಾವಿಡ ಮಾದರಿ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಆಡಳಿತ ಮಾದರಿ ಎಂದು ಕುಟುಕಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ ಧಾರವಾಡ ದಂಪತಿಗಳ ಶಿಶು ಮಾರಾಟ ಯತ್ನವನ್ನು ವಿಫಲಗೊಳಿಸಿದ ಆರ್‌ಪಿಎಫ್3
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.