Money Earn Idea : ಪ್ರತಿ ತಿಂಗಳು ಭರ್ಜರಿ ಆದಾಯ ಗಳಿಸಲು ಉಚಿತವಾಗಿ ಆರಂಭಿಸಿ ಈ ಬಿಸಿನೆಸ್!
ನೀವು ವ್ಯಾಪಾರ ಯೋಜನೆ ಬಗ್ಗೆ ಯೋಚಿಸುತ್ತಿದ್ದರೆ, ನಾವು ನಿಮಗಾಗಿ ಅತ್ಯುತ್ತಮ ಆಯ್ಕೆಯನ್ನು ತಂದಿದ್ದೇವೆ. ಇದು ನೀವು ಕೈ ತುಂಬಾ ಹಣ ಗಳಿಸಬಹುದಾದ ವ್ಯಾಪಾರವಾಗಿದೆ.
ನವದೆಹಲಿ : ಕರೋನಾ ಯುಗದಲ್ಲಿ, ನೀವು ಕೂಡ ಹೂಡಿಕೆ ಮಾಡದೆ ಪ್ರತಿ ತಿಂಗಳು ಗಳಿಸಲು ಬಯಸಿದರೆ, ಈ ಸುದ್ದಿ ನಿಮಗಾಗಿ ಮಾತ್ರ. ನೀವು ವ್ಯಾಪಾರ ಯೋಜನೆ ಬಗ್ಗೆ ಯೋಚಿಸುತ್ತಿದ್ದರೆ, ನಾವು ನಿಮಗಾಗಿ ಅತ್ಯುತ್ತಮ ಆಯ್ಕೆಯನ್ನು ತಂದಿದ್ದೇವೆ. ಇದು ನೀವು ಕೈ ತುಂಬಾ ಹಣ ಗಳಿಸಬಹುದಾದ ವ್ಯಾಪಾರವಾಗಿದೆ.
ಸರ್ಕಾರಿ ಕಂಪನಿಗಳ ಫ್ರ್ಯಾಂಚೈಸ್(Franchise) ತೆರೆಯುವ ಮೂಲಕ ನೀವು ನಿಮ್ಮ ಸ್ವಂತ ವ್ಯವಹಾರವನ್ನು ಆರಂಭಿಸಬಹುದು. ನೀವು ಈ ವ್ಯವಹಾರಗಳಲ್ಲಿ ಹೂಡಿಕೆ ಮಾಡಬೇಕಾಗಿಲ್ಲ ಮತ್ತು ನೀವು ಸಾಕಷ್ಟು ಲಾಭವನ್ನು ಪಡೆಯಬಹುದು ಮತ್ತು ಅದರಲ್ಲಿ ಲೂಸ್ ಬಗ್ಗೆ ಚಿಂತಿಸುವ ಅವಶ್ಯಕತೆನೆ ಇಲ್ಲ. ಸರ್ಕಾರಿ ಫ್ರ್ಯಾಂಚೈಸ್ನೊಂದಿಗೆ ಕೆಲಸ ಮಾಡುವ ಮೋಜು ವಿಭಿನ್ನವಾಗಿರುತ್ತದೆ ಮತ್ತು ಗಳಿಕೆಯೂ ಬಂಪರ್ ಆಗಿದೆ.
ಇದನ್ನೂ ಓದಿ : Earn Money : ನಿಮ್ಮ ಬಳಿ ಈ ಹಳೆಯ ₹5 ನೋಟು ಇದ್ದರೆ ನೀವು ಗಳಿಸಬಬಹುದು ₹30,000 : ಹೇಗೆ ಇಲ್ಲಿದೆ ನೋಡಿ
ಆಧಾರ್ ಕಾರ್ಡ್ ಫ್ರ್ಯಾಂಚೈಸ್
ಇತ್ತೀಚಿನ ದಿನಗಳಲ್ಲಿ, ಆಧಾರ್ ಕಾರ್ಡ್ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಅತ್ಯಗತ್ಯವಾದ ದಾಖಲೆಯಾಗಿದೆ. ಈ ಕಾರಣದಿಂದಾಗಿ ಇದಕ್ಕೆ ಸಾಕಷ್ಟು ಬೇಡಿಕೆ ಇದೆ. ನೀವು ಆಧಾರ್ ಕಾರ್ಡ್ ಫ್ರ್ಯಾಂಚೈಸ್(Aadhaar Card Franchise) ಆರಂಭಿಸಬಹುದು. ಇದರೊಂದಿಗೆ ನೀವು ಉತ್ತಮ ಹಣವನ್ನು ಗಳಿಸಲು ಸಾಧ್ಯವಿದೆ. ನೀವು ಆಧಾರ್ ಕಾರ್ಡ್ ಅನ್ನು ಫ್ರಾಂಚೈಸ್ ಮಾಡಲು ಬಯಸಿದರೆ, ಮೊದಲು ನೀವು ಯುಐಡಿಎಐ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ಇದರ ನಂತರ ಸೇವಾ ಕೇಂದ್ರ(Aadhar Seva Kendra) ತೆರೆಯಲು ಪರವಾನಗಿ ನೀಡಲಾಗುತ್ತದೆ. ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ನೀವು ಆಧಾರ್ ದಾಖಲಾತಿ ಸಂಖ್ಯೆ ಮತ್ತು ಬಯೋಮೆಟ್ರಿಕ್ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. ಇದರ ನಂತರ, ಸಾಮಾನ್ಯ ಸೇವಾ ಕೇಂದ್ರದಿಂದ ನೋಂದಣಿಯನ್ನು ಮಾಡಬೇಕಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ, ಆಧಾರ್ ಕಾರ್ಡ್(Aadhar Card) ಅನ್ನು ಬಹಳ ಎಚ್ಚರಿಕೆಯಿಂದ ಇಡಬೇಕು. ಅಲ್ಲದೆ, ಅದರಲ್ಲಿ ಯಾವುದೇ ರೀತಿಯ ತಪ್ಪುಗಳಿದ್ದಲ್ಲಿ, ಅದನ್ನು ಸರಿಪಡಿಸಲು ನೀವು ಸಾಮಾನ್ಯ ಸೇವಾ ಕೇಂದ್ರ ಅಥವಾ UIDAI ನ ಫ್ರ್ಯಾಂಚೈಸಿಗೆ ಹೋಗಬಹುದು. ನೀವು ಆಧಾರ್ ಕಾರ್ಡ್ ಫ್ರಾಂಚೈಸ್ ಕೂಡ ತೆಗೆದುಕೊಳ್ಳಬಹುದು.
ಇದನ್ನೂ ಓದಿ : ಈಗ ನೋಂದಾಯಿತ ಮೊಬೈಲ್ ನಂಬರ್ ಇಲ್ಲದೆ Aadhar ಡೌನ್ಲೋಡ್ ಮಾಡಬಹುದು, ಹೇಗೆ ಇಲ್ಲಿದೆ ನೋಡಿ!
ಅರ್ಜಿ ಸಲ್ಲಿಸುವುದು ಹೇಗೆ?
1. ಆಧಾರ್ ಫ್ರಾಂಚೈಸಿ ಪರವಾನಗಿ ಪಡೆಯಲು, ನೀವು ಮೊದಲು NSEIT ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು https://uidai.nseitexams.com/UIDAI/LoginAction_input.action
2. ಇಲ್ಲಿ ನೀವು 'Create News User' ಎಂಬ ಆಯ್ಕೆಯನ್ನು ಪಡೆಯುತ್ತೀರಿ. ಕ್ಲಿಕ್ ಮಾಡಿದ ನಂತರ ಅದರಲ್ಲಿ ಹೊಸ ಫೈಲ್ ತೆರೆಯುತ್ತದೆ.
3. ಇದರಲ್ಲಿ ನಿಮಗೆ 'Share Code enter' ಎಂದು ಕೇಳಲಾಗುತ್ತದೆ. 'ಶೇರ್ ಕೋಡ್' ಗಾಗಿ ನೀವು https://resident.uidai.gov.in/offline-kyc ಗೆ ಭೇಟಿ ನೀಡುವ ಮೂಲಕ ಆಫ್ಲೈನ್ ಇ-ಆಧಾರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
4. ಡೌನ್ಲೋಡ್ ಮಾಡಿದ ನಂತರ, ನೀವು 'XML ಫೈಲ್' ಮತ್ತು 'ಶೇರ್ ಕೋಡ್' ಎರಡನ್ನೂ ಡೌನ್ಲೋಡ್ ಮಾಡಿಕೊಳ್ಳುತ್ತೀರಿ.
5. ಅರ್ಜಿ ಸಲ್ಲಿಸುವಾಗ, ನಿಮ್ಮ ಪರದೆಯಲ್ಲಿ ಒಂದು ಫಾರ್ಮ್ ತೆರೆಯುತ್ತದೆ. ಅದರಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.
6. 'USER ID' ಮತ್ತು 'ಪಾಸ್ವರ್ಡ್' ನಿಮ್ಮ ಫೋನ್ ಮತ್ತು ಇ-ಮೇಲ್ ಐಡಿಗೆ ಬರುತ್ತದೆ. ಈಗ ನೀವು ಈ ಐಡಿ ಮತ್ತು ಪಾಸ್ವರ್ಡ್ ಮೂಲಕ 'ಆಧಾರ್ ಪರೀಕ್ಷೆ ಮತ್ತು ಪ್ರಮಾಣೀಕರಣ' ಪೋರ್ಟಲ್ಗೆ ಸುಲಭವಾಗಿ ಲಾಗಿನ್ ಮಾಡಬಹುದು. ಇದರ ನಂತರ, 'ಮುಂದುವರಿಸು' ಆಯ್ಕೆಯು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
7. ಮುಂದಿನ ಹಂತದಲ್ಲಿ ಒಂದು ಫಾರ್ಮ್ ಮತ್ತೆ ನಿಮ್ಮ ಮುಂದೆ ತೆರೆಯುತ್ತದೆ. ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ಅದರ ನಂತರ ನಿಮ್ಮ ಫೋಟೋ ಮತ್ತು ಡಿಜಿಟಲ್ ಸಹಿಯನ್ನು ಅಪ್ಲೋಡ್ ಮಾಡಿ. ಇದರ ನಂತರ, ನೀವು ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ, ನಂತರ ನೀವು 'Proceed To Submit Form' ಕ್ಲಿಕ್ ಮಾಡುವ ಮೂಲಕ ಮುಂದುವರಿಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ