ನವದೆಹಲಿ: ತುಟ್ಟಿ ಭತ್ಯೆಯ ಹೆಚ್ಚಳದ ಜೊತೆಗೆ, ಹಲವಾರು ಕೇಂದ್ರ ಸರ್ಕಾರಿ ಉದ್ಯೋಗಿಗಳು ಈ ಹಬ್ಬದ ಋತುವಿನಲ್ಲಿ ಬಡ್ತಿಗಳನ್ನು ಪಡೆದಿದ್ದಾರೆ.ಗಮನಾರ್ಹವಾಗಿ ಭಾರತೀಯ ರೈಲ್ವೇ ಅಧಿಕಾರಿಗಳಿಗೆ ಬಡ್ತಿಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಬಗ್ಗೆ ಅಜೇಯ್ ಜಡೇಜಾ ನೀಡಿದ ಶಾಕಿಂಗ್ ಹೇಳಿಕೆ ಏನು ಗೊತ್ತಾ?
ಸರ್ಕಾರದ ಆದೇಶದ ಪ್ರಕಾರ, 7 ನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಸಾರವಾಗಿ ಈ ಭಾರತೀಯ ರೈಲ್ವೇ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ.ಈ ಬಡ್ತಿಯ ಪರಿಣಾಮವಾಗಿ ಅವರಿಗೆ 25,350 ರೂ ಪ್ರವೇಶ ವೇತನದಿಂದ 29,500 ರೂ ಪ್ರವೇಶ ವೇತನಕ್ಕೆ ಬಡ್ತಿ ನೀಡಲಾಗುತ್ತದೆ.
ರೈಲ್ವೇ ಬೋರ್ಡ್ ಸೆಕ್ರೆಟರಿಯೇಟ್ ಸರ್ವೀಸ್ (ಆರ್‌ಬಿಎಸ್‌ಎಸ್) / ರೈಲ್ವೇ ಬೋರ್ಡ್ ಸೆಕ್ರೆಟರಿಯಟ್ ಸ್ಟೆನೋಗ್ರಾಫರ್ಸ್ ಸರ್ವಿಸ್ (ಆರ್‌ಬಿಎಸ್‌ಎಸ್‌ಎಸ್) ಅಧಿಕಾರಿಗಳ ಬಡ್ತಿ ಈ ವರ್ಷ ಬರಲಿದೆ.ಈ ಅಧಿಕಾರಿಗಳಿಗೆ ಖಾಸಗಿ ಕಾರ್ಯದರ್ಶಿಯಿಂದ ಅಧೀನ ಕಾರ್ಯದರ್ಶಿ/ಡಿವೈ ಗೆ ಬಡ್ತಿ ನೀಡಲಾಗಿದೆ. ಉಪನಿರ್ದೇಶಕ, ಜಂಟಿ ಕಾರ್ಯದರ್ಶಿ,ಪ್ರಧಾನ ಖಾಸಗಿ ಕಾರ್ಯದರ್ಶಿ ಹುದ್ದೆಗಳಿಗೆ ಬಡ್ತಿ ನೀಡಲಾಗಿದೆ.
ಇದನ್ನೂ ಓದಿ: Petrol Diesel Price: ರಾಜ್ಯಗಳು ಬಯಸಿದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಮಾಡಬಹುದು- ಕೇಂದ್ರ ಪೆಟ್ರೋಲಿಯಂ ಸಚಿವ
ಎಜಿ ಆಫೀಸ್ ಬ್ರದರ್‌ಹುಡ್‌ನ ಹಿಂದಿನ ಅಧ್ಯಕ್ಷ ಎಚ್‌ಎಸ್ ತಿವಾರಿ ಪ್ರಕಾರ, ಬಡ್ತಿಯೊಂದಿಗೆ ತಿಂಗಳಿಗೆ ಸರಿಸುಮಾರು 15,000 ರೂ. ಸಂಭಾವನೆ ಹೆಚ್ಚಾಗುತ್ತದೆ.ಈ ಹಂತದಲ್ಲಿ ಪ್ರಾರಂಭಿಕ ಮೂಲ ವೇತನ 67,700 ರೂ ರಿಂದ. 78,800 ರೂ ವರೆಗೆ ಇರುತ್ತದೆ.ಇದರೊಂದಿಗೆ, ತುಟ್ಟಿ ಭತ್ಯೆ, ಸಾರಿಗೆ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ಇತರ ಭತ್ಯೆಗಳನ್ನು ಹೆಚ್ಚಿಸಲಾಗುವುದು.
ಎಚ್ ಎಸ್ ತಿವಾರಿ ಪ್ರಕಾರ, ಆದಾಯದ ಬ್ಯಾಂಡ್ 7 ನೇ ಪೇ ಮ್ಯಾಟ್ರಿಕ್ಸ್ ನ ಪೇ ಬ್ಯಾಂಡ್ III ಅಡಿಯಲ್ಲಿ ಬರುತ್ತದೆ. ಭಾರತದ ರಾಷ್ಟ್ರಪತಿಯಿಂದ ಅನುಮತಿ ಪಡೆದ ನಂತರ, ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆಯು ಬಡ್ತಿ ಆದೇಶವನ್ನು ನೀಡಿತು.
ಇದನ್ನೂ ಓದಿ : CRICURU App : ಕ್ರಿಕೆಟ್ ತರಬೇತಿಗೆ 'ಆ್ಯಪ್' ಆರಂಭಿಸಿದ ವೀರೇಂದ್ರ ಸೆಹ್ವಾಗ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.