ಅಂಡಮಾನ್:  ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುರುವಾರ ಭಾರಿ ಪ್ರಮಾಣದ ಭೂಕಂಪಗಳು ಸಂಭವಿಸಿವೆ. ಗುರುವಾರ ಸಂಭವಿಸಿದ ಭೂಕಂಪ ರಿಕ್ಟರ್ ಮಾಪನದಲ್ಲಿ 6 ತೀವ್ರತೆ ದಾಖಲಾಗಿದೆ. ಆರಂಭಿಕ ಮಾಹಿತಿಯ ಪ್ರಕಾರ, ಈ ಭೂಕಂಪದಿಂದಾಗಿ ಈವರೆಗೂ ಯಾವುದೇ ಸಾವುನೋವು ಸಂಭವಿಸಿಲ್ಲ.


COMMERCIAL BREAK
SCROLL TO CONTINUE READING

ಇದಕ್ಕೆ ಮುಂಚೆ ಕಳೆದ ಡಿಸೆಂಬರ್ 22 ರಂದು ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಜ್ವಾಲೆಯ ನಂತರ ಸಂಭವೀದ ಭೂಕಂಪ ಮತ್ತು ಸುನಾಮಿಯಲ್ಲಿ 430 ಜನರು  ಮೃತಪಟ್ಟರು. ಕೆಲವು ದಿನಗಳ ನಂತರ, ಪಪುವಾ ಬರಾಟ್ ಪ್ರಾಂತ್ಯದಲ್ಲಿ 6.1 ಪ್ರಮಾಣದ ಭೂಕಂಪದ ಆಘಾತಗಳು ವರದಿಯಾಗಿವೆ. ಮನೋಕ್ವರಿ ನಗರದ 26 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರವನ್ನು ದಾಖಲಿಸಲಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.



File Photo


ಅದೇ ಸಮಯದಲ್ಲಿ, ಪಶ್ಚಿಮ ಇಂಡೋನೇಶಿಯಾ ಪ್ರಾಂತ್ಯದ ವೆಸ್ಟ್ ಪಪುವಾದಲ್ಲಿ ಡಿಸೆಂಬರ್ 28 ರಂದು 5.8-ತೀವ್ರತೆಯ ಭೂಕಂಪನ ಸಂಭವಿಸಿತು. ಡೊನೆಟ್ಸ್ಯಾ ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಏಜೆನ್ಸಿಯ ವಕ್ತಾರ ಸುಟೋಪೊ ಪವರ್ ನಗ್ರೂಹೋ ಅವರು ಭೂಕಂಪದ ಕಾರಣದಿಂದ ಯಾವುದೇ ಪ್ರಮುಖ ಹಾನಿ ಅಥವಾ ಸಾವುನೋವುಗಳ ಬಗ್ಗೆ ಯಾವುದೇ ಸುದ್ದಿಗಳಿಲ್ಲ ಎಂದು ಹೇಳಿದರು.