ಶ್ರೀನಗರ :  ಬೆಳಗ್ಗೆ 6.21 ರ ಸುಮಾರಿಗೆ ಕಾಶ್ಮೀರದಲ್ಲಿ ಲಘು ಭೂಕಂಪನವಾಗಿದೆ (Earthquake Hits Jammu and Kashmir).  ರಿಕ್ಟರ್ ಮಾಪಕದಲ್ಲಿ 2.5ರ ತೀವ್ರತೆ ದಾಖಲಾಗಿದೆ.  ಇದುವರೆಗೆ ಯಾವುದೇ ಪ್ರಾಣಹಾನಿ  ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ.  ಭೂಕಂಪನವಾಗುವಾಗ ಕಾಶ್ಮೀರದ ಬಹುತೇಕ ಜನತೆ  ಮುಂಜಾನೆಯ ಸಕ್ಕರೆ ನಿದ್ರೆಯಲ್ಲಿತ್ತು. ಹಾಗಾಗಿ, ಬಹಳಷ್ಟು ಜನರಿಗೆ ಕಂಪನ ಕೂಡಾ ಅನುಭವಕ್ಕೆ ಬಂದಿಲ್ಲ. ಇದೊಂದು ಲಘು ಭೂಕಂಪ  ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ (National Center for Seismology)ತಿಳಿಸಿದೆ. 


COMMERCIAL BREAK
SCROLL TO CONTINUE READING

ಹಿಮಾಲಯದ ಮಡಿಲಿನಲ್ಲಿ ಏಕೆ ಭೂಮಿ ಕಂಪಿಸುತ್ತಿದೆ..?
ಹಿಮಾಲಯದ ತಪ್ಪಲಿನಲ್ಲಿರುವ ಜಮ್ಮು ಕಾಶ್ಮೀರದಲ್ಲಿ ಪದೇ ಪದೇ ಭೂಮಿ ನಡುಗುತ್ತಿದೆ (Earthquake Hits Jammu and Kashmir).  ಇದಕ್ಕೂ ಮೊದಲು ಮಾರ್ಚ್ 7, 2021 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪದ (earth quake) ಅನುಭವವಾಗಿತ್ತು.  ಅದು ಲಘು ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ (Richter Scale)  2.9 ತೀವ್ರತೆ ದಾಖಲಾಗಿತ್ತು. ಮಾರ್ಚ್ 6, 2021 ರಂದು ಲಡಾಕ್‌ನಲ್ಲಿ ಯೂ (Ladakh) ಭೂಕಂಪನ ಉಂಟಾಗಿತ್ತು.  ಮಾರ್ಚ್ 6 ರಂದು ಬೆಳಿಗ್ಗೆ 5: 11 ರ ಸುಮಾರಿಗೆ ಭೂಮಿ ಕಂಪಿಸಿದೆ.  ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ನೀಡಿದ ಮಾಹಿತಿಯ ಪ್ರಕಾರ, ಭೂಕಂಪನದ ಪ್ರಮಾಣವು ರಿಕ್ಟರ್ ಪ್ರಮಾಣದಲ್ಲಿ 3.6  ರಷ್ಟಿತ್ತು. 


ಹರ್ಯಾಣಕ್ಕೆ 60 ಲಕ್ಷ Sputnik V ಡೋಸ್ ವಿತರಿಸಲು ಆಸಕ್ತಿ ತೋರಿದ ಮಾಲ್ಟಾ ಕಂಪನಿ


2005 ರ ಭೂಕಂಪ ವಿನಾಶಕಾರಿಯಾಗಿತ್ತು.!
2005 ರಲ್ಲಿಯೂ ಇಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು.  ಜಮ್ಮು ಮತ್ತು ಕಾಶ್ಮೀರದ (Jammu and Kashmir)ದೋಡಾ ಜಿಲ್ಲೆಯ ಭಲೇಸಾ ಬಳಿ ಭೂಕಂಪದ ಕೇಂದ್ರ  ದಾಖಲಾಗಿತ್ತು. ಇದರಿಂದ  ವಾಸ್ತವಿಕ ನಿಯಂತ್ರಣ ರೇಖೆಯ (LAC) ಎರಡೂ ಬದಿಗಳಲ್ಲಿ ವಾಸಿಸುತ್ತಿದ್ದ 80,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.  ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.6 ರಷ್ಟಿತ್ತು. 


ಇದನ್ನೂ ಓದಿ : ದೆಹಲಿಯು 3ನೇ ಅಲೆಯಲ್ಲಿ ಪ್ರತಿ ದಿನಕ್ಕೆ 37 ಸಾವಿರ ಪ್ರಕರಣಗಳಿಗೆ ಸಾಕ್ಷಿಯಾಗಲಿದೆ-ಅರವಿಂದ್ ಕೇಜ್ರಿವಾಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.