ನವದೆಹಲಿ: ಭೂಕಂಪನವು ರಿಕ್ಟರ್ ಮಾಪನದಲ್ಲಿ 3.1ರಷ್ಟಿದ್ದು ಯಾವುದೇ ಸಾವು ನೋವಾದ ವರದಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.ಈ ರೀತಿಯ ಭೂಕಂಪನವು ಕಳೆದ ವರ್ಷ ನವಂಬರ್ ನಿಂದಲೂ ಉಂಟಾಗಿದೆ ಎಂದು ತಿಳಿದುಬಂದಿದೆ.



COMMERCIAL BREAK
SCROLL TO CONTINUE READING

ಬೆಳಗ್ಗೆ 10.44 ರ ವೇಳೆಗೆ ಧುಂದಲವಾಡಿ ಗ್ರಾಮದಲ್ಲಿ ಭೂಕಂಪನದ ಅನುಭವ ಉಂಟಾಗಿದೆ. ಇದೇ ಫೆಬ್ರುವರಿ 1 ರಂದು ರಿಕ್ಟರ್ ಮಾಪಕ 3.5 ದಹಾನು ಮತ್ತು ತಳಸಾರಿ ತಾಲೂಕಿನಲ್ಲಿಯೂ ಕೂಡ ಭೂಕಂಪನ ಉಂಟಾದ ಬಗ್ಗೆ ವರದಿಯಾಗಿತ್ತು. ಈ ಸಂದರ್ಭದಲ್ಲಿ ಎರಡು ವರ್ಷದ ಬಾಲಕಿ ಉರುಳಿ ಬಿದ್ದು ತಲೆಗೆ ಗಾಯವಾಗಿ ನಂತರ ಸಾವನ್ನುಪ್ಪಿದ್ದಳು.


ಈಗ ಈ ಪ್ರದೇಶದಲ್ಲಿ ಕಳೆದ ನವಂಬರ್ ತಿಂಗಳಿಂದಲೂ ಕೂಡ ನಿರಂತರವಾಗಿ ಭೂಕಂಪನ ಅನುಭವವಾಗುತ್ತಿದೆ.ಇದರಿಂದ ಜಿಲ್ಲಾ ಆಡಳಿತವು ಕೂಡ ದಹಾನು ತಾಲೂಕಿನ ಕೆಲವು ಗ್ರಾಮಗಳಲ್ಲಿ ಫೆ.12 ರಿಂದ 21 ರವರೆಗೆ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತಾಗಿ ಜಾಗೃತಿ ಮೂಡಿಸುತ್ತಿದೆ.