ನಿಕೋಬಾರ್ ದ್ವೀಪದಲ್ಲಿ ರಿಕ್ಟರ್ ಮಾಪಕ 5.0 ರಲ್ಲಿ ಭೂಕಂಪ
ಪೋರ್ಟ್ ಬ್ಲೇರ್: ಶುಕ್ರವಾರದಂದು ರಿಕ್ಟರ್ ಮಾಪಕದ 5.0 ಪ್ರಮಾಣದಲ್ಲಿ ನಿಕೋಬಾರ್ ದ್ವೀಪ ಪ್ರದೇಶ ಭೂಕಂಪನ ಸಂಭವಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಬೆಳಗ್ಗೆ 1:59 ಗಂಟೆಗೆ ಭೂಕಂಪನ ಸಂಭವಿಸಿದೆ. ಇದರ ಆಳವು ಸುಮಾರು 10 ಕಿ.ಮೀ. ಎಂದು ಹೇಳಲಾಗಿದೆ.
ಭೂಕಂಪನದ ವೇಳೆ ಯಾವುದೇ ರೀತಿಯ ಯಾವುದೇ ಹಾನಿ ಅಥವಾ ಅಪಘಾತ ಸಂಭವಿಸಿದ ಕುರಿತು ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.