ನವದೆಹಲಿ: ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೆನ್ ಗೆಹ್ಲೋಟ್ ಸೇರಿದಂತೆ ನಾಲ್ವರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಪ್ರಕರಣ ದಾಖಲಿಸಿದ ನಂತರ ಇಡಿ (ED) ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನ  ಮತ್ತು ದೆಹಲಿಯಲ್ಲಿ ಇವರ ಸ್ಥಳಗಳ ಮೇಲೆ ದಾಳಿ ನಡೆಸಿದೆ. 


COMMERCIAL BREAK
SCROLL TO CONTINUE READING

ಅಶೋಕ್ ಗೆಹ್ಲೋಟ್ (Ashok Gehlot) ಅವರ ಸಹೋದರ ಅಗ್ರಸೆನ್ ಗೆಹ್ಲೋಟ್ ಅನುಪಮ್ ಕೃಶಿ ಹೆಸರಿನಲ್ಲಿ ತಮ್ಮ ಕಂಪನಿಯನ್ನು ನಡೆಸುತ್ತಿದ್ದಾರೆ ಮತ್ತು 2007 ರಿಂದ 2009ರ ವರ್ಷಗಳಲ್ಲಿ ಕ್ಲೋರೈಡ್ ಪೊಟ್ಯಾಶ್ ಅನ್ನು ಸರ್ಕಾರದ ಅನುಮೋದನೆಯಿಲ್ಲದೆ ವಿದೇಶಕ್ಕೆ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಅನುಪಮ್ ಅಗ್ರಿಗೆ ಕ್ಲೋರೈಡ್ ಪೊಟ್ಯಾಶ್ ಮಾರಾಟ ಮಾಡಲು ಪರವಾನಗಿ ನೀಡಲಾಯಿತು ಮತ್ತು ಅದನ್ನು ಉತ್ತಮ ಬೆಳೆಗಾಗಿ ರೈತರಿಗೆ ಮಾರಾಟ ಮಾಡಲು ಅವರಿಗೆ ಅಧಿಕಾರ ನೀಡಲಾಯಿತು. ಅಗ್ರಸೆನ್ ಗೆಹ್ಲೋಟ್ ಅವರು ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ಕೈಗಾರಿಕಾ ಉಪ್ಪಿನ ಹೆಸರಿನಲ್ಲಿ ಅಕ್ರಮವಾಗಿ ರಫ್ತು ಮಾಡಿ ಇತರ ಜನರಿಗೆ ಪೊಟ್ಯಾಶ್ ಅನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಆ ಸಂದರ್ಭದಲ್ಲಿ ಭಾರತದಿಂದ ಭಾರತೀಯ ಪೊಟ್ಯಾಶ್ ಅನ್ನು ಸಾಗಿಸುವುದನ್ನು ನಿಷೇಧಿಸಲಾಗಿತ್ತು.


ಸಿಎಂ ಅಶೋಕ್ ಗೆಹ್ಲೋಟ್ ಆಪ್ತ ರಾಜೀವ್ ಆರೋರಾ ಮನೆ ಮೇಲೆ ಐಟಿ ದಾಳಿ


ಡಿಆರ್‌ಐ ಇದನ್ನು 2013ರಲ್ಲಿ ಬಹಿರಂಗಪಡಿಸಿತ್ತು ಮತ್ತು ತನಿಖೆಯ ನಂತರ ಅಗ್ರಸೆನ್ ಗೆಹ್ಲೋಟ್‌ಗೆ 7 ಕೋಟಿ ರೂ. ದಂಡ ವಿಧಿಸಲಾಗಿತ್ತು. ಈ ವರ್ಷದ ಜೂನ್‌ನಲ್ಲಿ ಡಿಆರ್‌ಐ ಅಗ್ರಸೆನ್ ಗೆಹ್ಲೋಟ್ ಮತ್ತು ಪ್ರಕರಣದ ಇತರ ನಾಲ್ವರು ಆರೋಪಿಗಳ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಸಿದೆ. ಕಾಗ್ನಿಜೆನ್ಸ್ ತೆಗೆದುಕೊಂಡು ಇಡಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ. ಈ ಹಿಂದೆ ಆದಾಯ ತೆರಿಗೆಯೂ ಅಶೋಕ್ ಗೆಹ್ಲೋಟ್‌ಗೆ ಹತ್ತಿರವಿರುವ ಜನರ ಮೇಲೆ ದಾಳಿ ನಡೆಸಿ ಹವಾಲಾ ವ್ಯವಹಾರವನ್ನು ಬಹಿರಂಗಪಡಿಸಿದೆ.