Big Breaking: ಸಿಎಂ ಅಶೋಕ್ ಗೆಹ್ಲೋಟ್ ಆಪ್ತ ರಾಜೀವ್ ಆರೋರಾ ಮನೆ ಮೇಲೆ ಐಟಿ ದಾಳಿ

ರಾಜಸ್ಥಾನ್ ಕಾಂಗ್ರೆಸ್ನ ಆರ್ಥಿಕ ನಿರ್ವಹಣೆಯಲ್ಲಿ ಉದ್ಯಮಿ ರಾಜೀವ್ ಅರೋರಾ ಮುಖ್ಯ ಪಾತ್ರ ವಹಿಸಿದ್ದಾರೆ.

Updated: Jul 13, 2020 , 11:03 AM IST
Big Breaking: ಸಿಎಂ ಅಶೋಕ್ ಗೆಹ್ಲೋಟ್ ಆಪ್ತ ರಾಜೀವ್ ಆರೋರಾ ಮನೆ ಮೇಲೆ ಐಟಿ ದಾಳಿ
Image courtesy: ANI

ಜೈಪುರ: ರಾಜಸ್ಥಾನ ರಾಜಧಾನಿ ಜೈಪುರದಲ್ಲಿ  ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತ ಉದ್ಯಮಿ ರಾಜೀವ್ ಅರೋರಾ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ರಾಜೀವ್ ಅರೋರಾ ಅವರಲ್ಲದೆ ಆದಾಯ ತೆರಿಗೆ ಇಲಾಖೆ ಅವರ ಸಹೋದ್ಯೋಗಿಗಳ ಮನೆಯ ಮೇಲೆ ದಾಳಿ ನಡೆಸಿದೆ.

ಆದಾಯ ತೆರಿಗೆ ಇಲಾಖೆಯ ತಂಡಗಳು ರಾಜೀವ್ ಅರೋರಾ ಮತ್ತು ಅವರ ಸಹೋದ್ಯೋಗಿಗಳ ನಿವಾಸ ಮತ್ತು ಕಚೇರಿಯಲ್ಲಿ  ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿವೆ ಎಂದು ಹೇಳಲಾಗಿದೆ.

ದಾಳಿ ಸಮಯದಲ್ಲಿ ಆದಾಯ ತೆರಿಗೆ ಇಲಾಖೆಯ ತಂಡಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯೊಂದಿಗೆ ರಾಜೀವ್ ಅರೋರಾ ಮತ್ತು ಅವರ ಸಹೋದ್ಯೋಗಿಗಳ ಮನೆ ಮೇಲೆ ದಾಳಿ ಮಾಡಿದೆ.

ವಿಶೇಷವೆಂದರೆ ರಾಜಸ್ಥಾನ್ ಕಾಂಗ್ರೆಸ್ನ ಆರ್ಥಿಕ ನಿರ್ವಹಣೆಯಲ್ಲಿ ಉದ್ಯಮಿ ರಾಜೀವ್ ಅರೋರಾ ಅವರಿಗೆ ದೊಡ್ಡ ಪಾತ್ರವಿದೆ. ಈಗಾಗಲೇ ರಾಜಸ್ಥಾನ ಕಾಂಗ್ರೆಸ್ ಸರ್ಕಾರದಲ್ಲಿ ಬಂಡಾಯ ಭುಗಿಲೆದ್ದಿದ್ದು ಸರ್ಕಾರ ಉಳಿಯುವುದೇ? ಉರುಳುವುದೋ? ಎಂಬ ಹಂತವನ್ನು ತಲುಪಿದೆ. ಏತನ್ಮಧ್ಯೆ ಮುಖ್ಯಮಂತ್ರಿಗಳ ಆಪ್ತರ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತ ಎಂದು ಹೇಳಲಾಗುತ್ತಿದೆ.