ಲಕ್ನೋ: ದೇಶದಾದ್ಯಂತ ಬುಧವಾರ ತ್ಯಾಗ, ಬಲಿದಾನಗಳ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಈದ್-ಉಲ್-ಅದಾ ನಿಮಿತ್ತ ಮಸೀದಿಗೆ ತೆರಳಿ ಪ್ರಾರ್ಥಿಸುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡುವ ಮೂಲಕ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದ್ದಾರೆ.


Bakrid)ದ ದಿನದಂದು ದೇಶದ ವಿವಿಧ  ಮಾರುಕಟ್ಟೆಗಳಲ್ಲಿ ಆಡುಗಳ ಜನಜಾತ್ರೆಯೇ ನಡೆದಿದೆ. ಪ್ರಮುಖವಾಗಿ ಉತ್ತರಪ್ರದೇಶದಾದ್ಯಂತ ಮಾರ್ಕೆಟ್ ಗಳಲ್ಲಿ ದುಬಾರಿ ಬೆಲೆಗೆ ಆಡುಗಳ ವ್ಯಾಪಾರ ನಡೆದಿದೆ. ರಾಜಧಾನಿ ಲಕ್ನೋ ಮತ್ತು ಬುಲಂದ್‌ಶಹರ್ನಲ್ಲಿ ಆಡುಗಳನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಲಕ್ನೋ(Lucknow)ದ ಗೋಮತಿ ನದಿ ಬಳಿಯಿರುವ ಮಾರ್ಕೆಟ್ ನಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 4.5 ಲಕ್ಷ ರೂ. ನೀಡಿ ಜೋಡಿ ಆಡುಗಳನ್ನು ಖರೀದಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: PM Kisan ಯೋಜನೆಯ 8ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿಲ್ವಾ? ಹಾಗಿದ್ರೆ ಇಲ್ಲಿ ಪರಿಶೀಲಿಸಿ


ಈ ಎರಡು ಆಡುಗಳು(Goats) 2 ವರ್ಷದವುಗಳಾಗಿದ್ದು, ಒಂದು 170 ಕೆಜಿ ತೂಗಿದರೆ, ಮತ್ತೊಂದು 150 ತೂಕವುಳ್ಳದ್ದಾಗಿದೆ. ಆಡುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಲು ಕಾರಣ ಇವು ನೋಡಲು ದಷ್ಟಪುಟ್ಟವಾಗಿ, ಆರೋಗ್ಯವಾಗಿರುವುದು. ಇವುಗಳ ಆಹಾರಕ್ಕೆ ಒಂದು ದಿನಕ್ಕೆ 600 ರೂ. ಖರ್ಚು ಮಾಡಲಾಗುತ್ತದೆ. ಪ್ರತಿದಿನ ಗೋಡಂಬಿ, ಪಿಸ್ತಾ, ಬಾದಾಮಿ, ಸಿಹಿ ತಿಂಡಿ ಮತ್ತು ಜ್ಯೂಸ್ ಅನ್ನು ಈ ಆಡುಗಳು ಸೇವಿಸುತ್ತವೆ. ಈ ಪ್ರತಿದಿನ ಇವುಗಳಿಗೆ ಶಾಂಪೂವಿನಿಂದ ಸ್ನಾನ ಮಾಡಿಸಲಾಗುತ್ತದೆ. ಅಲ್ಲದೇ ಕಾಲಕಾಲಕ್ಕೆ ಆಡುಗಳ ಆರೋಗ್ಯವನ್ನು ಪರಿಶೀಲನೆ ಮಾಡಲಾಗುತ್ತದೆ ಅಂತಾ ಮಾಲೀಕರು ತಿಳಿಸಿದ್ದಾರೆ.  


ಇದನ್ನೂ ಓದಿ: IRCTC: ಆನ್‌ಲೈನ್ ಟಿಕೆಟ್ ಬುಕ್ ಆಗಿಲ್ಲ, ಆದರೆ ಖಾತೆಯಿಂದ ಹಣ ಕಡಿತಗೊಂಡಿದೆಯೇ? ಈ ರೀತಿ ರೀಫಂಡ್ ಪಡೆಯಬಹುದು


ಕೋವಿಡ್ ಮಾರ್ಗಸೂಚಿ(COVID-19 Guidelines)ಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ಬಲಿದಾನ ಮಾಡಲಾಗುವುದು ಎಂದು ಆಡುಗಳ ನೂತನ ಮಾಲೀಕರು ಹೇಳಿದ್ದಾರೆ. ಈ ಹಿಂದೆಯೂ ಆಡುಗಳು, ಕುರಿ ಮತ್ತು ಟಗರುಗಳು ಡೊಡ್ಡ ಮೊತ್ತಕ್ಕೆ ಸೇಲ್ ಆಗಿ ಗಮನ ಸೆಳೆದಿದ್ದವು. ಜುಲೈ 21ರಂದು ಭಾರತದಲ್ಲಿ ಮುಸ್ಲಿಂ ಸಮುದಾಯದವರು ಈದ್-ಉಲ್-ಅದಾ ಅಥವಾ ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.